ETV Bharat / bharat

ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳಿಗೆ 26 ಲಕ್ಷ ಡೋಸ್​​ ಲಸಿಕೆ ಪೂರೈಕೆ - ಕೇಂದ್ರ ಆರೋಗ್ಯ ಇಲಾಖೆ

ಸುಮಾರು 2 ಕೋಟಿ ಡೋಸ್​​​ ಲಸಿಕೆ (1,97,70,555) ರಾಜ್ಯ ಮತ್ತು ಕೇಂದ್ರಾಡಳಿತಗಳ ಬಳಿ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ 25,98,760 ಡೋಸ್​ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

centre-provided-over-21-crore-covid-19-vaccine-doses-to-states-uts-so-far
ಕೇಂದ್ರ ಆರೋಗ್ಯ ಇಲಾಖೆ
author img

By

Published : May 20, 2021, 9:13 PM IST

ನವದೆಹಲಿ: ಪ್ರಸ್ತುತ ಸುಮಾರು 2 ಕೋಟಿ ಡೋಸ್​​ಗಳಷ್ಟು ಕೊರೊನಾ ವ್ಯಾಕ್ಸಿನ್ ರಾಜ್ಯಗಳ ಬಳಿ​​ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತೆ 26 ಲಕ್ಷ ಡೋಸ್​​ಗಳಷ್ಟು ಲಸಿಕೆ ಪೂರೈಕೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಉಚಿತವಾಗಿ ಮತ್ತು ನೇರವಾಗಿ ಲಸಿಕೆ ಪೂರೈಕೆ ವೈವಸ್ಥೆಯ ಅಡಿಯಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 21 ಕೋಟಿಗೂ ಅಧಿಕ ಡೋಸ್​ಗಳಷ್ಟು (21,07,31,130) ಕೋವಿಡ್​​​ ಲಸಿಕೆ ನೀಡಿದೆ. ಈ ಪೈಕಿ ವ್ಯರ್ಥವಾಗಿರುವ ಡೋಸ್​​ಗಳ ಸಹಿತ ಒಟ್ಟು 19,09,60,575 ಡೋಸ್​ಗಳಷ್ಟು ಲಸಿಕೆ ಬಳಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈಗಾಗಲೇ ಸುಮಾರು 2 ಕೋಟಿ ಡೋಸ್​​​ ಲಸಿಕೆ (1,97,70,555) ರಾಜ್ಯ ಮತ್ತು ಕೇಂದ್ರಾಡಳಿತಗಳ ಬಳಿ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ 25,98,760 ಡೋಸ್​ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗುವುದು ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.