ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಇದರ ವಿರುದ್ಧದ ಹೋರಾಟ ಮುಂದುವರೆದಿದೆ. ಈಗಾಗಲೇ ಫ್ರಂಟ್ಲೈನ್ ಕಾರ್ಯಕರ್ತರು ಸೇರಿ ಜನಸಾಮಾನ್ಯರಿಗೂ ಲಸಿಕೆ ನೀಡಲಾಗ್ತಿದೆ. ಇದರ ಮಧ್ಯೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಪತ್ರ ಬರೆದಿದೆ.
ಬ್ಯಾಂಕ್, ವಿಮಾ ಕಂಪನಿ, ವ್ಯಾಪಾರ ಪ್ರತಿನಿಧಿಗಳು ಮತ್ತು ಇತರೆ ಹಣಕಾಸು ಸೇವಾ ಪೂರೈಕೆದಾರ ಸಿಬ್ಬಂದಿಗೆ ಲಸಿಕೆ ನೀಡಲು ಆದ್ಯತೆ ನೀಡಬೇಕು ಎಂದು ತಿಳಿಸಿದೆ. ಕೇಂದ್ರ ಹಣಕಾಸು ಸಚಿವಾಲಯ ರಾಜ್ಯ ಸರ್ಕಾರಕ್ಕೆ ಈ ಪತ್ರ ಬರೆದಿದ್ದು, ಈ ಕಷ್ಟದ ಸಮಯದಲ್ಲೂ ಅವರು ಹೆಚ್ಚಿನ ಅಪಾಯಕ್ಕೊಳಗಾಗಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ಪಂಜಾಬ್ನ 23ನೇ ಜಿಲ್ಲೆಯಾಗಿ ಮಲೆರ್ಕೋಟ್ಲಾ ಘೋಷಣೆ.. ₹500 ಕೋಟಿ ಅನುದಾನ ಘೋಷಿಸಿದ ಸಿಎಂ
ಕೋವಿಡ್ ಸವಾಲಿನ ಸಮಯದಲ್ಲಿ ಅಗತ್ಯವಿರುವ ಜನರಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆ ನಿರಂತರವಾಗಿ ತಲುಪಿಸುವಲ್ಲಿ ಸಿಬ್ಬಂದಿ ಕಾರ್ಯಮಗ್ನರಾಗಿದ್ದಾರೆ ಎಂದು ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಡೆಬಾಶಿಶ್ ಪಾಂಡಾ ತಿಳಿಸಿದ್ದಾರೆ. ಈ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕರು ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಆದ್ಯತೆ ಮೇರೆಗೆ ಲಸಿಕೆ ಹಾಕುವುದು ಸಾರ್ವಜನಿಕ ಸೇವೆಯ ವಿತರಣೆಯಲ್ಲಿ ಅಪಾಯ ಕಡಿಮೆ ಮಾಡುತ್ತದೆ ಎಂದಿದ್ದಾರೆ.