ETV Bharat / bharat

9 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಡೆಂಘೀ ನಿಯಂತ್ರಿಸಲು ಕೇಂದ್ರದ ತಂಡ - ಡೆಂಘೀ ನಿಯಂತ್ರಿಸಲು ತಜ್ಞರ ತಂಡ ಸುದ್ದಿ

ಪ್ರಸಕ್ತ ವರ್ಷದಲ್ಲಿ ಹದಿನೈದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಗರಿಷ್ಠ ಪ್ರಕರಣಗಳನ್ನು ವರದಿ ಮಾಡುತ್ತಿವೆ. ಅಕ್ಟೋಬರ್ 31ರವರೆಗೆ ದೇಶದ ಒಟ್ಟು ಡೆಂಘೀ ಪ್ರಕರಣಗಳಲ್ಲಿ ಶೇ.86ರಷ್ಟು ಈ ರಾಜ್ಯಗಳದ್ದಾಗಿವೆ ಎಂದು ಅದು ಹೇಳಿದೆ..

ಡೆಂಘೀ ನಿಯಂತ್ರಿಸಲು ತಜ್ಞರ ತಂಡ
ಡೆಂಘೀ ನಿಯಂತ್ರಿಸಲು ತಜ್ಞರ ತಂಡ
author img

By

Published : Nov 3, 2021, 1:05 PM IST

ನವದೆಹಲಿ : ಹೆಚ್ಚಿನ ಸಂಖ್ಯೆಯ ಡೆಂಘೀ ಪ್ರಕರಣಗಳನ್ನು ವರದಿ ಮಾಡುತ್ತಿರುವ ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ತಜ್ಞರ ತಂಡಗಳನ್ನು ಕಳುಹಿಸಿದೆ. ರೋಗದ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಕ್ರಮಗಳಲ್ಲಿ ಅವರನ್ನು ಬೆಂಬಲಿಸಲು ತಂಡವನ್ನು ಕಳುಹಿಸಲಾಗಿದೆ.

ಸೋಮವಾರ ದೆಹಲಿಯಲ್ಲಿ ಡೆಂಘೀ ಪರಿಸ್ಥಿತಿಯ ಪರಿಶೀಲನಾ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿ ಈ ತಂಡವನ್ನು ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ತಿಳಿಸಿದೆ.

ಹರಿಯಾಣ, ಕೇರಳ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿ ಡೆಂಘೀ ಪ್ರಕರಣಗಳು ಹೆಚ್ಚಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು ನೀಡುವಂತೆ ಮಾಂಡವಿಯಾ ಅವರು ಸಚಿವಾಲಯಕ್ಕೆ ಸೂಚಿಸಿದ್ದಾರೆ. ದೇಶಾದ್ಯಂತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 1,16,991 ಡೆಂಘೀ ಪ್ರಕರಣ ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಹೇಳಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಕೆಲವು ರಾಜ್ಯಗಳಲ್ಲಿ ಗಣನೀಯವಾಗಿ ಹೆಚ್ಚಿನ ಸಂಖ್ಯೆಯ ಪ್ರಕರಣ ವರದಿಯಾಗಿವೆ ಎಂದು ಹೇಳಿಕೆ ತಿಳಿಸಿದೆ. ಪ್ರಸಕ್ತ ವರ್ಷದಲ್ಲಿ ಹದಿನೈದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಗರಿಷ್ಠ ಪ್ರಕರಣಗಳನ್ನು ವರದಿ ಮಾಡುತ್ತಿವೆ. ಅಕ್ಟೋಬರ್ 31ರವರೆಗೆ ದೇಶದ ಒಟ್ಟು ಡೆಂಘೀ ಪ್ರಕರಣಗಳಲ್ಲಿ ಶೇ.86ರಷ್ಟು ಈ ರಾಜ್ಯಗಳದ್ದಾಗಿವೆ ಎಂದು ಅದು ಹೇಳಿದೆ.

ಪರಿಣಾಮಕಾರಿ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯನ್ನು ಹೆಚ್ಚಿಸಲು ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ಮಾಡಲು ಮತ್ತು ಬೆಂಬಲಿಸಲು ತಂಡಗಳನ್ನು ನಿಯೋಜಿಸಲಾಗಿದೆ. ವೆಕ್ಟರ್ ನಿಯಂತ್ರಣದ ಸ್ಥಿತಿ, ಕಿಟ್‌ಗಳು ಮತ್ತು ಔಷಧಿಗಳ ಲಭ್ಯತೆ, ಆರಂಭಿಕ ಪತ್ತೆ, ಲಭ್ಯತೆ ಮತ್ತು ಕೀಟನಾಶಕಗಳ ಬಳಕೆ, ಲಾರ್ವಾ ವಿರೋಧಿ ಮತ್ತು ವಯಸ್ಕರ ರೋಗನಿರೋಧಕ ನಿಯಂತ್ರಣ ಕ್ರಮಗಳ ಸ್ಥಿತಿ, ಇತ್ಯಾದಿಗಳ ಬಗ್ಗೆ ವರದಿ ಮಾಡಲು ಅವರನ್ನು ಕೇಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.