ನವದೆಹಲಿ: ದೇಶದಲ್ಲಿ ಆನ್ಲೈನ್ ಅಥವಾ ಸೈಬರ್ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಇದನ್ನು ತಡೆಗಟ್ಟಲು ಮುಂದಾಗಿರುವ ಕೇಂದ್ರ ಸರ್ಕಾರವು ರಾಷ್ಟ್ರೀಯ ಸಹಾಯವಾಣಿ ಒದಗಿಸಿದೆ. ಸೈಬರ್ ವಂಚನೆಗೊಳಗಾಗಿ ಕಷ್ಟಪಟ್ಟು ಸಂಪಾದಿಸಿದ ಹಣ ಕಳೆದುಕೊಂಡವರು ಅಥವಾ ಹುಸಿ ಕರೆಗಳು ಬರುತ್ತಿದ್ದಂತೆಯೇ ಜನರು ಈ ಸಂಬಂಧ ವರದಿ ಮಾಡಲು ವೇದಿಕೆ ಕಲ್ಪಿಸಿದೆ.
ಸುರಕ್ಷಿತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಒದಗಿಸುವ ನರೇಂದ್ರ ಮೋದಿ ಸರ್ಕಾರದ ಬದ್ಧತೆಯನ್ನು ಬಲಪಡಿಸುವ ಸಲುವಾಗಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ರಾಷ್ಟ್ರೀಯ ಸಹಾಯವಾಣಿ 155260 ಅನ್ನು ಕಾರ್ಯರೂಪಕ್ಕೆ ತಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಎಲ್ಲಾ ಪ್ರಮುಖ ಬ್ಯಾಂಕುಗಳ ಸಹಕಾರದೊಂದಿಗೆ ಈ ವೇದಿಕೆನ್ನು ಗೃಹ ಸಚಿವಾಲಯ ಸ್ಥಾಪಿಸಿದೆ.
2021ರ ಏಪ್ರಿಲ್ನಲ್ಲೇ ಸಹಾಯವಾಣಿಯನ್ನು ಬಿಡುಗಡೆ ಮಾಡಿದ್ದು, ಛತ್ತೀಸ್ಗಢ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಇದೀಗ ಈ ಸೌಲಭ್ಯವನ್ನು ದೇಶಾದ್ಯಂತ ವಿಸ್ತರಿಸಲಾಗಿದೆ. ಎರಡು ತಿಂಗಳ ಅವಧಿಯಲ್ಲಿ ಈ ರಾಜ್ಯಗಳ ಜನರಿಂದ 1.85 ಕೋಟಿ ರೂ.ಗಿಂತಲೂ ಹೆಚ್ಚು ಹಣ ವಂಚಕರ ಕೈ ಸೇರದಂತೆ ತಡೆಗಟ್ಟಲಾಗಿದೆ.
-
Reinforcing commitment of Modi Govt. to provide safe & secure digital payments eco-system, MHA under leadership of Union Home Minister Shri Amit Shah operationalises national Helpline 155260 and Reporting Platform.
— Spokesperson, Ministry of Home Affairs (@PIBHomeAffairs) June 17, 2021 " class="align-text-top noRightClick twitterSection" data="
Press release-https://t.co/PP7k3k7XaD
">Reinforcing commitment of Modi Govt. to provide safe & secure digital payments eco-system, MHA under leadership of Union Home Minister Shri Amit Shah operationalises national Helpline 155260 and Reporting Platform.
— Spokesperson, Ministry of Home Affairs (@PIBHomeAffairs) June 17, 2021
Press release-https://t.co/PP7k3k7XaDReinforcing commitment of Modi Govt. to provide safe & secure digital payments eco-system, MHA under leadership of Union Home Minister Shri Amit Shah operationalises national Helpline 155260 and Reporting Platform.
— Spokesperson, Ministry of Home Affairs (@PIBHomeAffairs) June 17, 2021
Press release-https://t.co/PP7k3k7XaD
ನೀವು 155260 ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದರೆ ಸೈಬರ್ ವಂಚನೆಗೊಳಗಾಗಿ ಈಗಾಗಲೇ ಸಾಕಷ್ಟು ಹಣ ಕಳೆದುಕೊಂಡವರು ಇನ್ನಷ್ಟು ಹಣ ಕಳೆದುಕೊಳ್ಳುವುದನ್ನು ತಪ್ಪಿಸಬಹುದು. ಇನ್ನು ಹುಸಿ ಕರೆ ಎಂದು ಅನುಮಾನ ಬಂದವರು ಕೂಡಲೇ ಇಲ್ಲಿಗೆ ತಿಳಿಸಿದರೆ ಮುಂದಾಗುವ ಆರ್ಥಿಕ ನಷ್ಟವನ್ನು ತಪ್ಪಿಸಿ, ವಂಚಕರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
ಹೀಗಿರಲಿದೆ ಕಾರ್ಯಾಚರಣೆ
- ಸೈಬರ್ ವಂಚನೆ ಸಂತ್ರಸ್ತರು 155260 ಸಹಾಯವಾಣಿಗೆ ಕರೆ ಮಾಡಿ ತಮ್ಮ ದೂರನ್ನು ನೀಡಬೇಕು.
- ಈ ಸಹಾಯವಾಣಿಯನ್ನು ಆಯಾ ರಾಜ್ಯಗಳ ಪೊಲೀಸ್ ಇಲಾಖೆ ಆಪರೇಟರ್ ಮಾಡುತ್ತವೆ.
- ಪೊಲೀಸ್ ಆಪರೇಟರ್ಗಳು ನಿಮ್ಮ ಆನ್ಲೈನ್ ವಹಿವಾಟಿನ ವಿವರ ಮತ್ತು ಕರೆ ಮಾಡಿದವರ ವೈಯಕ್ತಿಕ ಮಾಹಿತಿಯನ್ನು ಬರೆದು ಟಿಕೆಟ್ ರೂಪದಲ್ಲಿರಿಸುತ್ತಾರೆ.
- ಈ ಟಿಕೆಟ್ ಅನ್ನು ಸಂಬಂಧಪಟ್ಟ ಬ್ಯಾಂಕ್ಗಳಿಗೆ (ಯಾವ ಬ್ಯಾಂಕ್ನಿಂದ ನಿಮ್ಮ ಹಣ ವರ್ಗಾವಣೆ ಆಗಿದೆಯೋ ಆ ಬ್ಯಾಂಕ್ಗಳಿಗೆ) ನೀಡುತ್ತಾರೆ.
- ದೂರು ಸಂಬಂಧ ಸಂತ್ರಸ್ತರ ಮೊಬೈಲ್ ಸಂಖ್ಯೆಗೆ ದೂರಿನ ಸ್ವೀಕೃತಿ ಸಂಖ್ಯೆಯ ಸಂದೇಶವನ್ನೂ ಕಳುಹಿಸುತ್ತಾರೆ.
- 24 ಗಂಟೆಗಳೊಳಗಾಗಿ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (https://cybercrime.gov.in/) ನಲ್ಲಿ ವಂಚನೆಯ ಸಂಪೂರ್ಣ ವಿವರಗಳನ್ನು ಸಲ್ಲಿಸಲಾಗುತ್ತದೆ.
- ವಂಚಿಸಿದ ಹಣ ಇನ್ನೂ ಲಭ್ಯವಿದ್ದರೆ ಬ್ಯಾಂಕ್ ಅದನ್ನು ತಡೆಹಿಡಿಯುತ್ತದೆ. ಆಗ ವಂಚಕನು ಆ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
- ಒಂದು ವೇಳೆ ವಂಚನೆಗೊಳಗಾದ ಹಣವು ಮತ್ತೊಂದು ಬ್ಯಾಂಕ್‌ಗೆ ವರ್ಗಾವಣೆಯಾಗಿದ್ದರೆ ಈ ಬ್ಯಾಂಕ್‌ಗೆ ಸೂಚನೆ ನೀಡಿ ವಂಚಕ ಹಣ ಪಡೆಯದಂತೆ ತಡೆಗಟ್ಟಲಾಗುತ್ತದೆ.
- ಹೀಗೆ ವಂಚಕರ ಕೈಗೆ ಹಣ ತಲುಪದಂತೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಲಾಗುತ್ತದೆ.
- ಈಗಾಗಲೆ ವಂಚಕ ಹಣ ಪಡೆದಿದ್ದರೆ ಕಾನೂನು ಕ್ರಮಗಳ ಮೂಲಕ ಪ್ರಕರಣ ಭೇದಿಸಲಾಗುತ್ತದೆ.