ETV Bharat / bharat

ಉದ್ಯೋಗಿಗಳ ಪಿಎಫ್​ ಬಡ್ಡಿದರ ಕಡಿತ ನಿರ್ಧಾರ ಈಗಿನ ಅಗತ್ಯ: ಕೇಂದ್ರ ಸರ್ಕಾರ - ಇಪಿಎಫ್​ಒ ಬಡ್ಡಿದರ ಕಡಿತಕ್ಕೆ ಕೇಂದ್ರ ಬೆಂಬಲ

ಇಪಿಎಫ್​ಒ ಕೇಂದ್ರೀಯ ಮಂಡಳಿಯು ಉದ್ಯೋಗಿಗಳ ಬಡ್ಡಿದರ ಕಡಿತ ಮಾಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಜೈ ಎಂದಿದೆ. ಅಲ್ಲದೇ, 40 ವರ್ಷಗಳ ಬಳಿಕ ಬಡ್ಡಿದರ ಪರಿಷ್ಕರಣೆ ಮಾಡಲಾಗುತ್ತಿದೆ. ಇದು ಈಗಿನ ಅಗತ್ಯ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

central-government
ಕೇಂದ್ರ ಸರ್ಕಾರ
author img

By

Published : Mar 21, 2022, 9:45 PM IST

ನವದೆಹಲಿ: ಭವಿಷ್ಯ ನಿಧಿಯ ಮೇಲಿನ ಬಡ್ಡಿದರವನ್ನು ಕಡಿತ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಅಲ್ಲದೇ, ಇತರೆ ಸಣ್ಣ ಉಳಿತಾಯ ಯೋಜನೆಗಳು ನೀಡುವ ಬಡ್ಡಿದರಕ್ಕಿಂತ ಉದ್ಯೋಗಿಗಳ ಭವಿಷ್ಯ ನಿಧಿಗೆ ನೀಡಲಾಗುವ ಬಡ್ಡಿದರ ಉತ್ತಮವಾಗಿದೆ ಎಂದು ಹೇಳಿದೆ.

ಈ ಬಗ್ಗೆ ರಾಜ್ಯಸಭೆಯಲ್ಲಿ ವಿನಿಯೋಗ ಮಸೂದೆಗಳ ಮೇಲೆ ನಡೆದ ಚರ್ಚೆಯಲ್ಲಿ ಉತ್ತರ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ನಿಗದಿ ಮಾಡುವ ಅಧಿಕಾರ ಇಪಿಎಫ್‌ಒ ಕೇಂದ್ರೀಯ ಮಂಡಳಿಗೆ ಇದೆ. ಅದು ಆಯಾ ಕಾಲಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ. ಈಗಿರುವ ಶೇ.8.4 ರಿಂದ 8.1ಕ್ಕೆ ಇಳಿಸುವ ನಿರ್ಧಾರ ಮಂಡಳಿಗೆ ಸೇರಿದ್ದು. ಅಲ್ಲದೇ, ಇದು ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ.

  • EPFO has a central board which is the one that takes the call on what rate has to be given for them and they have not changed it for quite some time. They have changed it now, from 8.4% it has come down to 8.1%: Union Finance Minister Nirmala Sitharaman in Rajya Sabha pic.twitter.com/tZzq5kJW2i

    — ANI (@ANI) March 21, 2022 " class="align-text-top noRightClick twitterSection" data=" ">

ಇಪಿಎಫ್‌ಒಗಿಂತಲೂ ಸುಕನ್ಯಾ ಸಮೃದ್ಧಿ ಯೋಜನೆ (ಶೇ.7.6), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಶೇ. 7.4) ಮತ್ತು ಪಿಪಿಎಫ್ (ಶೇ.7.1) ಸೇರಿದಂತೆ ಇತರ ಯೋಜನೆಗಳು ನೀಡುವ ಬಡ್ಡಿ ದರಗಳು ತೀರಾ ಕಡಿಮೆ ಇದೆ. ಇವುಗಳಿಗೆ ಹೋಲಿಸಿದರೆ ಇಪಿಎಫ್‌ಒ ಬಡ್ಡಿದರ (ಶೇ.8.1) ಹೆಚ್ಚಿದೆ ಎಂದರು.

ಇಪಿಎಫ್ಒಗೆ ನೀಡಲಾಗುತ್ತಿದ್ದ ಬಡ್ಡಿ ದರಗಳನ್ನು ಕಳೆದ 40 ವರ್ಷಗಳಿಂದ ಪರಿಷ್ಕರಣೆ ಮಾಡಲಾಗಿಲ್ಲ. ಕಡಿತದ ಪ್ರಸ್ತಾಪ ಈಗಿನ ಅಗತ್ಯತೆ ಅನುಗುಣವಾಗಿ ವಾಸ್ತವವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 8.4 ರಿಂದ ಶೇ 8.1ಕ್ಕೆ ಕಡಿತಗೊಳಿಸಲು ಇಪಿಎಫ್‌ಒ ಪ್ರಸ್ತಾಪಿಸಿದೆ.

ಓದಿ: ಬಡತನದ ಬೇಗೆಯಲ್ಲಿ ಗಂಡು ಮಗು ಹುಟ್ಟದ ಕೋಪ: ಹೆಣ್ಣು ಹಸುಳೆ ಕೊಲೆಗೈದು ಒಲೆಗೆಸೆದ ತಾಯಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.