ನವದೆಹಲಿ: ಕೋವಿಡ್ ವಿಪತ್ತಿನ ವಿಚಾರದಲ್ಲಿ ವಿಪಕ್ಷಗಳು ಜವಾಬ್ದಾರಿಯಿಂದ ವರ್ತಿಸಿವೆ. ಹತ್ತು ದಿನಗಳ ಹಿಂದೆ, ಇಡೀ ದೇಶದಲ್ಲಿ ಎಲ್ಲಾ ವೈದ್ಯಕೀಯ ಕೇಂದ್ರಗಳಿಗೆ ಆಮ್ಲಜನಕ ಒದಗಿಸುವುದು ಮತ್ತು ಉಚಿತ ಲಸಿಕೆಯನ್ನು ಒದಗಿಸುವಂತೆ ವಿವಿಧ ವಿಪಕ್ಷಗಳ ಮುಖಂಡರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು. ಈ ಮನವಿಗೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ನಾಲ್ವರು ಮುಖ್ಯಮಂತ್ರಿಗಳು ಮತ್ತು 12 ವಿಪಕ್ಷಗಳು ಜಂಟಿಯಾಗಿ ಪುನಃ ಪತ್ರ ಬರೆದಿದ್ದು, ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿವೆ.
ದೇಶದ ಎಲ್ಲಾ ನಾಗರಿಕರಿಗೂ ಉಚಿತವಾಗಿ ಲಸಿಕೆ ಒದಗಿಸಲು ರೂ. 35,000 ಕೋಟಿಯನ್ನು ತಕ್ಷಣ ಬಿಡುಗಡೆ ಮಾಡುವುದರ ಜೊತೆಗೆ, ವೈರಸ್ ಹರಡುವುದನ್ನು ತಡೆಯುವಲ್ಲೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ತೀವ್ರ ಆತಂಕಕಾರಿ ಸನ್ನಿವೇಶದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಜಂಟಿಯಾಗಿ ಮನವಿ ಸಲ್ಲಿಕೆ ಮಾಡಲಾಗಿದೆ.
ಪ್ರಮುಖ ಲಸಿಕೆ ಉತ್ಪಾದಕ ಎಂದು ಹೆಸರಾದ ದೇಶದಲ್ಲಿ ಲಸಿಕೆಯ ಕೊರತೆ ಎದುರಾಗಿರುವುದು ಯೋಜನೆ ಕೊರತೆಯ ಪರಿಣಾಮ ಎಂಬುದು ಸ್ಪಷ್ಟವಾಗಿದೆ. ಇಡೀ ದೇಶದಲ್ಲಿ ಉಚಿತ ಲಸಿಕೆ ಯೋಜನೆಯನ್ನು ಕಳೆದ ಹಲವು ದಶಕಗಳಿಂದಲೂ ಜಾರಿಗೊಳಿಸಲಾಗುತ್ತಿದ್ದರೂ, ಕೋವಿಡ್ ಲಸಿಕೆಯನ್ನು ಒದಗಿಸಲು ಉಚಿತ ಲಸಿಕೆ ತಾಂತ್ರಿಕತೆಯನ್ನು ಯಾಕೆ ಬಳಸಿಕೊಂಡಿಲ್ಲ ಎಂದು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ತೌಕ್ತೆ ಚಂಡಮಾರುತಕ್ಕೆ 8 ಮಂದಿ ಬಲಿ
ಸಾಂಕ್ರಾಮಿಕ ರೋಗದಿಂದಾಗಿ ಬೃಹತ್ ಪ್ರಮಾಣದಲ್ಲಿ ಆರ್ಥಿಕ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ದೇಶದಲ್ಲಿ ಬಡವರ ಪರಿಸ್ಥಿತಿಯ ಬಗ್ಗೆಯೂ ಕೋರ್ಟ್ ಪ್ರಶ್ನೆ ಮಾಡಿದೆ. ಈ ಹಿನ್ನೆಲೆಯಲ್ಲಿ, ಜೀವ ರಕ್ಷಣೆಗಾಗಿ ವಿಪಕ್ಷಗಳು ನೀಡಿರುವ ಕರೆಗೆ ಶೇಕಡಾ ನೂರರಷ್ಟು ಬೆಂಬಲವಿದೆ.
ಜುಲೈವರೆಗೂ ಲಸಿಕೆ ಕೊರತೆ ದೇಶವನ್ನು ಬಾಧಿಸಲಿದೆ ಎಂಬ ಅಂದಾಜು ಒಂದು ಕಡೆಯಾದರೆ, ಆಮ್ಲಜನಕ ಮತ್ತು ಇತರ ಜೀವ ರಕ್ಷಕ ಔಷಧಗಳ ಕೊರತೆ ಇನ್ನೊಂದು ಕಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಬೆಂಬಲ ನೀಡುವ ಮೂಲಕ ಸನ್ನಿವೇಶವನ್ನು ಸುಧಾರಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ.
ಲಾಕ್ಡೌನ್ಗೆ ಐಸಿಎಂಆರ್ ಶಿಫಾರಸು..
ಸುಮಾರು 14 ತಿಂಗಳುಗಳ ನಂತರ ಮೊದಲ ಬಾರಿಗೆ, ಕೆಲವು ದಿನಗಳ ಹಿಂದೆ ಇಂಗ್ಲೆಂಡ್‌ನಲ್ಲಿ ಕೋವಿಡ್‌ನಿಂದ ಯಾರೂ ಸಾವನ್ನಪ್ಪಿಲ್ಲ ಸ್ಥಿತಿಗೆ ತಲುಪಿದೆ. ಹೊಸ ಪ್ರಕರಣಗಳ ಸಂಖ್ಯೆಯೂ ಗಮನಾರ್ಹವಾಗಿ ಇಳಿಕೆಯಾಗಿದೆ. ಭಾರತದಲ್ಲಿ 13 ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಸಂಚಿತ 2.37 ಕೋಟಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಮತ್ತು 2.6 ಲಕ್ಷ ಮರಣ ದರದಿಂದಾಗಿ, ಭಾರತದ ನಿತ್ಯದ ಕೋವಿಡ್ ಮರಣ ದರವು 4,000 ಕ್ಕಿಂತ ಕೆಳಕ್ಕೆ ಇಳಿಯುತ್ತಿಲ್ಲ. ಈ ಆಘಾತಕಾರಿ ಸನ್ನಿವೇಶದಲ್ಲಿ, ವೈದ್ಯಕೀಯ ಸಂಶೋಧನೆಯ ಭಾರತೀಯ ಮಂಡಳಿಯು ಶೇ. 10 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾದ 530 ಜಿಲ್ಲೆಗಳಲ್ಲಿ 8 ವಾರದ ಲಾಕ್‌ಡೌನ್ ಅನ್ನು ಶಿಫಾರಸು ಮಾಡಿದೆ.
ಆರ್ಥಿಕ ತಜ್ಞರ ಶಿಫಾರಸುಗಳೇನು..?
ಇನ್ನೂ ಎರಡು ತಿಂಗಳುಗಳವರೆಗೆ ಲಾಕ್‌ಡೌನ್ ಅನ್ನು ವಿಧಿಸಿದರೆ, ಬಡ ಕಾರ್ಮಿಕರು ಮತ್ತು ಕೂಲಿಗಳ ಜೀವನ ನಿರ್ವಹಣೆ ಸಂಕಷ್ಟಕ್ಕೀಡಾಗಲಿದೆ. ಇವರು ಈಗಾಗಲೇ ಕಳೆದ ವರ್ಷದ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ.
ಭಾರತವು ಪ್ರಮುಖ ಜೀವನಾಂಶ ವಿಪತ್ತನ್ನು ಎದುರಿಸುತ್ತಿದೆ ಎಂದು ಜನಪ್ರಿಯ ಭಾರತೀಯ ಆರ್ಥಿಕ ತಜ್ಞ ಜೀನ್ ಡ್ರೀಝ್ ಹೇಳಿದ್ದಾರೆ. ಸಾಂಕ್ರಾಮಿಕ ರೋಗದಿಂದಾಗಿ ಕೋಟ್ಯಂತರ ಜನರ ಗಳಿಕೆಯು ಖರ್ಚಾಗಿರುವುದನ್ನು ಗಮನಿಸಿ, ಈ ಸಮಸ್ಯೆಯ ಪರಿಹಾರಕ್ಕೆ ಜೀನ್ ಡ್ರೀಜ್ ಕೆಲವು ಪರಿಹಾರಗಳನ್ನು ಶಿಫಾರಸು ಮಾಡಿದ್ದಾರೆ. ಸರ್ಕಾರ ಈ ಹಿಂದೆ ಪ್ರಕಟಿಸಿದ ಹಲವು ಪರಿಹಾರ ಕ್ರಮಗಳನ್ನು ಇನ್ನಷ್ಟು ವಿಸ್ತರಿಸುವುದರ ಜೊತೆಗೆ, ಬಡವರು ಮತ್ತು ಅಗತ್ಯವಿದ್ದವರಿಗೆ ಹಣ ವರ್ಗಾವಣೆ ಮಾಡುವಂತೆಯೂ ಅವರು ಶಿಫಾರಸು ಮಾಡಿದ್ದಾರೆ.
ಅಮೆರಿಕದಲ್ಲಿ ಬೈಡೆನ್ ಸರ್ಕಾರವು ತನ್ನ ದೇಶದ ಜನರಿಗೆ 138 ಲಕ್ಷ ಕೋಟಿ ಉತ್ತೇಜನ ಪ್ಯಾಕೇಜ್ ಅನ್ನು ಘೋಷಣೆ ಮಾಡಲಾಗಿದ್ದು, ಇದರ ಅಡಿಯಲ್ಲಿ ಜನರಿಗೆ ನೇರ ಹಣಕಾಸು ಪ್ರಯೋಜನವನ್ನು ಒದಗಿಸಲಾಗುತ್ತದೆ ಮತ್ತು ನಿರುದ್ಯೋಗ ಭತ್ಯೆ ಹಾಗೂ ಸಣ್ಣ ಉದ್ಯಮಕ್ಕೆ ನೆರವು ಒದಗಿಸಲಾಗುತ್ತಿದೆ.
ವಲಸೆ ಕಾರ್ಮಿಕರಿಗೆ ಪಡಿತರ ಒದಗಿಸುವಂತೆ ಕೇಂದ್ರ ಸರ್ಕಾರ, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಬಡವರು ಮತ್ತು ಕಡಿಮೆ ಆದಾಯ ಹೊಂದಿರುವ ಸಮುದಾಯಗಳಿಗೆ ಉಚಿತ ಪಡಿತರವನ್ನು ಒದಗಿಸುವ ಮೂಲಕ ಹಸಿವಿನಿಂದ ಜನರು ಸಾವನ್ನಪ್ಪುವುದನ್ನು ತಪ್ಪಿಸುವ ಜವಾಬ್ದಾರಿಯನ್ನು ಸರ್ಕಾರಗಳು ವಹಿಸಿಕೊಳ್ಳಬೇಕು. ದೇಶದ ಆಹಾರ ಮತ್ತು ಧಾನ್ಯ ಸಂಗ್ರಹವನ್ನು ಬಳಸಿಕೊಂಡು ಕೋಟ್ಯಂತರ ಬಡವರ ಹಸಿವನ್ನು ನಿವಾರಿಸಬೇಕಿದೆ.