ವಾರಾಣಸಿ( ಉತ್ತರಪ್ರದೇಶ): ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ )ಅಧಿಕಾರಿಗಳ ತಂಡವು ಶುಕ್ರವಾರ ಪ್ರೇಮಚಂದ್ರನಗರ ಕಾಲೋನಿಯಲ್ಲಿರುವ ಗುಟ್ಕಾ ವ್ಯಾಪಾರಿಯೊಬ್ಬರ ಮನೆ ಮೇಲೆ ಏಕಾಏಕಿ ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ದೆಹಲಿ, ಪಂಜಾಬ್ ಸೇರಿದಂತೆ ಇತರ ರಾಜ್ಯಗಳಿಂದ ಬಂದ CGST ಅಧಿಕಾರಿಗಳ ತಂಡ, ದಿಢೀರ್ ದಾಳಿ ನಡೆಸಿ ನಿನ್ನೆ ತಡರಾತ್ರಿವರೆಗೂ ಅಗತ್ಯ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದೆ. ದಾಳಿ ನಡೆಸಿರುವ ಉದ್ಯಮಿ, ಖಾಸಗಿ ಶಾಲೆ ನಡೆಸುವ ಫ್ರಾಂಚೈಸಿಯಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಜಿಎಸ್‌ಟಿಯ ಮಹಾನಿರ್ದೇಶಕರ ಸೂಚನೆ ಮೇರೆಗೆ ತನಿಖಾ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದು, ಗುಟ್ಕಾ ದಂಧೆಕೋರರು ಹಾಗೂ ಇತರ ಉದ್ಯಮಿಗಳಲ್ಲಿ ಸಂಚಲನ ಮೂಡಿಸಿದೆ.
ಓದಿ: PM Security Breach: ಪ್ರಧಾನಿಗೆ ಭದ್ರತಾ ಲೋಪವಾಗಿದ್ದ ಫಿರೋಜ್ಪುರದಲ್ಲಿ ಪಾಕ್ ಬೋಟ್ ಜಪ್ತಿ