ETV Bharat / bharat

ಕಳೆದ 9 ವರ್ಷಗಳಲ್ಲಿ ಕೇಂದ್ರ ತನಿಖಾ ದಳಗಳಿಂದ 27ಪಟ್ಟು ಹೆಚ್ಚಿದ ದಾಳಿ.. ಇವು ದ್ವೇಷದ ದಾಳಿಗಳೆಂದ ಪ್ರತಿಪಕ್ಷಗಳು - ಬಿಜೆಪಿ ಸೇರ್ಪಡೆಯಾದವರ ಮೇಲೆ ಸಾಪ್ಟ್​ ಕಾರ್ನರ್​​

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಈ ಅವಧಿಯಲ್ಲಿ ದೊಡ್ಡ ಪ್ರಮಾಣದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. 2014 ಮತ್ತು 2022 ರ ನಡುವೆ, ಇಡಿ 99,356 ಕೋಟಿ ರೂಪಾಯಿ ಮೊತ್ತದ ಅಕ್ರಮ ಆದಾಯವನ್ನು ಜಪ್ತಿ ಮಾಡಿದೆ. 888 ಪ್ರಕರಣಗಳಲ್ಲಿ ಚಾರ್ಜ್ ಶೀಟ್‌ಗಳನ್ನು ಸಲ್ಲಿಸಲಾಗಿದೆ, ಅವುಗಳಲ್ಲಿ 23 ವ್ಯಕ್ತಿಗಳನ್ನು ನ್ಯಾಯಾಲಯದಲ್ಲಿ ದೋಷಿ ಎಂದು ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.

Central agencies register 27-fold increase in raids in last 9 years
ಕಳೆದ 9 ವರ್ಷಗಳಲ್ಲಿ ಕೇಂದ್ರ ತನಿಖಾ ದಳಗಳಿಂದ 27ಪಟ್ಟು ಹೆಚ್ಚಿದ ದಾಳಿ
author img

By

Published : Sep 12, 2022, 10:44 PM IST

ನವದೆಹಲಿ: ಕಳೆದ ಒಂಬತ್ತು ವರ್ಷಗಳ ಎನ್‌ಡಿಎ ಆಡಳಿತದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗಳ ಸಂಖ್ಯೆಯಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ. ಕೇಂದ್ರ ಸರ್ಕಾರವು ಪ್ರತಿಪಕ್ಷಗಳಿಗೆ ಕಿರುಕುಳ ನೀಡಲು ಈ ಸಂಸ್ಥೆ ಬಳಸಿಕೊಳ್ಳುತ್ತಿರುವುದರಿಂದ ದಾಳಿಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ.

ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಏಜೆನ್ಸಿಗಳು ನಡೆಸಿದ ದಾಳಿಗಳ ಸಂಖ್ಯೆಯಲ್ಲಿ 27 ಪಟ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿ- ಅಂಶಗಳು ಹೇಳುತ್ತಿವೆ. ಯುಪಿಎ ಆಳ್ವಿಕೆಯಲ್ಲಿ ಅಂದರೆ 2004 ರಿಂದ 2014 ರ ಅವಧಿಯಲ್ಲಿ ಕೇವಲ 112 ದಾಳಿಗಳು ನಡೆದಿವೆ. ಆದರೆ, ಎನ್‌ಡಿಎ ಆಡಳಿತದ ಒಂಬತ್ತು ವರ್ಷಗಳಲ್ಲಿ ಈ ಸಂಖ್ಯೆ ಬರೋಬ್ಬರಿ 3010 ಎಂಬುದನ್ನು ಅಂಕಿ - ಸಂಖ್ಯೆಗಳು ದೃಢ ಪಡಿಸಿವೆ.

9 ವರ್ಷಗಳಲ್ಲಿ 99,356 ರೂ ಮೌಲ್ಯದ ಅಕ್ರಮ ಸಂಪತ್ತು ಜಪ್ತಿ: ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಈ ಅವಧಿಯಲ್ಲಿ ದೊಡ್ಡ ಪ್ರಮಾಣದ ಆಸ್ತಿ ಜಪ್ತಿ ಮಾಡಲಾಗಿದೆ. 2014 ಮತ್ತು 2022 ರ ನಡುವೆ, ಇಡಿ 99,356 ಕೋಟಿ ರೂಪಾಯಿ ಮೊತ್ತದ ಅಕ್ರಮ ಆದಾಯವನ್ನು ಜಪ್ತಿ ಮಾಡಿದೆ. 888 ಪ್ರಕರಣಗಳಲ್ಲಿ ಚಾರ್ಜ್ ಶೀಟ್‌ಗಳನ್ನು ಸಲ್ಲಿಸಲಾಗಿದೆ, ಅವುಗಳಲ್ಲಿ 23 ವ್ಯಕ್ತಿಗಳನ್ನು ನ್ಯಾಯಾಲಯದಲ್ಲಿ ದೋಷಿ ಎಂದು ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.

ಹಿಂದಿನ ಯುಪಿಎ ಸರ್ಕಾರದ ಹತ್ತು ವರ್ಷಗಳಲ್ಲಿ ಕೇವಲ 112 ದಾಳಿಗಳನ್ನು ನಡೆಸಿದ್ದು, 5,346.16 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿ ನಿರ್ದೇಶನಾಲಯ ಕೇವಲ 104 ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿತ್ತು ಮತ್ತು ಯಾವುದೇ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎಂದು ಸಚಿವರು ಸಂಸತ್​ಗೆ ಮಾಹಿತಿ ನೀಡಿದ್ದಾರೆ.

ಪ್ರಕರಣಗಳಲ್ಲಿ ಗಣನೀಯ ಏರಿಕೆ: ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 10 ವರ್ಷಗಳ ಯುಪಿಎ ಆಡಳಿತದಲ್ಲಿ ಕೇವಲ 571 ಪ್ರಕರಣಗಳು ಇದ್ದವು. ಆದರೆ ಕಳೆದ ಒಂಬತ್ತು ವರ್ಷಗಳಲ್ಲಿ ಇವುಗಳ ಸಂಖ್ಯೆ 996 ಕ್ಕೆ ಏರಿದೆ. ಯುಪಿಎ ಆಡಳಿತದಲ್ಲಿ 14 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದರೆ, ಕಳೆದ ಒಂಬತ್ತು ವರ್ಷಗಳಲ್ಲಿ ಇದು 7066 ಕೋಟಿಗೆ ಏರಿಕೆಯಾಗಿದೆ.

2004 ರಿಂದ 2014 ರ ನಡುವೆ 8,586 ಪ್ರಕರಣಗಳು ದಾಖಲಾಗಿದ್ದರೆ, 2,780 ಪ್ರಕರಣಗಳಲ್ಲಿ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಈ ಅವಧಿಯಲ್ಲಿ 1,754 ಕೋಟಿ ರೂಪಾಯಿ ದಂಡ ವಿಧಿಸಲಾಗಿದ್ದು, 14 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ನಿರಂತರ ವಾಗ್ದಾಳಿ: ಪ್ರಸ್ತುತ 9 ವರ್ಷಗಳ ಎನ್​ಡಿಎ ಆಡಳಿತ ಅವಧಿಯಲ್ಲಿ ಅತಿ ಹೆಚ್ಚಿನ ದಾಳಿಗಳು ಮತ್ತು ಶೋಧದಲ್ಲಿ ಗಣನೀಯ ಹೆಚ್ಚಳವಾಗಿದೆ. ಆದರೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿವೆ. ಪ್ರತಿಪಕ್ಷಗಳನ್ನು ಗುರಿಯಾಗಿಟ್ಟುಕೊಂಡು ಪ್ರತೀಕಾರದ ಮನೋಭಾವ ತೀರಿಸಿಕೊಳ್ಳಲು ಮೋದಿ ನೇತೃತ್ವದ ಸರ್ಕಾರ ಇಡಿ, ಐಟಿ ಮತ್ತು ಸಿಬಿಐ ಅನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರಿ ಸೆಂತಾಮರೈ, ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಅವರ ಪತ್ನಿ ರುಜಿರಾ ಬ್ಯಾನರ್ಜಿ ಮತ್ತು ಮದನ್ ಮಿತ್ರ, ಕುನಾಲ್ ಘೋಷ್, ಮೊಲೊಯ್ ಘಾಟಕ್ ಅವರಂತಹ ಪಕ್ಷದ ಅನೇಕ ನಾಯಕರು ಈಗಾಗಲೇ ಕೇಂದ್ರ ಏಜೆನ್ಸಿಗಳ ತನಿಖೆಗೆ ಒಳಪಟ್ಟಿದ್ದಾರೆ ಎಂಬುದು ಗಮನಾರ್ಹ.

ಬಿಜೆಪಿ ಸೇರ್ಪಡೆಯಾದವರ ಮೇಲೆ ಸಾಪ್ಟ್​ ಕಾರ್ನರ್​​: ಮತ್ತೊಂದೆಡೆ, 2017 ರಲ್ಲಿ ಟಿಎಂಸಿಯಿಂದ ಬಿಜೆಪಿಗೆ ಬಂದಿರುವ ಶಾರದಾ ಹಗರಣದ ಪ್ರಮುಖ ಆರೋಪಿ ಮುಕುಲ್ ರಾಯ್ ವಿರುದ್ಧದ ತನಿಖೆ ಆಮೆ ಗತಿಯಲ್ಲಿ ಸಾಗುತ್ತಿದೆ. 2019 ರ ಸೆಪ್ಟೆಂಬರ್‌ನಲ್ಲಿ ಸಿಬಿಐ ರಾಯ್ ಅವರನ್ನು ಕೊನೆಯದಾಗಿ ವಿಚಾರಣೆಗೆ ಕರೆದಿತ್ತು. ಆದರೆ ನವೆಂಬರ್ 2020 ರಲ್ಲಿ ಇಡಿ ಅವರಿಗೆ ನೋಟಿಸ್ ನೀಡಿತ್ತು. ಅದೇ ರೀತಿ, 2020ರ ಡಿಸೆಂಬರ್‌ನಲ್ಲಿ ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಯಾದ ಸುವೇಂದು ಅಧಿಕಾರಿ ವಿರುದ್ಧದ ತನಿಖೆ ನಿಂತೇ ಹೋಗಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ:ಡಜನ್​ಗೂ ಹೆಚ್ಚು ಗ್ಯಾಂಗ್​ಸ್ಟರ್​ಗಳ ನಿವಾಸಗಳ ಮೇಲೆ ಎನ್​​ಐಎ ದಾಳಿ: ಅಪಾರ ಪ್ರಮಾಣದ ಮದ್ದುಗುಂಡು ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.