ETV Bharat / bharat

ಅಂತಾರಾಷ್ಟ್ರೀಯ ಜೀವವೈವಿಧ್ಯತಾ ದಿನ : ವಿಶ್ವದೆಲ್ಲೆಡೆ ಜೀವವೈವಿಧ್ಯತೆಗಿದೆ ಹಲವು ಬೆದರಿಕೆ

ಜೀವವೈವಿಧ್ಯತೆಯ ವಿಷಯಗಳ ಬಗ್ಗೆ ತಿಳುವಳಿಕೆ ಮತ್ತು ಜಾಗೃತಿ ಹೆಚ್ಚಿಸಲು ವಿಶ್ವಸಂಸ್ಥೆಯು ಮೇ 22ರಂದು ಅಂತರಾಷ್ಟ್ರೀಯ ಜೀವವೈವಿಧ್ಯತೆಯ ದಿನವನ್ನು ಘೋಷಿಸಿದೆ..

celebrating-international-day-for-biological-diversity-22-may-2021

author img

By

Published : May 22, 2021, 3:44 PM IST

ಹೈದರಾಬಾದ್ : ಜೀವವೈವಿಧ್ಯತೆಯನ್ನು ಅನೇಕ ಬಗೆಯ ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಗಳ ವಿಷಯದಲ್ಲಿ ಅರ್ಥೈಸಲಾಗುತ್ತದೆ. ಆದರೆ, ಇದು ಪ್ರತಿ ಜಾತಿಯಲ್ಲೂ ಆನುವಂಶಿಕ ವ್ಯತ್ಯಾಸಗಳನ್ನು ಒಳಗೊಂಡಿದೆ.

ಉದಾಹರಣೆಗೆ, ವಿವಿಧ ರೀತಿಯ ಬೆಳೆಗಳು ಮತ್ತು ಜಾನುವಾರುಗಳ ತಳಿಗಳು, ವಿವಿಧ ಪರಿಸರ ವ್ಯವಸ್ಥೆಗಳು (ಸರೋವರಗಳು, ಅರಣ್ಯ, ಮರುಭೂಮಿಗಳು, ಕೃಷಿ ಭೂದೃಶ್ಯಗಳು) ವ್ಯತ್ಯಾಸ ಹೊಂದಿರುತ್ತವೆ.

2021 ವರ್ಷದ ಥೀಮ್: "ನಾವು ಪರಿಹಾರದ ಭಾಗವಾಗಿದ್ದೇವೆ"

celebrating-international-day-for-biological-diversity-22-may-2021
ಅಂತಾರಾಷ್ಟ್ರೀಯ ಜೀವವೈವಿಧ್ಯತಾ ದಿನ

ಜೀವವೈವಿಧ್ಯತೆಯ ವಿನಾಶ : ಪ್ರಸ್ತುತ ಜೀವವೈವಿಧ್ಯ ಬಿಕ್ಕಟ್ಟು 21ನೇ ಶತಮಾನದಲ್ಲಿ ನಾವು ಎದುರಿಸುತ್ತಿರುವ ನಿರ್ಣಾಯಕ ಸವಾಲುಗಳಲ್ಲಿ ಒಂದಾಗಿದೆ. ಮಾನವ ಪ್ರಭಾವದ ನೇರ ಅಥವಾ ಪರೋಕ್ಷ ಪರಿಣಾಮವಾಗಿ ಅಸಂಖ್ಯಾತ ಪ್ರಬೇಧಗಳು ಅಳಿವಿನಂಚಿನಲ್ಲಿವೆ.

ಹೆಚ್ಚಾಗಿ ಆವಾಸಸ್ಥಾನ ನಾಶ, ಹವಾಮಾನ ಬದಲಾವಣೆ, ಅತಿಯಾದ ಶೋಷಣೆ, ಮಾಲಿನ್ಯ ಮತ್ತು ಆಕ್ರಮಣ ಭೂಮಿಯಲ್ಲಿನ ಬದಲಾವಣೆಗೆ ಮುಖ್ಯ ಕಾರಣಗಳಾಗಿವೆ.

ಸಸ್ತನಿಗಳು, ಪಕ್ಷಿಗಳು, ಮೀನುಗಳು, ಸಸ್ಯಗಳು ಮತ್ತು ಕೀಟಗಳ ಸಂಖ್ಯೆ 1970ರಿಂದ 2016ರವರೆಗೆ ಸರಾಸರಿ 68 ಪ್ರತಿಶತದಷ್ಟು ಕುಸಿದಿದೆ.

ಭೂಮಿಯ ಹಿಮರಹಿತ ಭೂ ಮೇಲ್ಮೈಯಲ್ಲಿ ಸುಮಾರು 75 ಪ್ರತಿಶತದಷ್ಟು ಈಗಾಗಲೇ ಗಮನಾರ್ಹವಾಗಿ ಬದಲಾಗಿದೆ, ಹೆಚ್ಚಿನ ಸಾಗರಗಳು ಕಲುಷಿತಗೊಂಡಿವೆ, ಮತ್ತು ಗದ್ದೆ ಪ್ರದೇಶಗಳ 85 ಪ್ರತಿಶತಕ್ಕಿಂತಲೂ ಹೆಚ್ಚು ಪ್ರದೇಶವು ಕಳೆದುಹೋಗಿದೆ.

ಅಂತರಾಷ್ಟ್ರೀಯ ಜೀವವೈವಿಧ್ಯತಾ ದಿನ

ಜೀವವೈವಿಧ್ಯತೆಗೆ ಐದು ಬೆದರಿಕೆಗಳು:

ಭೂಮಿ ಮತ್ತು ಸಮುದ್ರ ಬಳಕೆಯ ಬದಲಾವಣೆ : ಕೃಷಿ ಭೂ ಬಳಕೆಯು 80% ಜಾಗತಿಕ ಅರಣ್ಯನಾಶಕ್ಕೆ ಕಾರಣವಾಗಿದೆ.

ಮಾಲಿನ್ಯ : ಪರಿಸರವನ್ನು ನೇರವಾಗಿ ಮತ್ತು ಪರೋಕ್ಷವಾಗಿ ಬದುಕಲು ಸೂಕ್ತವಲ್ಲದಂತೆ ಮಾಡುತ್ತದೆ.

ಪ್ರಬೇಧಗಳು ಅತಿಯಾದ ಶೋಷಣೆ : ಅತಿಯಾದ ಮೀನುಗಾರಿಕೆ 2050ರ ವೇಳೆಗೆ ಜಾಗತಿಕ ಮೀನುಗಳ ಜನಸಂಖ್ಯೆಯನ್ನು ನಾಶಪಡಿಸುತ್ತದೆ.

ಹವಾಮಾನ ಬದಲಾವಣೆ : ಪ್ರಾಣಿಗಳ ವ್ಯಾಪ್ತಿಯನ್ನು ಬದಲಾಯಿಸಲು ಒತ್ತಾಯಿಸುವುದು ಅಥವಾ ಕಾಲೋಚಿತ ಘಟನೆಗಳು ಪ್ರಾಣಿಸಂಕುಲವನ್ನು ಗೊಂದಲಗೊಳಿಸುತ್ತದೆ.

ಆಕ್ರಮಣಕಾರಿ ಪ್ರಭೇದಗಳು ಮತ್ತು ರೋಗ : ಸ್ಥಳ, ಆಹಾರ ಮತ್ತು ಇತರ ಸಂಪನ್ಮೂಲಗಳ ಅತಿಯಾದ ಬಳಕೆ, ಕೆಲವೊಮ್ಮೆ ಸ್ಥಳೀಯ ಪ್ರಭೇದಗಳಿಗೆ ರೋಗನಿರೋಧಕ ಶಕ್ತಿ ಇಲ್ಲದೇ ರೋಗವನ್ನು ಹರಡುತ್ತದೆ.

ಯುರೋಪ್ ಮತ್ತು ಮಧ್ಯ ಏಷ್ಯಾ, ಏಷ್ಯಾ ಪೆಸಿಫಿಕ್, ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್, ಆಫ್ರಿಕಾ ಮತ್ತು ಉತ್ತರ ಅಮೆರಿಕಾ ಈ 5 ಪ್ರದೇಶಗಳಿಗೆ ವಿಶ್ಲೇಷಣೆ ನಡೆಸಲಾಯಿತು.

ಜಾತಿಗಳ ಜನಸಂಖ್ಯೆಯನ್ನು ಒಂದು ಅಳತೆಯಾಗಿ ತೆಗೆದುಕೊಂಡರೆ, ಜೀವವೈವಿಧ್ಯದಲ್ಲಿ ಗಮನಾರ್ಹವಾದ ನಷ್ಟವು ಎಲ್ಲಾ ಪ್ರದೇಶಗಳಲ್ಲಿ ಕಂಡುಬಂದಿದೆ. ನೈಸರ್ಗಿಕ ಭೂಮಿಯ ಮೇಲಿನ ಅತಿಕ್ರಮಣವು ವನ್ಯಜೀವಿಗಳಿಗೆ ಅತ್ಯಂತ ಪ್ರಮುಖ ಅಪಾಯವೆಂದು ಗುರುತಿಸಲಾಗಿದೆ.

ಉತ್ತರ ಅಮೆರಿಕಾ:

  • ಕಳೆದ 50 ವರ್ಷಗಳಲ್ಲಿ ಸುಮಾರು 3 ಬಿಲಿಯನ್ ಪಕ್ಷಿಗಳು ಕಳೆದುಹೋಗಿವೆ
  • ಸಂಭವನೀಯ ಕಾರಣಗಳು: ಆವಾಸಸ್ಥಾನ ನಷ್ಟ, ರಾಸಾಯನಿಕ ಮಾಲಿನ್ಯ (ಕೀಟನಾಶಕ)
  • ಉತ್ತರ ಅಮೆರಿಕದ ಅತಿದೊಡ್ಡ ಸಿಹಿನೀರಿನ ಜಲಾಶಯ ಪ್ರದೇಶವಾದ ಗ್ರೇಟ್ ಲೇಕ್ಸ್‌ನ ನೀರಿನ ಮಟ್ಟವು 30% ಕಡಿಮೆಯಾಗಿದ್ದು, ಸಸ್ಯ-ಪರಾಗಸ್ಪರ್ಶ ಜಾಲದಲ್ಲಿ ಕಣ್ಮರೆಯಾಗಿದೆ

ಯುರೋಪ್ ಮತ್ತು ಮಧ್ಯ ಏಷ್ಯಾ:

  • ಕೇವಲ 23% ಪ್ರಭೇದಗಳು ಮತ್ತು ಅವುಗಳ 16% ಆವಾಸಸ್ಥಾನಗಳು ಉತ್ತಮ ಆರೋಗ್ಯದಲ್ಲಿವೆ
  • 15,060 ಯುರೋಪಿಯನ್ ಪ್ರಭೇದಗಳಲ್ಲಿ 1,677 ಅಳಿವಿನಂಚಿನಲ್ಲಿವೆ
  • ಸೈಗಾ ಹುಲ್ಲೆ, ಗೈರ್ಫಾಲ್ಕನ್ ಮತ್ತು ಪರ್ಷಿಯನ್ ಚಿರತೆ ಸೇರಿದಂತೆ 6 ಪ್ರಾಣಿ, ಪಕ್ಷಿ ಮತ್ತು ಮೀನು ಪ್ರಭೇದಗಳು ರಷ್ಯಾದಲ್ಲಿ ಅಳಿವಿನ ಅಪಾಯವನ್ನು ಎದುರಿಸುತ್ತಿವೆ

ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್:

  • ಸರೀಸೃಪಗಳು, ಉಭಯಚರಗಳು ಮತ್ತು ಮೀನುಗಳಲ್ಲಿ ಕಂಡುಬರುವ ಪ್ರಮುಖ ನಕಾರಾತ್ಮಕ ಪ್ರವೃತ್ತಿಗಳು
  • ಏಷ್ಯಾದಲ್ಲಿ ಹುಟ್ಟಿದ ಒಂದು ರೀತಿಯ ಚೈಟ್ರಿಡ್ ಶಿಲೀಂಧ್ರವು 500 ಉಭಯಚರ ಜಾತಿಗಳಲ್ಲಿ ಕುಸಿತವನ್ನು ಉಂಟುಮಾಡುತ್ತಿದೆ ಮತ್ತು ಅವುಗಳಲ್ಲಿ 90ರಷ್ಟು ಅಳಿವಿನಂಚಿನಲ್ಲಿದೆ
  • 2019ರ ದಾಖಲೆಯ ಒಣ ಋತುಗಳು ಮತ್ತು ಕಾಡಿನ ಬೆಂಕಿಯು ಅರಣ್ಯನಾಶದ ಉಲ್ಬಣಕ್ಕೆ ಕಾರಣವಾಗುತ್ತದ್ದು, ಹಿಂದಿನ ವರ್ಷಕ್ಕಿಂತ 30% ಹೆಚ್ಚಾಗಿದೆ

ಆಫ್ರಿಕಾ:

  • ಮಾರ ನದಿ ಜಲಾನಯನ ಪ್ರದೇಶದಲ್ಲಿ ಜಾತಿಗಳಿಗೆ ಅಳಿವಿನ ಅಪಾಯ ಹೆಚ್ಚುತ್ತಿದೆ
  • ಪರಿಸರ ವ್ಯವಸ್ಥೆಯು ಸುಮಾರು 1.1 ಮಿಲಿಯನ್ ಸ್ಥಳೀಯರಿಗೆ ಜೀವನೋಪಾಯವನ್ನು ಒದಗಿಸುತ್ತದೆ
  • ವಿಕ್ಟೋರಿಯಾ ಸರೋವರದ 76% ಸ್ಥಳೀಯ ಸಿಹಿನೀರಿನ ಪ್ರಭೇದಗಳು ಅಳಿವಿನಂಚಿನಲ್ಲಿವೆ
  • ಅಕ್ರಮ ಬೇಟೆ ಮತ್ತು ಗಣಿಗಾರಿಕೆಯು ಕಾಂಗೋದಲ್ಲಿನ ಗ್ರೌಯರ್‌ನ ಗೊರಿಲ್ಲಾ ಸಂಖ್ಯೆಯನ್ನು 87%ರಷ್ಟು ಇಳಿಸಿದೆ

ಏಷ್ಯಾ ಪೆಸಿಫಿಕ್:

  • 2019 ಮತ್ತು 2020ರ ಆಸ್ಟ್ರೇಲಿಯಾದ ವಿನಾಶಕಾರಿ ಬುಷ್‌ಫೈರ್ ಋತುವಿನಲ್ಲಿ ಸುಮಾರು 3 ಬಿಲಿಯನ್ ಪ್ರಾಣಿಗಳು ಕೊಲ್ಲಲ್ಪಟ್ಟವು ಅಥವಾ ಸ್ಥಳಾಂತರಗೊಂಡವು
  • ಪೂರ್ವ ಮತ್ತು ಆಗ್ನೇಯ ಏಷ್ಯಾದ 80%ಕ್ಕಿಂತ ಹೆಚ್ಚು ಗದ್ದೆಗಳು ಮಾನವ ಚಟುವಟಿಕೆಯಿಂದಾಗಿ ಬೆದರಿಕೆ ಹೊಂದಿವೆ

ಭಾರತದ ಪರಿಸ್ಥಿತಿ:

  • ಭಾರತವು ಹೆಚ್ಚು ಜೀವವೈವಿಧ್ಯದ ದೇಶವಾಗಿದ್ದು, ವಿಶ್ವಭೂಪ್ರದೇಶದ ಕೇವಲ 2.4 ಪ್ರತಿಶತದಷ್ಟರಲ್ಲಿ 45,000 ಜಾತಿಯ ಸಸ್ಯಗಳನ್ನು ಹೊಂದಿದೆ.
  • ಭಾರತದಲ್ಲಿ 3% ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿದ್ದು, 19% ಉಭಯಚರಗಳು ಬೆದರಿಕೆ ಅಥವಾ ತೀವ್ರವಾಗಿ ಅಳಿವಿನಂಚಿನಲ್ಲಿವೆ
  • 12% ಕಾಡು ಸಸ್ತನಿ ಜಾತಿಗಳು ಅಳಿವಿನಂಚಿನಲ್ಲಿವೆ.
  • ದೇಶಾದ್ಯಂತ ಬೀ ವಸಾಹತುಗಳು ತೀವ್ರವಾಗಿ ಕುಸಿಯುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.