ETV Bharat / bharat

ಇವಿಎಂ ವ್ಯವಸ್ಥೆ ಪಾರದರ್ಶಕವಾಗಿದೆ..ಸಮಾಜವಾದಿ ಪಕ್ಷದ ಆರೋಪಕ್ಕೆ ಚುನಾವಣಾ ಆಯುಕ್ತರ ಟಾಂಗ್​​ - ಚುನಾವಣಾ ಆಯುಕ್ತ ಸುಶೀಲ್ ಚಂದ್ರ

ಇವಿಎಂ ಮೇಲೆ ಸಮಾಜವಾದಿ ಪಕ್ಷ ಮಾಡಿರುವ ಆರೋಪಕ್ಕೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುಶೀಲ್ ಚಂದ್ರ ಪ್ರತಿಕ್ರಿಯೆ ನೀಡಿದ್ದಾರೆ..

CEC Sushil Chandra
ಸಿಇಸಿ ಸುಶೀಲ್ ಚಂದ್ರ
author img

By

Published : Mar 10, 2022, 7:38 AM IST

Updated : Mar 10, 2022, 8:28 AM IST

ನವದೆಹಲಿ: ಇಡೀ ದೇಶದಲ್ಲಿಯೇ ಸದ್ದು ಮಾಡಿದ್ದ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಹೊರ ಬೀಳಲಿದೆ. ಎಲ್ಲ 5 ರಾಜ್ಯಗಳ ಮತ ಎಣಿಕೆಯು ಇನ್ನೇನು ಪ್ರಾರಂಭವಾಗಲಿದೆ.

ಇನ್ನು ವಿದ್ಯುನ್ಮಾನ ಮತಯಂತ್ರ (ಇವಿಎಂ)ದ ಮೇಲೆ ಸಮಾಜವಾದಿ ಪಕ್ಷ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುಶೀಲ್ ಚಂದ್ರ ಅವರು ಭಾರತೀಯ ಚುನಾವಣಾ ಆಯೋಗ (ಇಸಿಐ) ಯಾವಾಗಲೂ ಇವಿಎಂ ನ ಪಾರದರ್ಶಕತೆ ಕಾಯ್ದುಕೊಳ್ಳಲಿದೆ ಎಂದು ಉತ್ತರಿಸಿದ್ದಾರೆ..

ತರಬೇತಿ ಉದ್ದೇಶಗಳಿಗಾಗಿ ಇವಿಎಂ ಸ್ಥಳಾಂತರದ ಬಗ್ಗೆ ರಾಜಕೀಯ ಪಕ್ಷಗಳಿಗೆ ತಿಳಿಸುವ ಕಾರ್ಯವನ್ನು ಅನುಸರಿಸದ ಕಾರಣ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿಯು, ವಾರಾಣಸಿಯ ಎಡಿಎಂ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ಸುಶೀಲ್ ಚಂದ್ರ ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.

ಇವಿಎಂಗಳನ್ನು 2004 ರಿಂದ ನಿರಂತರವಾಗಿ ಬಳಸಲಾಗುತ್ತಿದೆ. 2019 ರ ವೇಳೆಗೆ ನಾವು ಪ್ರತಿ ಮತಗಟ್ಟೆಯಲ್ಲಿ ವೋಟರ್​ ವೆರಿಫೈಡ್ ಪೇಪರ್​​ ಆಡಿಟ್​ ಟ್ರಯಲ್ (ವಿವಿಪಿಎಟಿ) ಅನ್ನು ನಿರ್ವಹಿಸಲು ಪ್ರಾರಂಭಿಸಿದ್ದೇವೆ. ಅವುಗಳನ್ನು ನೋಡಿದ ನಂತರ, ರಾಜಕೀಯ ಪಕ್ಷಗಳ ಏಜೆಂಟರುಗಳ ಸಮ್ಮುಖದಲ್ಲಿ ಇವಿಎಂಗಳನ್ನು ಸೀಲ್ ಮಾಡಲಾಗುತ್ತದೆ ಮತ್ತು ಅವರ ಸಹಿ ತೆಗೆದುಕೊಳ್ಳಲಾಗುತ್ತದೆ. ವಿಎಂಗಳನ್ನು ಮೂರು ಹಂತದ ಭದ್ರತೆಯಲ್ಲಿ ಸ್ಟ್ರಾಂಗ್ ರೂಮ್‌ನಲ್ಲಿ ಇರಿಸಲಾಗುತ್ತದೆ.

24x7 ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ರಾಜಕೀಯ ಪಕ್ಷಗಳ ಏಜೆಂಟರುಗಳು ಕೂಡ ಸ್ಟ್ರಾಂಗ್ ರೂಮ್ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ ಯಾವುದೇ ರೀತಿಯಲ್ಲಿ ಇವಿಎಂಗಳನ್ನು ಬದಲಾಯಿಸುವ ತಿರುಚುವ ಪ್ರಶ್ನೆಯೇ ಇಲ್ಲ. ಯಾವುದೇ ರೀತಿಯಲ್ಲಿ ಇವಿಎಂ ಅನ್ನು ಸ್ಟ್ರಾಂಗ್ ರೂಂನಿಂದ ಹೊರತೆಗೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು..

ಇದನ್ನೂ ಓದಿ: Election Result 2022: ಇವಿಎಂ ಮೂಲಕ ಮತ ಎಣಿಕೆ ಹೇಗೆ, ಸಂಪೂರ್ಣ ಪ್ರಕ್ರಿಯೆ ಹೇಗಿರುತ್ತೆ?

ವಾರಣಾಸಿಯ ಇವಿಎಂ ಬಗ್ಗೆ ಆರೋಪಗಳು ಕೇಳಿಬಂದಿದೆ. ಎಡಿಎಂ ಅಧಿಕಾರಿ ಮಾಡಿದ ತಪ್ಪೆಂದರೆ, ತರಬೇತಿ ಉದ್ದೇಶಗಳಿಗಾಗಿ ಇವಿಎಂ ಚಲನೆಯ ಬಗ್ಗೆ ಅವರು ರಾಜಕೀಯ ಪಕ್ಷಗಳಿಗೆ ತಿಳಿಸಲಿಲ್ಲ. ಪ್ರತಿ ಇವಿಎಂ ಕೆಲವು ಸಂಖ್ಯೆಯನ್ನು ಹೊಂದಿರುತ್ತದೆ. ರಾಜಕೀಯ ಪಕ್ಷದ ಜನರು ಪ್ರಶ್ನೆಗಳನ್ನು ಎತ್ತಿದಾಗ ನಾವು ಅವರಿಗೆ ಇವಿಎಂ ಸಂಖ್ಯೆಯನ್ನು ತೋರಿಸಿದ್ದೇವೆ. ಅದು ಮತದಾನಕ್ಕೆ ಮೀಸಲಾದ ಇವಿಎಂ ಸಂಖ್ಯೆಗೆ ಹೊಂದಿಕೆಯಾಗಲಿಲ್ಲ. ಎಣಿಕೆಗಾಗಿ ಸ್ಟ್ರಾಂಗ್ ರೂಮ್‌ನಲ್ಲಿ ಇರಿಸಲಾಗಿರುವ ಇವಿಎಂ ಸಂಖ್ಯೆಗಳಿಗೆ ಎದ್ದ ಪ್ರಶ್ನೆಗೆ ಈ ಇವಿಎಂ ಸಂಖ್ಯೆ ಹೊಂದಿಕೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕಾರಿನಲ್ಲಿ ಇವಿಎಂ ಸಾಗಿಸಿದ ಆರೋಪ: ವಾರಾಣಸಿಯಲ್ಲಿ ಇಡೀ ರಾತ್ರಿ ಎಸ್ಪಿ ಕಾರ್ಯಕರ್ತರ ಪ್ರತಿಭಟನೆ

ತರಬೇತಿ, ಡೆಮೊ ಉದ್ದೇಶಕ್ಕಾಗಿ ಇವಿಎಂಗಳಿವೆ. ಆದರೆ ಮತ ಚಲಾವಣೆಯಾದ ಯಾವುದೇ ಇವಿಎಂ ಅನ್ನು ಸ್ಟ್ರಾಂಗ್​ ರೂಮ್​ನಿಂದ ತೆಗೆಯಲಾಗುವುದಿಲ್ಲ. ವಾರಣಾಸಿ ಎಡಿಎಂ ಎನ್‌ಕೆ ಸಿಂಗ್ ಅವರ ಅಮಾನತುಗೊಳಿಸಿರುವುದನ್ನು ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತರು, ಇವಿಎಂ ಚಲನೆಗೆ ಮುಂಚಿತವಾಗಿ ರಾಜಕೀಯ ಪಕ್ಷಗಳಿಗೆ ತಿಳಿಸುವ ನಿಯಮವಿದೆ. ಇದನ್ನು ಎಡಿಎಂ ಮಾಡಿಲ್ಲ. ಇದು ವದಂತಿಯನ್ನು ಸೃಷ್ಟಿಸಿದೆ. ನಾವು ಕ್ರಮ ಕೈಗೊಳ್ಳಲು ಬದ್ಧರಾಗಿದ್ದೇವೆ ಎಂದರು.

ವಾರಾಣಸಿಯಲ್ಲಿ ಕಾರಿನಲ್ಲಿ ಇವಿಎಂ ಸಾಗಿಸಲಾಗಿದೆ ಎಂಬ ಸುದ್ದಿ ಹರಡಿ, ಮೊನ್ನೆ ರಾತ್ರಿ ಎಸ್ಪಿ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಮುಂದೆ ಪ್ರತಿಭಟನೆ ಮಾಡಿದ್ದರು.

Last Updated : Mar 10, 2022, 8:28 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.