ಕುಪ್ವಾರಾ(ಜಮ್ಮು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಲೈನ್ ಆಫ್ ಕಂಟ್ರೋಲ್)ಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಒಪ್ಪಂದವು ಸೈನಿಕರಿಗೆ ಅನುಕೂಲಕರವಾಗಿದೆ. ಇದು ಸಾವು-ನೋವುಗಳನ್ನು ಕಡಿಮೆ ಮಾಡಿದೆ ಎಂದು ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಕೆರಾನ್ ಸೆಕ್ಟರ್‌ನಲ್ಲಿ ಬ್ರಿಗೇಡಿಯರ್ ತಪಸ್ ಕುಮಾರ್ ಮಿಶ್ರಾ ಈಟಿವಿ ಭಾರತಕ್ಕೆ ತಿಳಿಸಿದರು.
ತಪಸ್ ಕುಮಾರ್ ಮಿಶ್ರಾ ಕುಪ್ವಾರದ ಕೆರಾನ್ ಸೆಕ್ಟರ್‌ನಲ್ಲಿ 268 ಪದಾತಿ ದಳದ ಮುಖ್ಯಸ್ಥರಾಗಿದ್ದಾರೆ. ಇವರ ನೇತೃತ್ವದಲ್ಲಿ ಪಡೆಗಳು ಎಲ್ಒಸಿಯಲ್ಲಿ ಕಾವಲು ಕಾಯುತ್ತಿವೆ. 55 ಕಿ.ಮೀ ಉದ್ದದ ಮೇಲ್ವಿಚಾರಣೆಯನ್ನು ಮಿಶ್ರಾ ನಿರ್ವಹಿಸುತ್ತಿದ್ದಾರೆ.
9,600 ಅಡಿ ಮತ್ತು ಎಲ್‌ಒಸಿಯಿಂದ 12 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿನ ಫಕ್ರಿಯನ್ ಪಾಸ್‌ನಲ್ಲಿರುವ ಪ್ರಧಾನ ಕಚೇರಿಯಲ್ಲಿ ಮಾತನಾಡಿ, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮವನ್ನು ಒಪ್ಪಿಕೊಂಡಾಗಿನಿಂದ ತಮ್ಮ ಪ್ರದೇಶದಾದ್ಯಂತ ನುಸುಳುವಿಕೆ ಶೂನ್ಯವಾಗಿದೆ ಎಂದು ಮಾಹಿತಿ ನೀಡಿದರು.
2003ರ ಕದನ ವಿರಾಮ ಒಪ್ಪಂದವನ್ನು 2021ರ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿವೆ. ಈ 15 ತಿಂಗಳುಗಳಲ್ಲಿ ಎರಡೂ ಕಡೆಯಿಂದಲೂ ಯಾವುದೇ ಉಲ್ಲಂಘನೆ ನಡೆದಿಲ್ಲ. ಯಾವುದೇ ಸಾವುನೋವುಗಳು ಆಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಏಕನಾಥ ಬಂಡಾಯ ಗುಂಪಿನಿಂದ ಅಪಹರಣ': ಮುಂಬೈಗೆ ಮರಳಿದ 'ಶಿವಸೈನಿಕರು' ಹೇಳಿದ್ದು ರೋಚಕ ಕಥೆ!