ETV Bharat / bharat

ಜಮ್ಮುವಿಗೆ ಆಗಮಿಸಿದ ಸಿಡಿಎಸ್​​​: ಗಡಿಯಲ್ಲಿ ಭದ್ರತೆ ಪರಿಶೀಲನೆ - ಜನರಲ್ ಬಿಪಿನ್ ರಾವತ್

ಜಮ್ಮು ಏರ್​ಬೇಸ್​ ಮೇಲೆ ಉಗ್ರರು ದಾಳಿ ನಡೆಸಿದ ವಾರದ ಬಳಿಕ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಎಲ್​ಒಸಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

CDS visits Jammu to review security on LoC, Army chief in Pokhran
ಜಮ್ಮುವಿಗೆ ಆಗಮಿಸಿದ ಸಿಡಿಎಸ್
author img

By

Published : Jul 15, 2021, 2:27 PM IST

ನವದೆಹಲಿ: ಅಂತಾರಾಷ್ಟ್ರೀಯ ಗಡಿ (ಎಲ್​ಒಸಿ) ಸೇರಿದಂತೆ ಇತರ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ರಕ್ಷಣಾ ಮುಖ್ಯಸ್ಥ ( ಸಿಡಿಎಸ್ ) ಜನರಲ್ ಬಿಪಿನ್ ರಾವತ್ ಗುರುವಾರ ಜಮ್ಮು ಸೆಕ್ಟರ್​​ಗೆ ಆಗಮಿಸಿದ್ದಾರೆ.

ಜಮ್ಮು ಏರ್​ಬೇಸ್​ ಮೇಲೆ ಉಗ್ರರು ದಾಳಿ ನಡೆಸಿದ ವಾರದ ಬಳಿಕ ರಾವತ್ ಜಮ್ಮುವಿಗೆ ಭೇಟಿ ನೀಡುತ್ತಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಉಗ್ರರು ಡ್ರೋನ್‌ಗಳನ್ನು ಬಳಸುವುದರ ಬಗ್ಗೆ ಜನರಲ್ ರಾವತ್ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಜೂನ್‌ನಲ್ಲಿ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಎಲ್​ಎಸಿ ಕೇಂದ್ರ ವಲಯಕ್ಕೆ ರಾವತ್ ಭೇಟಿ ನೀಡಿದ್ದರು.

ಓದಿ : ಜಮ್ಮುವಿನಲ್ಲಿ ಮತ್ತೊಂದು Drone ಪತ್ತೆ.. ಭದ್ರತಾ ಸಿಬ್ಬಂದಿ ಹೈ ಅಲರ್ಟ್​

ರಾವತ್ ಜಮ್ಮು ಭೇಟಿಯ ನಡುವೆ, ಕಾರ್ಪ್ಸ್ ಆಫ್ ಆರ್ಟಿಲರಿಯ ಕಾರ್ಯಾಚರಣೆಯ ಸನ್ನದ್ಧತೆ ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಗುರುವಾರ ರಾಜಸ್ಥಾನದ ಪೋಖ್ರಾನ್‌ಗೆ ಭೇಟಿ ನೀಡಲಿದ್ದಾರೆ. ಬೋಫೋರ್ಸ್ ಮತ್ತು ಸ್ಥಳೀಯ ಧನುಷ್ ಸೇರಿದಂತೆ ಹೋವಿಟ್ಜರ್‌ಗಳ ಗುಂಡಿನ ಕಸರತ್ತುಗಳಿಗೆ ಅವರು ಸಾಕ್ಷಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.