ETV Bharat / bharat

ಭಾರತ-ಫ್ರಾನ್ಸ್​ ಸಮರಾಭ್ಯಾಸ: ರಫೇಲ್ ಯುದ್ಧ ವಿಮಾನದಲ್ಲಿ ಬಿಪಿನ್ ರಾವತ್ ಹಾರಾಟ!

ಭಾರತೀಯ ವಾಯುಪಡೆಯು ಜೋಧ್‌ಪುರದಲ್ಲಿ ತನ್ನ ರಫೇಲ್ ಫೈಟರ್ ಜೆಟ್‌ಗಳನ್ನು ಒಳಗೊಂಡ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಯುದ್ಧ ಅಭ್ಯಾಸ ಡೆಸರ್ಟ್ ನೈಟ್-21ಗೆ ಚಾಲನೆ ನೀಡಿದೆ.

Jodhpur News
ಭಾರತ-ಫ್ರಾನ್ಸ್​ ಸಮರಾಭ್ಯಾಸ
author img

By

Published : Jan 22, 2021, 4:13 PM IST

ಜೋಧ್‌ಪುರ: ಭಾರತ-ಫ್ರಾನ್ಸ್ ಯುದ್ಧ ಅಭ್ಯಾಸ ಡೆಸರ್ಟ್ ನೈಟ್ ವಾರ್​ ಗೇಮ್​ -21ರಲ್ಲಿ ಪಾಲ್ಗೊಳ್ಳಲು ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಫ್ರೆಂಚ್ ನಿರ್ಮಿತ ರಫೇಲ್ ಯುದ್ಧ ವಿಮಾನದ ಮೂಲಕ ಆಫ್ರಿಕಾದ ಜಿಬೌಟಿ ಬಳಿಯ ಫ್ರೆಂಚ್ ನೌಕಾಪಡೆಯಿಂದ ಜೋಧ್‌ಪುರ ತಲುಪಿದ್ದಾರೆ.

ಭಾರತ-ಫ್ರಾನ್ಸ್ ಯುದ್ಧಾಭ್ಯಾಸ ಡೆಸರ್ಟ್ ನೈಟ್-21ರಲ್ಲಿ ರಕ್ಷಣಾ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಫ್ರೆಂಚ್ ನಿರ್ಮಿತ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಈ ಸಮರಾಭ್ಯಾಸದ ಅಂಗವಾಗಿ ರಫೇಲ್ ಮತ್ತು ಭಾರತ ಮತ್ತು ಫ್ರಾನ್ಸ್‌ನ ಇತರ ಯುದ್ಧ ವಿಮಾನಗಳು ಜೋಧಪುರದಲ್ಲಿ ಹಾರಾಟ ನಡೆಸಿದವು. ಆಫ್ರಿಕಾದ ಜಿಬೌಟಿ ಬಳಿಯ ಫ್ರೆಂಚ್ ನೌಕಾಪಡೆಯಿಂದ ರಫೇಲ್​ನಲ್ಲಿ ರಾವತ್​ ಜೋಧ್‌ಪುರಕ್ಕೆ ಬಂದಿಳಿದಿದ್ದಾರೆ.

ಸಿಡಿಎಸ್​ ಜನರಲ್ ಬಿಪಿನ್ ರಾವತ್​ ಈ ಸಮರಾಭ್ಯಾಸದ ಕುರಿತು ಭಾರತ ಮತ್ತು ಫ್ರಾನ್ಸ್‌ನ ವಾಯುಪಡೆಯ ಪೈಲೆಟ್‌ಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಜಂಟಿ ಅಭ್ಯಾಸವು ಉಭಯ ದೇಶಗಳ ವಾಯುಪಡೆಗಳ ನಡುವೆ ಪರಸ್ಪರ ಕಾರ್ಯ ಸಾಧ್ಯತೆಯನ್ನು ಹೇಗೆ ಹೆಚ್ಚಿಸುತ್ತದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಗಳು ತಿಳಿಸಿದ್ರು.

ಇದನ್ನೂ ಓದಿ:ಮೃತ ವ್ಯಕ್ತಿಯ ವೀರ್ಯಾಣು ಪಡೆಯುವ ಹಕ್ಕು ಪತ್ನಿಗೆ ಮಾತ್ರವಿದೆ: ಕಲ್ಕತ್ತಾ ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.