ನವದೆಹಲಿ : ಸಿಯಾಚಿನ್ ಹಿಮನದಿಯನ್ನು ಸಮೀಕ್ಷೆ ನಡೆಸಿ ಭಾರತೀಯ ಸೈನ್ಯಕ್ಕೆ ಸಹಾಯ ಮಾಡಿದ್ದ ನಿವೃತ್ತ ಅಧಿಕಾರಿ ಕರ್ನಲ್ ನರೇಂದ್ರ ‘ಬುಲ್’ ಕುಮಾರ್ ಅವರ ಅಗಲಿಕಿಗೆ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಂತಾಪ ಸೂಚಿಸಿದರು.
ನರೇಂದ್ರ ‘ಬುಲ್’ ಕುಮಾರ್ ಅವರ ಎತ್ತರದ ಪರ್ವತ ಶಿಖರಗಳನ್ನು ಅಳೆಯುವ ದೃಢ ನಿಶ್ಚಯ ಮತ್ತು ಹಂಬಲ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡಿದೆ. ಅವರ ಆವಿಷ್ಕಾರಗಳು ಸೈನ್ಯಕ್ಕೆ ಸಹಾಯ ಮಾಡಿತು ಎಂದು ಜನರಲ್ ಬಿಪಿನ್ ರಾವತ್ ಹೇಳಿದರು.
ಇದನ್ನೂ ಓದಿ: ಸಿಯಾಚಿನ್ ಹೀರೊ ಕರ್ನಲ್ ನರೇಂದ್ರ ಬುಲ್ ಕುಮಾರ್ ನಿಧನ
ಕರ್ನಲ್ ನರೇಂದ್ರ ‘ಬುಲ್’ ಕುಮಾರ್ ಅವರ ಆವಿಷ್ಕಾರ ಸಾಲ್ಟೋರೊ ರಿಡ್ಜ್ ಮತ್ತು ಲಡಾಖ್‌ನ ಇತರ ಪ್ರದೇಶಗಳಲ್ಲಿ ನಮ್ಮ ಸೇನೆಯ ಸಾಹಸಮಯ ಪ್ರಯಾಣದ ಒಂದು ಭಾಗವಾಗಿದೆ. ನಮ್ಮ ಸೈನ್ಯದ ಶ್ರೀಮಂತ ಇತಿಹಾಸದಲ್ಲಿ ಅವರ ಹೆಸರು ಶಾಶ್ವತ ಉಳಿಯುತ್ತದೆ ಎಂದರು.