ಜೋಧ್ಪುರ: ಭಾರತ ಮತ್ತು ಫ್ರಾನ್ಸ್‌ನ ವಾಯುಪಡೆ 5 ದಿನಗಳ ಜಂಟಿ ಸಮರಾಭ್ಯಾಸ 'ಡೆಸರ್ಟ್ ನೈಟ್ -21'ನ ಪ್ರಾರಂಭವಾಗಿದ್ದು, ಫ್ರಾನ್ಸ್‌ನ ಯುದ್ಧ ವಿಮಾನ ಜೋಧ್ಪುರಗೆ ಬಂದು ತಲುಪಿವೆ.
ಫ್ರೆಂಚ್ ವಾಯುಪಡೆಯ ಯುದ್ಧ ನೌಕೆ ರಫೇಲ್ ಜೊತೆಗಿನ ವಾಯುಪಡೆಯ ತಂಡವು ಮಂಗಳವಾರ ಸಂಜೆ ವೇಳೆಗೆ ಜೋಧಪುರ ವಾಯುಪಡೆ ನಿಲ್ದಾಣವನ್ನು ತಲುಪಿದ್ದವು. ಈ ಅಭ್ಯಾಸದಲ್ಲಿ ಅತ್ಯಂತ ಆಸಕ್ತಿದಾಯಕ ವಿಷಯ ಎಂದರೆ 'ರಾಫೆಲ್ ವಿರುದ್ಧ ರಾಫೆಲ್ ಹೋರಾಟ'.

ಇಂದು ಮುಖ್ಯ ರಕ್ಷಣಾ ಸಿಬ್ಬಂದಿ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಒಂದು ಗಂಟೆಗಳ ಕಾಲ ಫ್ರೆಂಚ್ ರಾಫೆಲ್ ಫೈಟರ್ನ್ನು ಹಾರಿಸಲಿದ್ದಾರೆ. ಜಂಟಿ ಸಮರಾಭ್ಯಾಸದಿಂದಾಗಿ ಉಭಯ ದೇಶಗಳ ವಾಯುಪಡೆಗಳ ನಡುವೆ ಪರಸ್ಪರ ಕಾರ್ಯಕ್ಷಮತೆ ಹೆಚ್ಚಿಸುತ್ತದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಫ್ರಾನ್ಸ್‌ನಲ್ಲಿ ನಿರ್ಮಿಸಲಾದ ರಾಫೆಲ್ ಯುದ್ಧನೌಕೆ ಕಳೆದ ವರ್ಷ ಭಾರತೀಯ ವಾಯುಪಡೆಗೆ ಸೇರಿತು. ಈಗ ಭಾರತೀಯ ಪೈಲಟ್ ದೀರ್ಘಕಾಲದವರೆಗೆ ರಾಫೆಲ್ ವಿಮಾನ ಹಾರಾಟ ನಡೆಸುತ್ತಿರುವ ಫ್ರೆಂಚ್ ಪೈಲಟ್‌ನನ್ನು ಭಾರತೀಯ ಪೈಲಟ್ ಎದುರಿಸಲಿದ್ದಾರೆ. ಈ ರೀತಿಯ ಸಮರಾಭ್ಯಾಸದಲ್ಲಿ ಭಾರತೀಯ ಪೈಲಟ್‌ಗಳು ಫ್ರಾನ್ಸ್ ಪೈಲಟ್‌ಗಳಿಂದ ಯಾವರೀತಿ ರಫೇಲ್ ವಿಮಾನವನ್ನು ಹಾರಾಟ ನಡೆಸಬೇಕು ಎಂದು ತಿಳಿದುಕೊಳ್ಳುತ್ತಾರೆ.
ಭಾರತ ಮತ್ತು ಫ್ರಾನ್ಸ್ ನಡುವಿನ 2 ವರ್ಷಗಳ ಈ ಸಮರಾಭ್ಯಾಸ ಗರುಡಕ್ಕಿಂತ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಫ್ರಾನ್ಸ್‌ನ ಸುಮಾರು 174 ವಾಯುಪಡೆಗಳೊಂದಿಗೆ ರಾಫೆಲ್, ಏರ್‌ಬಸ್ ಎ-330, ಮಲ್ಟಿರೋಲ್ ಟ್ಯಾಂಕರ್ ಸಾರಿಗೆ, ಎ- 400 ಯುದ್ಧತಂತ್ರದ ಸಾರಿಗೆ ವಿಮಾನಗಳು ಭಾಗವಹಿಸಲಿದ್ದು, ಭಾರತದ ಮಿರಾಜ್ 2000, ಸುಖೋಯ್ 30, ರಾಫೆಲ್, ಇಲ್ -78 ವಿಮಾನ ಸಮರಾಭ್ಯಾಸದಲ್ಲಿ ಭಾಗಿಯಾಗಲಿದೆ.