ಜಮ್ಮು-ಕಾಶ್ಮೀರ: ಒಂದೇ ದಿನದಲ್ಲಿ 4,926 ಹೊಸ ಕೋವಿಡ್ ಕೇಸ್ಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲಾಗಿದ್ದು, ಕೇಂದ್ರಾಡಳಿತ ಪ್ರದೇಶದ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ.
ಜಮ್ಮುವಿನ ಹೃದ್ರೋಗ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಜಾಸ್ತಿಯಾಗಿ, ಹಾಸಿಗೆಗಳ ಕೊರತೆ ಎದುರಾಗಿ ಅವ್ಯವಸ್ಥೆ ಉಂಟಾಗಿದೆ. ಹೊಸದಾಗಿ ಬಂದ ರೋಗಿಗಳನ್ನು ದಾಖಲಿಸಿಕೊಳ್ಳಲಾಗದೇ ಆಸ್ಪತ್ರೆ ಮುಂಭಾಗದ ಉದ್ಯಾನವನದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಅಯ್ಯೋ ದೇವರೆ... ಕೋವಿಡ್ ರೋಗಿಗಳಿಗೆ ಮರದ ಕೆಳಗೆ ಚಿಕಿತ್ಸೆ, ಇಂದೆಂಥಾ ಸ್ಥಿತಿ ನೋಡಿ!
ಆಕ್ಸಿಜನ್ ಸಿಲಿಂಡರ್ನೊಂದಿಗೆ ಕೋವಿಡ್ ಸೋಂಕಿತರು, ಅವರ ಸಂಬಂಧಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಉದ್ಯಾನವನದಲ್ಲಿರುವ ದೃಶ್ಯಗಳನ್ನು ನಾವಿಲ್ಲಿ ಕಾಣಬಹುದಾಗಿದೆ.
ಮೊನ್ನೆಯಷ್ಟೇ ಮಧ್ಯಪ್ರದೇಶದ ಆಗ್ರಾಮಾಲ್ವಾದ ಆಸ್ಪತ್ರೆಯಲ್ಲಿ ಬೆಡ್ಗಳ ಅಭಾವದಿಂದಾಗಿ ಕೊರೊನಾ ರೋಗಿಗಳಿಗೆ ಮರದ ಕೆಳಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿತ್ತು.