ETV Bharat / bharat

ನವೆಂಬರ್ 16ರಿಂದ ಹೊಸ ಮಾದರಿಯಲ್ಲಿ CBSE ಬೋರ್ಡ್ ಪರೀಕ್ಷೆ - ಹೊಸ ಮಾದರಿಯಲ್ಲಿ ಸಿಬಿಎಸ್​ಇ ಪರೀಕ್ಷೆ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(CBSE) 12ನೇ ತರಗತಿಯ ಮೊದಲ ಅವಧಿಯ ಪರೀಕ್ಷೆಯು ನವೆಂಬರ್ 16 ರಿಂದ ಪ್ರಾರಂಭವಾಗಲಿದ್ದು, ಎರಡನೇ ಅವಧಿಯ ಪರೀಕ್ಷೆ ಮುಂದಿನ ವರ್ಷ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.

CBSE to conduct board examination in new pattern from Nov 16
ನವೆಂಬರ್ 16ರಿಂದ ಹೊಸ ಮಾದರಿಯಲ್ಲಿ ಸಿಬಿಎಸ್​ಇ ಬೋರ್ಡ್ ಪರೀಕ್ಷೆ
author img

By

Published : Nov 14, 2021, 4:00 PM IST

ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಹೊಸ ಮಾದರಿಯಲ್ಲಿ (New Pattern) ಬೋರ್ಡ್​​ ಪರೀಕ್ಷೆಗಳನ್ನು ನಡೆಸಲಿದ್ದು, ಮೊದಲ ಅವಧಿಯ ಪರೀಕ್ಷೆಯಲ್ಲಿ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

12ನೇ ತರಗತಿಯ ಮೊದಲ ಅವಧಿಯ ಪರೀಕ್ಷೆಯು ನವೆಂಬರ್ 16 ರಿಂದ ಪ್ರಾರಂಭವಾಗಲಿದ್ದು, 10ನೇ ತರಗತಿಯ ಪರೀಕ್ಷೆಯು ನವೆಂಬರ್ 17ರಂದು ಪ್ರಾರಂಭವಾಗುತ್ತದೆ. ಈ ಬಾರಿ ಸಿಬಿಎಸ್​ಇ ಎರಡು ಅವಧಿಗಳಲ್ಲಿ ಪರೀಕ್ಷೆಗಳನ್ನು ನಡೆಸುತ್ತದೆ. ಈಗ ಮೊದಲ ಅವಧಿಯ ಪರೀಕ್ಷೆಗಳು ನಡೆಯಲಿದ್ದು, ಮುಂದಿನ ವರ್ಷ ಮಾರ್ಚ್-ಏಪ್ರಿಲ್‌ನಲ್ಲಿ ಎರಡನೇ ಅವಧಿಯ ಪರೀಕ್ಷೆ ನಡೆಯುವ ನಿರೀಕ್ಷೆಯಿದೆ.

ನವೆಂಬರ್ 16ರಿಂದ ಆರಂಭವಾಗಲಿರುವ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಓದುವ ಸಮಯವನ್ನು ಐದು ನಿಮಿಷಗಳ ಕಾಲ ವಿಸ್ತರಣೆ ಮಾಡಲಾಗಿದೆ. ಅಂದರೆ ಮೊದಲು 15 ನಿಮಿಷ ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಈಗ 20 ನಿಮಿಷ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಒಟ್ಟು 90 ನಿಮಿಷ ನೀಡಲಾಗುತ್ತದೆ ಎಂದು ಸಿಬಿಎಸ್​ಇ (Central Board of Secondary Education) ಹೇಳಿದೆ.

ಪ್ರತಿ ಪ್ರಶ್ನೆಯು ನಾಲ್ಕು ಆಯ್ಕೆಗಳನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ಅದರಲ್ಲಿ ಸರಿಯಾದ ಆಯ್ಕೆಯನ್ನು ಮಾರ್ಕ್ ಮಾಡಬೇಕು. ಎಲ್ಲಾ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ, ಫಲಿತಾಂಶ ನೀಡಲಾಗುತ್ತದೆ.

ಕೋವಿಡ್ ಕಾರಣದಿಂದಾಗಿ ವಿದ್ಯಾರ್ಥಿಗಳು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಒಂದು ಪರೀಕ್ಷಾ ಕೇಂದ್ರದಲ್ಲಿ ಕೇವಲ 350 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿಯ ನಡುವೆ ಆರು ಅಡಿ ಅಂತರವಿರುವಂತೆ ನೋಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ:ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಶಾಮೀಲಾದ್ರೂ ಬಿಡಲ್ಲ, ಬಲಿ ಹಾಕ್ತೀವಿ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.