ETV Bharat / bharat

ಜಾನುವಾರು ಕಳ್ಳಸಾಗಣೆ ಪ್ರಕರಣ: ಟಿಎಂಸಿ ನಾಯಕ ಅನುಬ್ರತಾ ಪುತ್ರಿ ಸುಕನ್ಯಾ​ಗೂ ಸಿಬಿಐ ಸಮನ್ಸ್ - ಸಿಬಿಐ ಸಮನ್ಸ್

ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಈಗಾಗಲೇ ಟಿಎಂಸಿ ಪಕ್ಷದ ಪ್ರಭಾವಿ ನಾಯಕ ಅನುಬ್ರತಾ ಮಂಡಲ್ ಬಂಧನಕ್ಕೆ ಒಳಗಾಗಿದ್ದು, ಈಗ ಸುಕನ್ಯಾ ಮಂಡಲ್​ಗೆ ಸಿಬಿಐ ಸಮನ್ಸ್​ ನೀಡಿದೆ.

CBI summons Anubrata Mondal's daughter in cattle smuggling case
ಜಾನುವಾರು ಕಳ್ಳಸಾಗಣೆ ಪ್ರಕರಣ: ಟಿಎಂಸಿ ನಾಯಕ ಅನುಬ್ರತಾ ಪುತ್ರಿ ಸುಕನ್ಯಾ​ಗೂ ಸಿಬಿಐ ಸಮನ್ಸ್
author img

By

Published : Sep 23, 2022, 3:15 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕ ಅನುಬ್ರತಾ ಮಂಡಲ್ ಅವರ ಪುತ್ರಿ ಸುಕನ್ಯಾ ಮಂಡಲ್​ಗೂ ಸಿಬಿಐ ಸಮನ್ಸ್ ಜಾರಿ ಮಾಡಿದೆ.

ಕೇಂದ್ರೀಯ ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ ಶುಕ್ರವಾರ ಬೆಳಗ್ಗೆ ಸುಕನ್ಯಾ ಮಂಡಲ್​ಗೆ ಸಮನ್ಸ್​​ ಕಳುಹಿಸಲಾಗಿದೆ. ಇದಕ್ಕೂ ಮುನ್ನ ಸಿಬಿಐ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ನಿವಾಸದಲ್ಲೇ ಸುಕನ್ಯಾರನ್ನು ವಿಚಾರಣೆಗೂ ಒಳಪಡಿಸಿದ್ದರು.

ಸುಕನ್ಯಾ ಮಂಡಲ್ ಮತ್ತು ಆಕೆಯ ತಂದೆ ಅನುಬ್ರತಾ ಮಂಡಲ್​ ಹೆಸರಿನಲ್ಲಿ ನಡೆಸುತ್ತಿರುವ ವ್ಯವಹಾರಗಳ ಕುರಿತು ಸಿಬಿಐ ಹಲವು ದಾಖಲೆಗಳನ್ನು ಕೇಳಿದೆ. ಈ ಹಿಂದೆ ಸುಕನ್ಯಾ ಅವರ ತಂದೆಯ ಆಸ್ತಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದಾಗ ಈ ಪ್ರಶ್ನೆಗಳನ್ನು ತನ್ನ ತಂದೆಯ ವ್ಯವಹಾರದ ಖಾತೆಗಳನ್ನು ನೋಡಿಕೊಳ್ಳುವ ಮನೀಶ್ ಕೊಠಾರಿಗೆ ಕೇಳಬೇಕೆಂದು ಸುಕನ್ಯಾ ಹೇಳಿದ್ದರು ಎಂದು ಸಿಬಿಐ ಮೂಲಗಳು ತಿಳಿಸಿವೆ.

ಇನ್ನು, ಟಿಎಂಸಿ ಪಕ್ಷದ ಪ್ರಭಾವಿ ನಾಯಕರಾದ ಅನುಬ್ರತಾ ಮಂಡಲ್ ಈಗಾಗಲೇ ಬಂಧನಕ್ಕೆ ಒಳಗಾಗಿದ್ದು, ಈ ಹಿಂದೆ ಆಪ್ತರಿಗೂ ಸಿಬಿಐ ಸಮನ್ಸ್​ ಜಾರಿ ಮಾಡಿತ್ತು. ಇದೀಗ ಪುತ್ರಿ ಸುಕನ್ಯಾ ಮಂಡಲ್​ಗೂ ಸಮನ್ಸ್ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: ಜಾನುವಾರು ಕಳ್ಳಸಾಗಣೆ ಕೇಸ್​: ಪಶ್ಚಿಮಬಂಗಾಳದಲ್ಲಿ ಟಿಎಂಸಿ ನಾಯಕನ ಬಂಧಿಸಿದ ಸಿಬಿಐ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.