ETV Bharat / bharat

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ: ಕೋಲ್ಕತ್ತಾದ ಉದ್ಯಮಿ ಮನೆಯಲ್ಲಿ ಪರಿಶೀಲನೆ ನಡೆಸುತ್ತಿರುವ ಸಿಬಿಐ - the coal smuggling case investigation news

ಕಲ್ಲಿದ್ದಲು ಕಳ್ಳಸಾಗಣೆ ಕುರಿತ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಕೋಲ್ಕತ್ತಾ ಮೂಲದ ಉದ್ಯಮಿ ರಣಧೀರ್ ಕುಮಾರ್ ಬಾರ್ನ್ವಾಲ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಕೋಲ್ಕತ್ತಾದ ಉದ್ಯಮಿ ಮನೆಯಲ್ಲಿ ಪರಿಶೀಲನೆ ನಡೆಸುತ್ತಿರುವ ಸಿಬಿಐ

author img

By

Published : Feb 26, 2021, 12:18 PM IST

Updated : Feb 26, 2021, 1:21 PM IST

ಕೋಲ್ಕತ್ತಾ: ಕಲ್ಲಿದ್ದಲು ಕಳ್ಳಸಾಗಣೆ ಕುರಿತ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜೀರಾ ಬ್ಯಾನರ್ಜಿಯ ವಿಚಾರಣೆಯ ಬಳಿಕ ಈಗ ಸಿಬಿಐ ಕೋಲ್ಕತ್ತಾ ಮೂಲದ ಉದ್ಯಮಿ ರಣಧೀರ್ ಕುಮಾರ್ ಬಾರ್ನ್ವಾಲ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಸಿಬಿಐ ತಂಡವು ಬಾರ್ನ್‌ವಾಲ್‌ ಅವರ ವಸತಿ ನಿಲಯದ ಆವರಣದಲ್ಲಿ ಶೋಧ ನಡೆಸುತ್ತಿದೆ ಎಂದು ತನಿಖೆಗೆ ಸಂಬಂಧಿಸಿದ ಏಜೆನ್ಸಿ ಮೂಲಗಳು ತಿಳಿಸಿವೆ.

ಕಳೆದ ವರ್ಷ ನವೆಂಬರ್‌ನಲ್ಲಿ ಸಿಬಿಐ ಪಿಲ್‌ಫರೇಜ್ ದಂಧೆಯ ಕಿಂಗ್‌ಪಿನ್ ಅನುಪ್ ಮಾಜಿ ಅಲಿಯಾಸ್ ಲಾಲಾ, ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್ ಜನರಲ್ ಮ್ಯಾನೇಜರ್‌ಗಳಾದ ಅಮಿತ್ ಕುಮಾರ್ ಧಾರ್ ಮತ್ತು ಜಯೇಶ್ ಚಂದ್ರ ರೈ, ಇಸಿಎಲ್ ಭದ್ರತಾ ಮುಖ್ಯಸ್ಥ ತನ್ಮಯ್ ದಾಸ್, ಏರಿಯಾ ಸೆಕ್ಯುರಿಟಿ ಇನ್ಸ್‌ಪೆಕ್ಟರ್ ಕುನುಸ್ತೋರಿಯಾ ಧನಂಜಯ್ ರೈ ಮತ್ತು ಎಸ್‌ಎಸ್‌ಐ ಮತ್ತು ಭದ್ರತಾ ಉಸ್ತುವಾರಿ ಕಜೋರಾ ಪ್ರದೇಶ ದೇಬಾಶಿಶ್ ಮುಖರ್ಜಿ ವಿರುದ್ಧ ಪ್ರಕರಣ ದಾಖಲಿಸಿತ್ತು.

ನಂತರ, ನವೆಂಬರ್ 28 ರಂದು ಅನೇಕ ಸಿಬಿಐ ತಂಡಗಳು ಕಲ್ಲಿದ್ದಲು ಕಳ್ಳಸಾಗಣೆ ದಂಧೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ 45 ಸ್ಥಳಗಳಲ್ಲಿ ದಾಳಿ ನಡೆಸಿವೆ.

Last Updated : Feb 26, 2021, 1:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.