ಪಾಟ್ನಾ (ಬಿಹಾರ): ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ನಿಂದ ನೋಟಿಸ್ ಜಾರಿಯಾದ ಬೆನ್ನಲ್ಲೇ ಸಿಬಿಐ ತಂಡ ರಾಬ್ರಿ ದೇವಿ ಯಾದವ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ. ಈ ಬಾರಿ ಉದ್ಯೋಗದಲ್ಲಿ ಹಗರಣ ಸಂಬಂಧ 12 ಮಂದಿಯ ಸಿಬಿಐ ತಂಡ ದಾಳಿ ನಡೆಸಿದೆ. ಜಮೀನು ಹಗರಣ ಸಂಬಂಧವೂ ಸಿಬಿಐ ಬಹಳ ದಿನಗಳಿಂದ ರಾಬ್ರಿ ದೇವಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ಈ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆ ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದು, ವಿಶೇಷ ನ್ಯಾಯಾಲಯವು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಆರೋಪಿಗಳಿಗೆ ಮಾರ್ಚ್ 15 ರಂದು ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಸಿಬಿಐ ಸೆಪ್ಟೆಂಬರ್ 23, 2021 ರಂದು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಿತ್ತು ಮತ್ತು ನಂತರ ಮೇ 18, 2022 ರಂದು ಪ್ರಥಮ ಮಾಹಿತಿ ವರದಿಯನ್ನೂ ಸಲ್ಲಿಸಿದೆ.
ಏನಿದು ಪ್ರಕರಣ: 2004-2009ರಲ್ಲಿ ಅವರು ರೈಲ್ವೆ ಸಚಿವರಾಗಿದ್ದಾಗ ವಿವಿಧ ವಲಯಗಳಲ್ಲಿ ಗ್ರೂಪ್ “ಡಿ” ಹುದ್ದೆ ನೇಮಕಕ್ಕೆ ಪ್ರತಿಯಾಗಿ ಉದ್ಯೋಗ ಆಕಾಂಕ್ಷಿಗಳು ತಮ್ಮ ಭೂಮಿಯನ್ನು ಲಾಲು ಪ್ರಸಾದ್ ಅವರ ಸಂಬಂಧಿಕರಿಗೆ ಮಾರಾಟ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತನಿಖಾ ಸಂಸ್ಥೆ ಆರೋಪಿಸಿದೆ. ಎಫ್‌ಐಆರ್‌ನಲ್ಲಿ ಅವರ ಪತ್ನಿ ರಾಬ್ರಿ ದೇವಿ ಮತ್ತು ಅವರ ಪುತ್ರಿಯರಾದ ಮಿಸಾ ಯಾದವ್ ಮತ್ತು ಹೇಮಾ ಯಾದವ್ ಮತ್ತು ಪ್ರತಿಯಾಗಿ ಉದ್ಯೋಗಕ್ಕಾಗಿ ತಮ್ಮ ಭೂಮಿಯನ್ನು ವರ್ಗಾಯಿಸಿದ ಇತರ 12 ಮಂದಿಯ ಹೆಸರೂ ಇದೆ.
ಪಾಟ್ನಾದಲ್ಲಿ ಸುಮಾರು 1,05,292 ಚದರ ಅಡಿ ಭೂಮಿಯನ್ನು ಲಾಲು ಪ್ರಸಾದ್ ಅವರ ಸಂಬಂಧಿಕರು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ, ಅದರ ಮೌಲ್ಯವು ಪ್ರಸ್ತುತ ಸರ್ಕಲ್ ದರದ ಪ್ರಕಾರ ಸುಮಾರು 4.39 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಐದು ಸೇಲ್ ಡೀಡ್‌ಗಳು ಮತ್ತು ಎರಡು ಗಿಫ್ಟ್ ಡೀಡ್‌ಗಳ ಮೂಲಕ ಭೂಮಿಯನ್ನು ವರ್ಗಾಯಿಸಲಾಗಿದೆ ಮತ್ತು ಹೆಚ್ಚಿನ ಮಾರಾಟ ಪತ್ರಗಳಲ್ಲಿ ಮಾರಾಟಗಾರರಿಗೆ ಪಾವತಿಯನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ ಎಂದು ವರದಿ ತಿಳಿಸಿದೆ. ಪ್ರಚಲಿತದಲ್ಲಿರುವ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಪ್ರಸಾದ್ ಅವರ ಕುಟುಂಬದ ಸದಸ್ಯರು ನೇರವಾಗಿ ಮಾರಾಟಗಾರರಿಂದ ಭೂಮಿ ಖರೀದಿಸಿದ್ದಾರೆ ಎನ್ನಲಾಗಿದೆ.
-
जो विपक्षी नेता भाजपा के सामने झुकने को तैयार नहीं हैं, उन्हें ED-CBI के जरिये प्रताड़ित किया जा रहा है।
— Priyanka Gandhi Vadra (@priyankagandhi) March 6, 2023 " class="align-text-top noRightClick twitterSection" data="
आज राबड़ी देवी जी को परेशान किया जा रहा है। @laluprasadrjd जी व उनके परिवार को वर्षों से प्रताड़ित किया जा रहा है, क्योंकि वे झुके नहीं।
भाजपा विपक्ष की आवाज दबाना चाहती है।
">जो विपक्षी नेता भाजपा के सामने झुकने को तैयार नहीं हैं, उन्हें ED-CBI के जरिये प्रताड़ित किया जा रहा है।
— Priyanka Gandhi Vadra (@priyankagandhi) March 6, 2023
आज राबड़ी देवी जी को परेशान किया जा रहा है। @laluprasadrjd जी व उनके परिवार को वर्षों से प्रताड़ित किया जा रहा है, क्योंकि वे झुके नहीं।
भाजपा विपक्ष की आवाज दबाना चाहती है।जो विपक्षी नेता भाजपा के सामने झुकने को तैयार नहीं हैं, उन्हें ED-CBI के जरिये प्रताड़ित किया जा रहा है।
— Priyanka Gandhi Vadra (@priyankagandhi) March 6, 2023
आज राबड़ी देवी जी को परेशान किया जा रहा है। @laluprasadrjd जी व उनके परिवार को वर्षों से प्रताड़ित किया जा रहा है, क्योंकि वे झुके नहीं।
भाजपा विपक्ष की आवाज दबाना चाहती है।
ದಾಳಿ ಬಗ್ಗೆ ತೇಜಸ್ವಿಯಾದವ್ ಕಿಡಿಕಿಡಿ: ಈ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಹಾರ ಉಪಮುಖ್ಯಮಂತ್ರಿ, ರಾಬ್ರಿ ದೇವಿ ಯಾದವ್ ಮಗ ತೇಜಸ್ವಿ ಯಾದವ್ ಸಿಬಿಐಗೆ ಉತ್ತಮ ಸಲಹೆ ನೀಡಿದ್ದಾರೆ. ಪದೇ ಪದೆ ಮನೆ ಮೇಲೆ ದಾಳಿ ಮಾಡುವುದರಿಂದ ಸರ್ಕಾರದ ಹಣ ಖರ್ಚಾಗುತ್ತದೆ. ಅದರ ಬದಲು ಸಿಬಿಐ ತಮ್ಮ ನಿವಾಸದಲ್ಲಿಯೇ ಕಚೇರಿ ತೆರೆಯಬಹುದು ಎಂದು ಸಿಬಿಐ ದಾಳಿಯನ್ನು ಟೀಕಿಸಿದ್ದಾರೆ.
ಬಿಜೆಪಿಯನ್ನು ಪ್ರಶ್ನಿಸುವವರಿಗೆ ಇದದೇನು ಹೊಸದಲ್ಲ. ಇಂದು ತಮ್ಮ ತಾಯಿ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಯಾದವ್ ಅವರನ್ನು ತನಿಖಾ ದಳ ಪ್ರಶ್ನಿಸಿರುವ ಕುರಿತು ಮಾತನಾಡಿದರು. ತಮ್ಮ ಪತಿ ಲಾಲೂ ಪ್ರಸಾದ್ ಯಾದವ್ ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ವೇಳೆ ಮಾಡಲಾಗಿದೆ ಎನ್ನಲಾಗಿರುವ ಉದ್ಯೋಗದ ಹಗರಣಕ್ಕೆ ಸಂಬಂಧಿಸಿದಂತೆ ಇಂದು ನಾಲ್ಕು ಗಂಟೆಗಳ ಕಾಲ ರಾಬ್ರಿ ದೇವಿ ಅವರನ್ನು ವಿಚಾರಣೆ ನಡೆಸಲಾಯಿತು. ನಾಳೆ ಲಾಲು ಪ್ರಸಾದ್ ಯಾದವ್ ಅವರ ವಿಚಾರಣೆ ಕೂಡಾ ನಡೆಯಲಿದೆ.
ಬಿಜೆಪಿ ಜೊತೆ ಜಗಳವಾಡಿದರೆ, ಬಿಜೆಪಿಯವರನ್ನು ಪ್ರಶ್ನಿಸಿದರೆ, ಅವರು ಮಾಡುತ್ತಿರುವ ತಪ್ಪನ್ನು ತೋರಿಸಿದರೆ ಹೀಗಾಗುತ್ತದೆ. ಇದರಲ್ಲಿ ಹೊಸತೇನಿದೆ? ಎಂದು ತೇಜಸ್ವಿ ಯಾದವ್ ಸುದ್ದಿಗಾರರಿಗೆ ಮರು ಪ್ರಶ್ನಿಸಿದ್ದಾರೆ. ಆದಾಗ್ಯೂ, ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಎಂಟು ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಒಂದು ದಿನದ ನಂತರ ಈ ದಾಳಿ ನಡೆದಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಸಿಬಿಐ ಕ್ರಮ ತಪ್ಪು ಎಂದು ಪ್ರಿಯಾಂಕಾ ವಾದ್ರಾ: ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಈ ವಿಷಯದಲ್ಲಿ ಸಿಬಿಐ ಕ್ರಮ ತಪ್ಪು ಎಂದು ಹೇಳಿದ್ದಾರೆ. ಬಿಜೆಪಿ ಎದುರಿಸಿ ನಿಲ್ಲುವವರ ವಿರುದ್ಧ ಇಡಿ, ಐಟಿ - ಸಿಬಿಐ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇಂದು ಬಿಹಾರದಲ್ಲಿ ರಾಬ್ರಿ ದೇವಿಗೆ ಸಿಬಿಐ ಕಿರುಕುಳ ನೀಡುತ್ತಿದೆ. ಲಾಲು ಯಾದವ್ ಹಲವು ವರ್ಷಗಳಿಂದ ಬಿಜೆಪಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಇದರಿಂದಾಗಿಯೇ ಇಷ್ಟೆಲ್ಲ ಆಗುತ್ತಿದೆ. ಗಮನಾರ್ಹ ವಿಷಯ ಎಂದರೆ ಲಾಲು ಯಾದವ್ ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ.
ಅರವಿಂದ್ ಕೇಜ್ರಿವಾಲ್ ಗರಂ: ಮತ್ತೊಂದೆಡೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ರಾಬ್ರಿ ದೇವಿ ನಿವಾಸದ ಮೇಲೆ ದಾಳಿ ನಡೆಸಿರುವುದು ತಪ್ಪು ಎಂದಿದ್ದಾರೆ. ಪ್ರತಿಪಕ್ಷಗಳ ನಾಯಕರ ನಿವಾಸಗಳ ಮೇಲೆ ದಾಳಿ ನಡೆಸುವುದು ಸರಿಯಲ್ಲ ಎಂದು ಅವರು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರೋಧ ಇರುವ ರಾಜ್ಯಗಳಲ್ಲಿ ಕೆಲಸ ಮಾಡಲು ಬಿಡುವುದಿಲ್ಲ ಎನ್ನುವುದು ಟ್ರೆಂಡ್ ಆಗುತ್ತಿದೆ ಎಂದು ನಿನ್ನೆಯೇ ಹೇಳಿದ್ದೆ. ಇಡಿ, ಸಿಬಿಐ ಅಥವಾ ರಾಜ್ಯಪಾಲರ ಮೂಲಕ ಪ್ರತಿಪಕ್ಷಗಳಿಗೆ ಕಿರುಕುಳ ನೀಡಲಾಗುತ್ತದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಶಾರದಾ ಚಿಟ್ ಫಂಡ್ ಹಗರಣ: ಮಮತಾ ಬ್ಯಾನರ್ಜಿ ಬಂಧನಕ್ಕೆ ಸಿಬಿಐ ಹಿಂದೇಟು: ಮೋದಿಗೆ ಪತ್ರ ಬರೆದ ಸುವೇಂದು ಅಧಿಕಾರಿ