ETV Bharat / bharat

ಬ್ಯಾಂಕ್‌ಗಳಿಗೆ ₹22,842 ಕೋಟಿ ವಂಚನೆ: ABG ಶಿಪ್‌ಯಾರ್ಡ್ ವಿರುದ್ಧ FIR ದಾಖಲಿಸಿದ ಸಿಬಿಐ - ಹಡಗು ನಿರ್ಮಾಣ ಸಂಸ್ಥೆ ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್

ಭಾರತದ ಅತಿದೊಡ್ಡ ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಸಂಸ್ಥೆಗಳಲ್ಲಿ ಒಂದಾದ ಎಬಿಜಿ ಶಿಪ್‌ಯಾರ್ಡ್, 28 ಬ್ಯಾಂಕ್‌ಗಳಿಗೆ ಬರೋಬ್ಬರಿ 22,842 ಕೋಟಿ ರೂಪಾಯಿ ವಂಚಿಸಿದ ಆರೋಪ ಕೇಳಿ ಬಂದಿದೆ.

ಎಬಿಜಿ ಶಿಪ್‌ಯಾರ್ಡ್
ಎಬಿಜಿ ಶಿಪ್‌ಯಾರ್ಡ್
author img

By

Published : Feb 13, 2022, 1:40 PM IST

ಸೂರತ್​ (ಗುಜರಾತ್​): ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ಮತ್ತು ಅದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರ್ವಾಲ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ.

ಖಾಸಗಿ ವಲಯದಲ್ಲಿ ಭಾರತದ ಅತಿದೊಡ್ಡ ಹಡಗು ನಿರ್ಮಾಣ ಮತ್ತು ಮತ್ತು ಹಡಗು ದುರಸ್ತಿ ಸಂಸ್ಥೆಗಳಲ್ಲಿ ಒಂದಾದ ಎಬಿಜಿ ಶಿಪ್‌ಯಾರ್ಡ್, 28 ಬ್ಯಾಂಕ್‌ಗಳಿಗೆ 22,842 ಕೋಟಿ ರೂಪಾಯಿ ವಂಚಿಸಿದ ಆರೋಪ ಕೇಳಿ ಬಂದಿದ್ದು, ಇದು ಭಾರತದ ಇತಿಹಾಸದಲ್ಲಿ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣವಾಗಿದೆ.

ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರ್ವಾಲ್ ಮಾತ್ರವಲ್ಲದೇ ಕಂಪನಿಯ ಸೂರತ್, ಭರೂಚ್, ಮುಂಬೈ, ಪುಣೆ ವಿಭಾಗದ ನಿರ್ದೇಶಕರ ಕಚೇರಿ ಸೇರಿದಂತೆ 13 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕಂಪನಿಯ ಕೇಂದ್ರ ಕಚೇರಿ ಗುಜರಾತ್‌ನ ದಹೇಜ್ ಮತ್ತು ಸೂರತ್‌ನಲ್ಲಿವೆ. ಸಾಗರೋತ್ತರ ಗ್ರಾಹಕರಿಗೆ ಸೇರಿ ಕಂಪನಿಯು ಕಳೆದ 16 ವರ್ಷಗಳಲ್ಲಿ 165 ಹಡಗುಗಳನ್ನು ನಿರ್ಮಿಸಿದೆ.

ಏನಿದು ಪ್ರಕರಣ?: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ನೀಡಿದ ದೂರಿನ ಮೇರೆಗೆ ಪ್ರಕರಣ ಬೆಳಕಿಗೆ ಬಂದಿದೆ. ಎಸ್​ಬಿಐ ಒಕ್ಕೂಟದಡಿ ಬರುವ 28 ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಎಬಿಜಿ ಶಿಪ್‌ಯಾರ್ಡ್ ಕಂಪನಿಯು 22,842 ಕೋಟಿ ರೂಪಾಯಿ ವಂಚಿಸಿದೆ. ಇದರಲ್ಲಿ ಎಬಿಜಿ ಶಿಪ್‌ಯಾರ್ಡ್ ಐಸಿಐಸಿಐ ಬ್ಯಾಂಕ್‌ಗೆ 7,089 ಕೋಟಿ ರೂ, ಐಡಿಬಿಐ ಬ್ಯಾಂಕ್‌ಗೆ 3,639 ಕೋಟಿ ರೂ, ಸ್ಟೇಟ್ ಬ್ಯಾಂಕ್‌ಗೆ 2,925 ಕೋಟಿ ರೂ, ಬ್ಯಾಂಕ್ ಆಫ್ ಬರೋಡಾಕ್ಕೆ 1,614 ಕೋಟಿ ರೂ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 1,244 ಕೋಟಿ ರೂ. ಸೇರಿದೆ.

ಬ್ಯಾಂಕ್​​ಗಳೀಗೆ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಎಲ್ಲರೂ ವಂಚಿಸಿದ್ದು ಸೇರಿಸಿದರೆ ಸುಮಾರು 22 ಸಾವಿರ ಕೋಟಿ ರೂ. ಆಗುತ್ತದೆ. ಆದರೆ ಎಬಿಜಿ ಶಿಪ್‌ಯಾರ್ಡ್ ಒಂದೇ ಇದಕ್ಕಿಂತಲೂ ಹೆಚ್ಚು ವಂಚಿಸಿದ್ದು, ಭಾರತದ ಇತಿಹಾಸದಲ್ಲಿ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣವಾಗಿದೆ.

ಇದನ್ನೂ ಓದಿ: 'ಮನೀಚೋ'ರರು ದೇಶಕ್ಕೆ ವಂಚಿಸಿದ್ದು 22 ಸಾವಿರ ಕೋಟಿ: ಇದ್ರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಆಸ್ತಿ ಜಪ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.