ಮುಂಬೈ (ಮಹಾರಾಷ್ಟ್ರ) : ಪೊಲೀಸ್ ವರ್ಗಾವಣೆ, ಪೋಸ್ಟಿಂಗ್ ಕುರಿತಂತೆ ರಾಜ್ಯ ಗುಪ್ತಚರ ಇಲಾಖೆಯ ಮಾಹಿತಿ ಸೋರಿಕೆಯಾದ ಹಿನ್ನೆಲೆ ಸಿಬಿಐ ನಿರ್ದೇಶಕರಿಗೆ ಮುಂಬೈ ಪೊಲೀಸ್ನ ಸೈಬರ್ ಸೆಲ್ ಸಮನ್ಸ್ ನೀಡಿದೆ.
ಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ಗೆ ಮುಂಬೈ ಪೊಲೀಸ್ನ ಸೈಬರ್ ಸೆಲ್ ಸಮನ್ಸ್ ಜಾರಿ ಮಾಡಿದೆ. ಅಕ್ಟೋಬರ್ 14ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ; ಅ.18ಕ್ಕೆ ದೇಶಾದ್ಯಂತ ರೈಲು ತಡೆಗೆ 40 ರೈತ ಸಂಘಟನೆಗಳು ಕರೆ
ಅಧಿಕಾರಿಗಳ ವರ್ಗಾವಣೆಯ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಭಾಗಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.