ETV Bharat / bharat

ನಟ ಸುಶಾಂತ್​ ಸಿಂಗ್​ ಮ್ಯಾನೇಜರ್​ ದಿಶಾ ಸಾಲಿಯಾನ್ ಸಾವು ಆಕಸ್ಮಿಕ : ಸಿಬಿಐ - ಈಟಿವಿ ಭಾರತ ಕನ್ನಡ ನ್ಯೂಸ್​​

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವು ಆಕಸ್ಮಿಕ ಎಂದು ಸಿಬಿಐ ತಿಳಿಸಿದೆ.

cbi-concludes-disha-salians-death-was-an-accident
ದಿಶಾ ಸಾಲಿಯಾನ್ ಅವರ ಸಾವು ಆಕಸ್ಮಿಕ : ಸಿಬಿಐ
author img

By

Published : Nov 23, 2022, 7:35 PM IST

ಮುಂಬೈ : ಬಾಲಿವುಡ್​ನ ದಿ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವು ಆಕಸ್ಮಿಕ ಎಂದು ಸಿಬಿಐ ತಿಳಿಸಿದೆ.

2020ರ ಜೂನ್ 9ರಂದು ದಿಶಾ ಸಾಲಿಯಾನ್​ ಅವರು ಮಲಾಡ್​​ನ ಕಟ್ಟಡದ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣವನ್ನು ಪೊಲೀಸರು ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದರು. ಬಳಿಕ ಕೆಲವು ರಾಜಕೀಯ ಮುಖಂಡರ ಆರೋಪದ ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಸದ್ಯ ತನಿಖೆ ನಡೆಸಿರುವ ಸಿಬಿಐ ಮುಂಬೈ ಮೂಲದ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವು ಆಕಸ್ಮಿಕ ಎಂದು ವರದಿ ನೀಡಿದೆ.

ಇನ್ನು, ಈ ದಿಶಾ ಸಾಲಿಯಾನ್ ಸೆಲೆಬ್ರಿಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಕೆಲವು ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡಿದ್ದು, ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್​ ಆಗಿ ಖ್ಯಾತಿ ಪಡೆದಿದ್ದರು.

ಪೊಲೀಸರ ಪ್ರಕಾರ, ಜೂನ್ 9, 2020 ರಂದು, ದಿಶಾ ಕಟ್ಟಡದ 14 ನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದರು. ಅವರ ಸಾವಿನ ಹಿಂದಿನ ಕಾರಣಗಳು ಇನ್ನೂ ಪತ್ತೆಯಾಗಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಸುಶಾಂತ್ ಸಿಂಗ್ ರಜಪೂತ್ ಡೆತ್​ ಕೇಸ್​: ಮತ್ತೋರ್ವನನ್ನು ಬಂಧಿಸಿದ ಎನ್​ಸಿಬಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.