ನಾಗ್ಪುರ(ಮಹಾರಾಷ್ಟ್ರ): ಸ್ಟೆನೋಗ್ರಾಫರ್‌ಗಳಾಗಿ ಮತ್ತು ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಯಾಗಿ ಐಟಿ ವಿಭಾಗಕ್ಕೆ 2018ರಲ್ಲಿ ಸ್ಟಾಫ್ ಸೆಲೆಕ್ಷನ್ ಕಮಿಷನ್ ಪರೀಕ್ಷೆ ಬರೆಯದೇ ಸೇರಿದ್ದ 12 ಜನರ ವಿರುದ್ಧ ಎಸಿಬಿ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿತ್ತು.
12 ಜನರ ಉತ್ತರ ಪತ್ರಿಕೆಯಲ್ಲಿನ ಅಭ್ಯರ್ಥಿಗಳ ಕೈಬರಹ, ಸಹಿ ಮತ್ತು ಹೆಬ್ಬೆರಳಿನ ಗುರುತುಗಳನ್ನು ವಿಧಿ ವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಲಾಗಿತ್ತು. ಇದರಲ್ಲಿ 9 ಜನ ಡಮ್ಮಿ ಅಭ್ಯರ್ಥಿಗಳ ಕೈಯಲ್ಲಿ ಪರೀಕ್ಷೆ ಬರೆಸಿರುವುದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿಂತೆ ದಾಖಲೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಯು 9 ಜನ ಐಟಿ ಇಲಾಖೆಯ ಉದ್ಯೋಗಿಗಳನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿದೆ. ನ್ಯಾಯಾಲಯವು ಡಿಸೆಂಬರ್ 16 ರವರೆಗೆ ಆರೋಪಿಗಳನ್ನು ಕಸ್ಟಡಿಗೆ ನೀಡಿದೆ.
ಇದನ್ನೂ ಓದಿ: ಪ್ಯಾಂಟ್ನ ಸೊಂಟದ ಪಟ್ಟಿಯಲ್ಲಿ ಮರೆಮಾಚಿ ಚಿನ್ನ ಸಾಗಣೆ: ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಚಾಲಾಕಿ