ETV Bharat / bharat

ಶೂಟರ್​ ಸಿಪ್ಪಿ ಸಿಧು ಹತ್ಯೆ ಕೇಸ್​: 7 ವರ್ಷದ ಬಳಿಕ ಜಡ್ಜ್​ ಪುತ್ರಿಯನ್ನು ಬಂಧಿಸಿದ ಸಿಬಿಐ - ಸಿಪ್ಪಿ ಸಿಧು ಹತ್ಯೆ ಕೇಸಲ್ಲಿ ಜಡ್ಜ್​ ಮಗಳ ಬಂಧನ

ರಾಷ್ಟ್ರೀಯ ಶೂಟರ್​ ಹಾಗು ವಕೀಲರಾಗಿದ್ದ ಸುಖಮನ್​ಪ್ರೀತ್​ ಸಿಂಗ್​ ಸಿಧು ಕೊಲೆ ಕೇಸಲ್ಲಿ ಏಳು ವರ್ಷಗಳ ಬಳಿಕ ಸಿಬಿಐ ಅಧಿಕಾರಿಗಳು ಹಿಮಾಚಲ ಪ್ರದೇಶ ಹೈಕೋರ್ಟ್​ ನ್ಯಾಯಾಧೀಶರ ಪುತ್ರಿಯನ್ನು ಬಂಧಿಸಿದ್ದಾರೆ.

7 ವರ್ಷ ಬಳಿಕ ಜಡ್ಜ್​ ಪುತ್ರಿ ಬಂಧಿಸಿದ ಸಿಬಿಐ
7 ವರ್ಷ ಬಳಿಕ ಜಡ್ಜ್​ ಪುತ್ರಿ ಬಂಧಿಸಿದ ಸಿಬಿಐ
author img

By

Published : Jun 15, 2022, 8:09 PM IST

ಚಂಡೀಗಢ: ಮೊಹಾಲಿಯ ರಾಷ್ಟ್ರೀಯ ಶೂಟರ್ ಮತ್ತು ಪಂಜಾಬ್-ಹರಿಯಾಣ ಹೈಕೋರ್ಟ್ ವಕೀಲ ಸುಖಮನ್‌ಪ್ರೀತ್ ಸಿಂಗ್ ಸಿಧು ಅಲಿಯಾಸ್ ಸಿಪ್ಪಿ ಸಿಧು ಹತ್ಯೆ ಪ್ರಕರಣದಲ್ಲಿ 7 ವರ್ಷಗಳ ಬಳಿಕ ಹಿಮಾಚಲ ಪ್ರದೇಶ ಹೈಕೋರ್ಟ್ ನ್ಯಾಯಾಧೀಶರ ಪುತ್ರಿ ಕಲ್ಯಾಣಿ ಸಿಂಗ್​ರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.

ಬಂಧಿತ ಕಲ್ಯಾಣಿ ಅವರು ಚಂಡೀಗಢದ ಬಾಲಕಿಯರ ಸ್ನಾತಕೋತ್ತರ ಸರ್ಕಾರಿ ಕಾಲೇಜಿನಲ್ಲಿ ಗೃಹ ವಿಜ್ಞಾನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಕೊಲೆ ಆರೋಪದಲ್ಲಿ ಬಂಧಿಸಲಾಗಿರುವ ಕಲ್ಯಾಣಿ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 4 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ಪ್ರಕರಣ ಏನು?: 2015 ರ ಸೆಪ್ಟೆಂಬರ್​ 20 ರಂದು ಹೈಕೋರ್ಟ್​ನ ವಕೀಲ ಮತ್ತು ರಾಷ್ಟ್ರೀಯ ಶೂಟರ್ ಆಗಿದ್ದ ಸುಖಮನ್​ ಪ್ರೀತ್​ ಸಿಂಗ್ ಸಿಧು ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಸಿಧು ಅವರ ಮೃತದೇಹ ಸೆಕ್ಟರ್ -27 ರಲ್ಲಿರುವ ಉದ್ಯಾನವನದಲ್ಲಿ ಪೊಲೀಸರು ಪತ್ತೆ ಮಾಡಿದ್ದರು.

ದುಷ್ಕರ್ಮಿಗಳು ಸಿಧು ಮೇಲೆ ನಾಲ್ಕು ಗುಂಡುಗಳನ್ನು ಹಾರಿಸಿದ್ದರು. ಚಂಡೀಗಢ ಪೊಲೀಸರು ದಾಳಿಕೋರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು, ಅಂದಿನ ನಗರ ಎಸ್​ಪಿ ಆಗಿದ್ದ ಪರ್ಮಿಂದರ್ ಸಿಂಗ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದರು.

ಈ ಮಧ್ಯೆಯೇ ಸಿಪ್ಪಿ ಹತ್ಯೆಯನ್ನು ಪಂಜಾಬ್-ಹರಿಯಾಣ ಹೈಕೋರ್ಟ್ ನ್ಯಾಯಾಧೀಶರ ಪುತ್ರಿ ಕಲ್ಯಾಣಿಯೇ ಮಾಡಿಸಿದ್ದಾರೆ ಎಂದು ಸಿಪ್ಪಿ ಕುಟುಂಬದವರು ಆರೋಪಿಸಿದ್ದರು. ಆದರೆ, ಹಾಲಿ ನ್ಯಾಯಾಧೀಶರ ಮಗಳಾಗಿದ್ದ ಕಾರಣ ಪೊಲೀಸರು ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬುದು ಸಿಪ್ಪಿ ಕುಟುಂಬಸ್ಥರ ಆರೋಪವಾಗಿದೆ.

ಬಳಿಕ ಪೊಲೀಸರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಸತತವಾಗಿ ಒತ್ತಾಯಿಸುತ್ತಾ ಬಂದಿದ್ದರು. ಬಳಿಕ ಪಂಜಾಬ್-ಹರಿಯಾಣ ರಾಜ್ಯಪಾಲರಾಗಿದ್ದ ಕಪ್ತಾನ್ ಸಿಂಗ್ ಸೋಲಂಕಿ ಅವರ ಆದೇಶದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಇದೀಗ ಜಡ್ಜ್​ ಪುತ್ರಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆಗಾಗಿ 4 ದಿನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕಸರತ್ತು: ಪವಾರ್​ ಮನವೊಲಿಕೆ, ಫಾರೂಕ್​, ಗೋಪಾಲಕೃಷ್ಣ ಗಾಂಧಿ ಹೆಸರು ಮುನ್ನೆಲೆಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.