ನವದೆಹಲಿ: ಚುನಾವಣೆ ನಡೆಯುತ್ತಿರುವ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸಗಢ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಚುನಾವಣಾ ಆಯೋಗವು ಇಲ್ಲಿಯವರೆಗೆ 1,760 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ. ಇದು 2018 ರ ವಿಧಾನಸಭಾ ಚುನಾವಣೆಯಲ್ಲಿ ವಶಪಡಿಸಿಕೊಂಡ 239 ಕೋಟಿ ರೂ.ಗಿಂತ ಏಳು ಪಟ್ಟು ಹೆಚ್ಚಾಗಿದೆ. ಐದು ರಾಜ್ಯಗಳಲ್ಲಿ ನಿರಂತರ ಪರಿಶೀಲನೆ ಮತ್ತು ತನಿಖೆಯ ಕಾರಣದಿಂದ ಹಣ ವಶಪಡಿಸಿಕೊಳ್ಳುವಿಕೆಯಲ್ಲಿ ಭಾರಿ ಪ್ರಮಾಣದ ಹೆಚ್ಚಳವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಗುಜರಾತ್, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ಮತ್ತು ಕರ್ನಾಟಕದಲ್ಲಿ ನಡೆದ ಕಳೆದ ಆರು ವಿಧಾನಸಭಾ ಚುನಾವಣೆಗಳಲ್ಲಿ 1,400 ಕೋಟಿ ರೂ.ಗಿಂತ ಹೆಚ್ಚು ಹಣ ವಶಪಡಿಸಿಕೊಳ್ಳಲಾಗಿತ್ತು ಎಂಬುದನ್ನು ಚುನಾವಣಾ ಆಯೋಗ ಉಲ್ಲೇಖಿಸಿದೆ. ಛತ್ತೀಸಗಢದಲ್ಲಿ 20.77 ಕೋಟಿ ನಗದು, 2.16 ಕೋಟಿ ಮೌಲ್ಯದ ಮದ್ಯ, 4.55 ಕೋಟಿ ಮೌಲ್ಯದ ಡ್ರಗ್ಸ್, 22.76 ಕೋಟಿ ಮೌಲ್ಯದ ಅಮೂಲ್ಯ ಲೋಹಗಳು, 26.68 ಕೋಟಿ ಮೌಲ್ಯದ ಉಚಿತ ಕೊಡುಗೆ ವಸ್ತುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಾಗೆಯೇ ಮಧ್ಯಪ್ರದೇಶದಲ್ಲಿ 33.72 ಕೋಟಿ ರೂ. ನಗದು, 69.85 ಕೋಟಿ ರೂ.ಗಳ ಮದ್ಯ, 15.53 ಕೋಟಿ ರೂ.ಗಳ ಮಾದಕವಸ್ತುಗಳು, 84.1 ಕೋಟಿ ರೂ. ಮೌಲ್ಯದ ಅಮೂಲ್ಯ ಲೋಹಗಳು ಮತ್ತು 120.53 ಕೋಟಿ ರೂ.ಗಳ ಉಚಿತ ಕೊಡುಗೆ ವಸ್ತುಗಳು ಸೇರಿದಂತೆ 323.7 ಕೋಟಿ ರೂ.ಗಳ ಮೌಲ್ಯದ ವಸ್ತುಗಳನ್ನು ಆಯೋಗ ವಶಪಡಿಸಿಕೊಂಡಿದೆ.
ರಾಜಸ್ಥಾನದಲ್ಲಿ 93.17 ಕೋಟಿ ನಗದು, 51.29 ಕೋಟಿ ಮೌಲ್ಯದ ಮದ್ಯ, 91.71 ಕೋಟಿ ಮೌಲ್ಯದ ಡ್ರಗ್ಸ್, 73.36 ಕೋಟಿ ಮೌಲ್ಯದ ಅಮೂಲ್ಯ ಲೋಹಗಳು ಮತ್ತು 341.24 ಕೋಟಿ ಮೌಲ್ಯದ ಉಚಿತ ಕೊಡುಗೆ ವಸ್ತುಗಳು ಸೇರಿದಂತೆ 650.7 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತೆಲಂಗಾಣದಲ್ಲಿ 225.23 ಕೋಟಿ ನಗದು, 86.82 ಕೋಟಿ ಮೌಲ್ಯದ ಮದ್ಯ, 103.74 ಕೋಟಿ ಮೌಲ್ಯದ ಡ್ರಗ್ಸ್, 191.02 ಕೋಟಿ ಮೌಲ್ಯದ ಅಮೂಲ್ಯ ಲೋಹಗಳು ಮತ್ತು 52.41 ಕೋಟಿ ಮೌಲ್ಯದ ಉಚಿತ ಕೊಡುಗೆ ವಸ್ತುಗಳು ಸೇರಿದಂತೆ 659.2 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಿಜೋರಾಂನಲ್ಲಿ, ಆಯೋಗವು ಈ ವರ್ಷ 4.67 ಕೋಟಿ ರೂ.ಗಳ ಮದ್ಯ, 29.82 ಕೋಟಿ ರೂ.ಗಳ ಮಾದಕವಸ್ತುಗಳು, 15.16 ಕೋಟಿ ರೂ.ಗಳ ಉಚಿತ ವಸ್ತುಗಳು ಸೇರಿದಂತೆ 49.6 ಕೋಟಿ ರೂ.ಗಳ ಮೌಲ್ಯದ ವಶಪಡಿಸಿಕೊಂಡಿದೆ.
ಇದನ್ನೂ ಓದಿ : ಸಾಲ, ವಿಮೆ, ನೌಕರಿ ಹೆಸರಲ್ಲಿ ವಂಚಿಸುತ್ತಿದ್ದ 255 ಕಾಲ್ ಸೆಂಟರ್ ಪತ್ತೆ ಮಾಡಿದ ನೋಯ್ಡಾ ಪೊಲೀಸರು