ETV Bharat / bharat

ಮುಖ್ಯಮಂತ್ರಿ ನಿಂದನೆ ಆರೋಪ: ಸಂಜಯ್ ರಾವುತ್ ವಿರುದ್ಧ ಪ್ರಕರಣ - ಮಹಾರಾಷ್ಟ್ರ ಲೇಟೆಸ್ಟ್​​ ನ್ಯೂಸ್​​

ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ಬಣದ ನಾಯಕ ಯೋಗೇಶ್ ಬೆಲ್ದಾರ್ ಅವರು ಸಂಸದ ಸಂಜಯ್ ರಾವುತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Sanjay Raut
ಸಂಜಯ್ ರಾವುತ್
author img

By

Published : Feb 20, 2023, 9:07 AM IST

ನಾಸಿಕ್(ಮಹಾರಾಷ್ಟ್ರ): ಶಿವಸೇನೆ (ಉದ್ಧವ್‌ ಠಾಕ್ರೆ ಬಣದ) ಸಂಸದ ಸಂಜಯ್ ರಾವುತ್ ವಿರುದ್ಧ ಪ್ರಕರಣ ದಾಖಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ "ಸ್ತೋತ್ರ" ಪದವನ್ನು ಬಳಸಿ ಮುಖ್ಯಮಂತ್ರಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಸಂಜಯ್ ರಾವುತ್ ವಿರುದ್ಧ ಶಿಂಧೆ ಬಣದ ಪದಾಧಿಕಾರಿ ಯೋಗೇಶ್ ಬೆಲ್ದಾರ್ ದೂರು ನೀಡಿದ್ದಾರೆ. ದೂರಿನ ಅನ್ವಯ ನಾಸಿಕ್‌ನ ಪಂಚವಟಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 500 ಅಡಿ ಪ್ರಕರಣ ದಾಖಲಾಗಿದೆ.

ಪಕ್ಷದ ಹೆಸರು 'ಶಿವಸೇನೆ' ಹಾಗೂ ಪಕ್ಷದ ಚಿಹ್ನೆ 'ಬಿಲ್ಲು ಮತ್ತು ಬಾಣ'ವನ್ನು ಏಕನಾಥ್ ಶಿಂಧೆ ಬಣ ಉಳಿಸಿಕೊಂಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವೇ ನಿಜವಾದ​ ಶಿವಸೇನೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಇದರಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ. ರಾಜಕೀಯ ವಿವಾದದ ನಂತರ ಉದ್ಧವ್ ಠಾಕ್ರೆ ಅವರು ಮಾತೋಶ್ರೀಯಿಂದ ಹೊರಬಂದು ಕಾರ್ಯಕರ್ತರೊಂದಿಗೆ ಶನಿವಾರ ಮಧ್ಯಾಹ್ನ ಸಂವಾದ ನಡೆಸಿದರು.

ಆ ಸಮಯದಲ್ಲಿ ಉದ್ಧವ್ ಠಾಕ್ರೆ ಅವರ ಭಾಷಣವನ್ನು ಶಿಂಧೆ ಬಣ ಮತ್ತು ಬಿಜೆಪಿ ನಾಯಕರು ಟೀಕಿಸಿದರು. ಈ ಕುರಿತು ಮಾತನಾಡಿದ ರಾವುತ್, 'ಶಿಂಧೆ ಅವರಿಂದ ಸ್ತೋತ್ರ ನಡೆಯುತ್ತಿದೆ ಮತ್ತು ಅವರು ನಮಗೆ ಜ್ಞಾನವನ್ನು ನೀಡುತ್ತಿದ್ದಾರೆ. ಅವರು ಇಂದು ಮನೆಗೆ ಹೋಗಲು ಸಿದ್ಧರಿಲ್ಲ. ಈ ಬಗ್ಗೆ ಅಮಿತ್ ಶಾಗೆ ಅರಿವಿಲ್ಲದಿದ್ದರೆ ಶಾ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದಿದ್ದರು.

ಇದನ್ನೂ ಓದಿ: ಬಾಳಾಸಾಹೇಬ್ ಠಾಕ್ರೆ ಸ್ಮಾರಕಕ್ಕೆ ಏಕನಾಥ್ ಶಿಂಧೆ ಭೇಟಿ: ಪುಷ್ಪ ನಮನ ಸಲ್ಲಿಕೆ

2 ಸಾವಿರ ಕೋಟಿ ರೂ ಲಂಚ ಆರೋಪ: ಮೂಲ ಶಿವಸೇನೆ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಗಾಗಿ 2 ಸಾವಿರ ಕೋಟಿಗೂ ಅಧಿಕ ಹಣಕಾಸು ಅವ್ಯವಹಾರ ನಡೆದಿದೆ ಎಂದು ಸಂಜಯ್ ರಾವುತ್​ ಕೇಂದ್ರ ಚುನಾವಣಾ ಆಯೋಗ ಮತ್ತು ಆಡಳಿತ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮುಂಬೈನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವ ಜಯಂತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಧ್ಯಮದವರೊಂದಿಗೆ ಸಂವಾದ ನಡೆಸಿದರು.

ಹಾಜರಿದ್ದ ಪತ್ರಕರ್ತರು ಚುನಾವಣಾ ಆಯೋಗದ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, ರಾವತ್, 'ನನಗೆ ಖಚಿತವಾದ ಮಾಹಿತಿ ಇದೆ. 50 ಲಕ್ಷ ನೀಡಿ ಕಾರ್ಪೊರೇಟರ್‌ಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದರು. ಆ ನಂತರ ಶಾಸಕರು ಖರೀದಿಗೆ 50 ಕೋಟಿ, ಸಂಸದರ ಖರೀದಿಗೆ 100 ಕೋಟಿ ಕೊಡುತ್ತಿದ್ದಾರೆ. ಅಲ್ಲದೇ ಅವರು ಚುನಾವಣಾ ಆಯೋಗದಿಂದ ಹೆಸರು ಮತ್ತು ಶಿವಸೇನೆ ಚಿಹ್ನೆಯನ್ನು ಖರೀದಿಸಿದ್ದಾರೆ. ಚುನಾವಣಾ ಆಯೋಗದ ಈ ತೀರ್ಪು ನ್ಯಾಯ ಸಮ್ಮತವಲ್ಲ. ಇದಕ್ಕಾಗಿ 2 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ರಾವುತ್ ದೂರಿದ್ದಾರೆ.

ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಣಕ್ಕೆ ಮೂಲ ಶಿವಸೇನೆ ಹೆಸರು ಮತ್ತು ಬಿಲ್ಲು - ಬಾಣದ ಚಿಹ್ನೆಯನ್ನು ಮಂಜೂರು ಮಾಡಿ ಚುನಾವಣಾ ಆಯೋಗ ಇತ್ತೀಚೆಗೆ ಆದೇಶ ನೀಡಿತ್ತು. ಇದರ ಹಿನ್ನೆಲೆ ರಾವು‌ತ್​ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಏಕನಾಥ್​ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ: ಉದ್ಧವ್​ ಕೈ ಜಾರಿದ ಬಿಲ್ಲು-ಬಾಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.