ETV Bharat / bharat

ಟಾರ್ಮಾಕ್​ನಲ್ಲಿ ಊಟ ಸೇವನೆ ಪ್ರಕರಣ; ವಿಮಾನಯಾನ ಕಂಪನಿಗಳಿಗೆ ₹2.70 ಕೋಟಿ ದಂಡ - ಆಹಾರ ಸೇವಿಸುತ್ತಿರುವ ವೀಡಿಯೊ

ದಟ್ಟ ಮಂಜಿನಿಂದಾಗಿ ವಿಮಾನ ಹಾರಾಟದಲ್ಲಿ ವಿಳಂಬವಾದಾಗ ಪ್ರಯಾಣಿಕರು ಟಾರ್ಮಾಕ್​ನಲ್ಲಿಯೇ ಊಟ ಮಾಡಿದ ಘಟನೆಯ ಹಿನ್ನೆಲೆಯಲ್ಲಿ ಮೂರು ವಿಮಾನಯಾನ ಕಂಪನಿಗಳಿಗೆ ದಂಡ ವಿಧಿಸಲಾಗಿದೆ.

Aviation regulators slap penalties totalling Rs 2.70 cr on IndiGo, MIAL, Air India, SpiceJet

author img

By PTI

Published : Jan 18, 2024, 2:21 PM IST

ನವದೆಹಲಿ: ವಿಮಾನಯಾನ ನಿಯಂತ್ರಕರಾದ ಬಿಸಿಎಎಸ್ ಮತ್ತು ಡಿಜಿಸಿಎ ಬುಧವಾರ ಇಂಡಿಗೊ, ಮುಂಬೈ ವಿಮಾನ ನಿಲ್ದಾಣ ಆಪರೇಟರ್ ಎಂಐಎಎಲ್, ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್‌ಗೆ ಒಟ್ಟು 2.70 ಕೋಟಿ ರೂ.ಗಳ ದಂಡ ವಿಧಿಸಿದೆ. ಮುಂಬೈ ವಿಮಾನ ನಿಲ್ದಾಣದ ಟಾರ್ಮಾಕ್​ನಲ್ಲಿ ಇಂಡಿಗೊ ಪ್ರಯಾಣಿಕರು ಆಹಾರ ಸೇವಿಸುತ್ತಿರುವ ವೀಡಿಯೊ ವ್ಯಾಪಕವಾಗಿ ವೈರಲ್ ಆದ ನಂತರ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಇಂಡಿಗೊ ವಿಮಾನಯಾನ ಸಂಸ್ಥೆಗೆ 1.20 ಕೋಟಿ ರೂ ಮತ್ತು ಎಂಐಎಎಲ್​ಗೆ 60 ಲಕ್ಷ ರೂ.ಗಳ ದಂಡ ವಿಧಿಸಿದೆ.

ಪ್ರತ್ಯೇಕವಾಗಿ, ಕಡಿಮೆ ಗೋಚರತೆ ಪರಿಸ್ಥಿತಿಗಳಲ್ಲಿ ವಿಮಾನಗಳನ್ನು ನಿರ್ವಹಿಸಲು ಪೈಲಟ್​ಗಳ ರೋಸ್ಟರ್ ಪದ್ಧತಿ ಅನುಸರಿಸಲು ವಿಫಲವಾದ ಕಾರಣ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್​ಗೆ ತಲಾ 30 ಲಕ್ಷ ರೂ.ಗಳ ದಂಡ ವಿಧಿಸಿದೆ. ದಟ್ಟ ಮಂಜಿನಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರದಲ್ಲಿ ವಿಪರೀತ ಅಸ್ತವ್ಯಸ್ತಗಳು ಕಂಡುಬಂದ ಎರಡು ವಾರಗಳ ನಂತರ ಈ ದಂಡದ ಕ್ರಮ ಕೈಗೊಳ್ಳಲಾಗಿದೆ.

ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಮತ್ತು ಡಿಜಿಸಿಎ ಒಂದೇ ದಿನದಲ್ಲಿ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರಿಗೆ ಭಾರಿ ದಂಡ ವಿಧಿಸುವುದು ಅಪರೂಪ. ಆದರೆ ದೆಹಲಿ ಮತ್ತು ಇತರ ವಿಮಾನ ನಿಲ್ದಾಣಗಳಲ್ಲಿ ಮಂಜು ಸಂಬಂಧಿತ ವಿಮಾನ ಸಂಚಾರದ ಅಡೆತಡೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಿಯಂತ್ರಕ ಸಂಸ್ಥೆಗಳು ಈ ಕಠಿಣ ಕ್ರಮಕ್ಕೆ ಮುಂದಾಗಿವೆ.

ವಿಮಾನವು ನಿಗದಿತ ಸಮಯಕ್ಕೆ ಹಾರಾಟ ನಡೆಸಲು ವಿಫಲವಾದ ನಂತರ ಜನವರಿ 14 ರಂದು ಅನೇಕ ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಡಿಗೊ ವಿಮಾನದಿಂದ ಹೊರಬಂದು ಟಾರ್ಮಾಕ್​ನಲ್ಲಿ ಕುಳಿತಿದ್ದರು. ಅಲ್ಲದೆ ಇನ್ನು ಕೆಲವರು ಗೋವಾ-ದೆಹಲಿ ವಿಮಾನ ಇಳಿದ ಕೂಡಲೇ ಟಾರ್ಮಾಕ್​ನಲ್ಲಿ ಕುಳಿತು ಊಟ ಮಾಡಿದ್ದರು.

ಇಂಡಿಗೊ ಮತ್ತು ಎಂಐಎಎಲ್ ಎರಡೂ ಈ ಘಟನೆಗಳನ್ನು ಬಿಸಿಎಎಸ್​ಗೆ ತಿಳಿಸಿರಲಿಲ್ಲ. ಹೀಗಾಗಿ ಬಿಸಿಎಎಸ್ ಜನವರಿ 16 ರಂದು ಎರಡೂ ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಿದೆ. ಇಂಡಿಗೊ ವಿಮಾನಯಾನ ಕಂಪನಿಯು ಈ ಘಟನೆಯನ್ನು ತನಗೆ ವರದಿ ಮಾಡಿಲ್ಲ ಮತ್ತು ತುರ್ತು ಪರಿಸ್ಥಿತಿಯಲ್ಲಿ ಜವಾಬ್ದಾರಿಯುತವಾಗಿ ಮತ್ತು ಪರಿಣಾಮಕಾರಿ ರೀತಿಯಲ್ಲಿ ಪ್ರತಿಕ್ರಿಯಿಸಲು ವಿಫಲವಾಗಿದೆ ಎಂದು ದಂಡ ವಿಧಿಸುವಾಗ ಬಿಸಿಎಎಸ್ ಹೇಳಿದೆ.

ಇಂಡಿಗೊ ವಿಮಾನಗಳಾದ 6ಇ-2195 ಮತ್ತು 6ಇ-2091ರ ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸಮಯದವರೆಗೆ ಟಾರ್ಮಾಕ್​ ಮೇಲೆ ಕುಳಿತಿರುವುದು ಸಾಮಾಜಿಕ ಮಾಧ್ಯಮಗಳ ಮೂಲಕ ತನ್ನ ಗಮನಕ್ಕೆ ಬಂದಿದೆ ಎಂದು ಡಿಜಿಸಿಎ ತಿಳಿಸಿದೆ. ಏತನ್ಮಧ್ಯೆ, ಕಡಿಮೆ ಗೋಚರತೆ ಪರಿಸ್ಥಿತಿಗಳಲ್ಲಿ ವಿಮಾನಗಳನ್ನು ನಿರ್ವಹಿಸಲು ಪೈಲಟ್​ಗಳ ರೋಸ್ಟಿಂಗ್​ನಲ್ಲಿನ ಲೋಪಗಳಿಗಾಗಿ ಡಿಜಿಸಿಎ ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್​ಗೆ ತಲಾ 30 ಲಕ್ಷ ರೂ.ಗಳ ದಂಡ ವಿಧಿಸಿದೆ.

ಇದನ್ನೂ ಓದಿ: ಸ್ಯಾಮ್​ಸಂಗ್ ಹಿಂದಿಕ್ಕಿ ವಿಶ್ವದ ನಂ.1 ಸ್ಮಾರ್ಟ್​ಫೋನ್​ ಕಂಪನಿಯಾದ ಆ್ಯಪಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.