ಲಖನೌ(ಉತ್ತರಪ್ರದೇಶ): ಅಶೋಕ ಸಾಮ್ರಾಟನನ್ನು ಖಳನಾಯಕ ಎಂದು ಜರಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಮೂವರ ವಿರುದ್ಧ ದಾಖಲಾದ ಪ್ರಕರಣವನ್ನು ಉತ್ತರಪ್ರದೇಶ ಹೈಕೋರ್ಟ್ ವಜಾ ಮಾಡಿದೆ. ಈ ಹಿಂದೆ ಇದೇ ಪ್ರಕರಣವನ್ನು ಕೆಳ ಹಂತದ ಕೋರ್ಟ್ ಕೂಡ ಕೇಸ್ ವಜಾ ಮಾಡಿತ್ತು. ಇದರ ವಿರುದ್ಧ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಪ್ರಕರಣವೇನು?: 2016 ರ ಜೂನ್ 24 ರಂದು ಉದಯಪುರದ ದೈನಿಕ್ ಭಾಸ್ಕರ್ ಪತ್ರಿಕೆಯಲ್ಲಿ "ಸಂಘ ಪರಿವಾರದ ದೃಷ್ಟಿಯಲ್ಲಿ ಅಕ್ಬರ್ ನಂತರ, ಚಕ್ರವರ್ತಿ ಅಶೋಕನೂ ಖಳನಾಯಕ ಮತ್ತು ಬೌದ್ಧ ವಿರೋಧಿ" ಎಂಬ ತಲೆಬರಹದಡಿ ಸುದ್ದಿ ಪ್ರಕಟವಾಗಿತ್ತು. ಇದು ಧಾರ್ಮಿಕ ದ್ವೇಷ ಬಿತ್ತುವ ಮತ್ತು ಇನ್ನೊಬ್ಬರ ನಂಬಿಕೆಯ ವಿರುದ್ಧವಾದ ಬರಹ ಎಂದು ಆರೋಪ ಕೇಳಿ ಬಂದಿತ್ತು.
ವಿಶ್ವಕ್ಕೆ ಶಾಂತಿಯನ್ನು ಸಾರಿದ ಬೌದ್ಧ ಧರ್ಮ ಮತ್ತು ಅದರ ಅನುಯಾಯಿಗಳಿಗೆ ಮಾಡಿದ ಅವಮಾನ ಎಂದು ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಅರ್ಜಿದಾರರು ದೂರಿನಲ್ಲಿ ತನ್ನ ಧರ್ಮವನ್ನು ನೋಯಿಸಿದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ, ಈ ದೂರು ದಾಖಲಿಸುವ ಮೊದಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಿತ್ತು. ಆದರೆ, ಈ ಕ್ರಮವನ್ನು ಅವರು ಅನುಸರಿಸಿಲ್ಲ. ಹೀಗಾಗಿ ಆರೋಪ ಕೇಳಿಬಂದವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೇಸ್ ವಜಾ ಮಾಡಿ ಕೋರ್ಟ್ ಆದೇಶಿಸಿತು.
ಬಂಟ್ರಾ ನಿವಾಸಿ ಬ್ರಹ್ಮೇಂದ್ರ ಸಿಂಗ್ ಮೌರ್ಯ ಎಂಬುವವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿರ್ದೇಶಕ ಮೋಹನ್ ಭಾಗವತ್ ಮತ್ತು ಡಾ.ರಾಧಿಕಾ ಲಾಧಾ ವಿರುದ್ಧ ಸಿಜೆಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಚಕ್ರವರ್ತಿ ಅಶೋಕನ ಲಾಂಛನವನ್ನು ದೇಶದ ರಾಷ್ಟ್ರೀಯ ಲಾಂಛನವಾಗಿ ಸ್ವೀಕರಿಸಲಾಗಿದೆ. ಅಶೋಕನ ಚಕ್ರವನ್ನು ಭಾರತೀಯ ಧ್ವಜದಲ್ಲಿ ಬಳಸಲಾಗಿದೆ. ಅಂತಹ ಮಹಾನ್ ಚಕ್ರವರ್ತಿಯನ್ನು ಖಳನಾಯಕ ಎಂದು ಕರೆಯಲಾಗಿದ್ದು, ಇದು ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅರ್ಜಿದಾರರು ದೂರಿದ್ದರು. ಕೆಳ ಹಂತದ ನ್ಯಾಯಾಲಯಲ್ಲೂ ಈ ಹಿಂದೆ ಅರ್ಜಿಯು ಅನೂರ್ಜಿತವಾಗಿತ್ತು. ಇದರ ವಿರುದ್ಧ ಬ್ರಹ್ಮೇಂದ್ರ ಸಿಂಗ್ ಮೇಲ್ಮನವಿ ಸಲ್ಲಿಸಿದ್ದರು.
ಓದಿ: ಭಾರತದ ಆರ್ಥಿಕತೆ ವೇಗ ಬಜೆಟ್ನಲ್ಲಿ ಉಳಿಯಲಿದೆ: ನಿರ್ಮಲಾ ಸೀತಾರಾಮನ್