ETV Bharat / bharat

ತಾಯಿಯಾದ ಅತ್ಯಾಚಾರ ಸಂತ್ರಸ್ತೆ.. ಶಿಶು ದತ್ತು ನೀಡಲು ಮುಂದಾಗಿದ್ದ 13 ಜನರ ವಿರುದ್ಧ ಕೇಸ್​ - ಅತ್ಯಾಚಾರ ಪ್ರಕರಣ ಸಂಬಂಧ 13 ಜನರ ವಿರುದ್ಧ ಪ್ರಕರಣ ದಾಖಲು

ಇಬ್ಬರಿಂದ ಅತ್ಯಾಚಾರಕ್ಕೊಳಗಾಗಿದ್ದ ಬಾಲೆಗೆ ಜನಿಸಿದ ಮಗುವನ್ನು ಮುಂಬೈ ಮೂಲದ ದಂಪತಿಗೆ ದತ್ತು ನೀಡಲು ಮುಂದಾಗಿದ್ದವರ ವಿರುದ್ಧ ಕೇಸ್ ದಾಖಲಾಗಿದೆ.

ಅತ್ಯಾಚಾರ
ಅತ್ಯಾಚಾರ
author img

By

Published : Sep 25, 2021, 8:16 AM IST

ಸತಾರಾ(ಮಹಾರಾಷ್ಟ್ರ): ಅತ್ಯಾಚಾರಕ್ಕೊಳಗಾಗಿದ್ದ 15 ವರ್ಷದ ಬಾಲಕಿಗೆ ಜನಿಸಿದ ಹೆಣ್ಣುಮಗುವನ್ನು ಕಾನೂನು ಬಾಹಿರವಾಗಿ ದತ್ತು ನೀಡಲು ಮುಂದಾಗಿದ್ದ 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಜಿಲ್ಲೆಯ ಮಹಾಬಲೇಶ್ವರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಬಾಲಕಿ ಇಬ್ಬರಿಂದ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದಾಳೆ. ಆಕೆಯ ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ತಿಳಿಯುವ ವೇಳೆಗೆ ಬಾಲಕಿ ಅಬಾರ್ಷನ್(ಗರ್ಭಪಾತ)ಅವಧಿ ಮುಗಿದು ಹೋಗಿತ್ತು. ಆಗ ಅತ್ಯಾಚಾರಿಗಳ ಹೆಸರುಗಳನ್ನು ಅಪ್ರಾಪ್ತೆ ಬಹಿರಂಗಪಡಿಸಿದ ಬಳಿಕ, ಕುಟುಂಬವು ಅವರನ್ನು ಕರೆಸಿ ಮಾತುಕತೆ ನಡೆಸಿತ್ತು. ಮಗುವನ್ನು ಇತರರಿಗೆ ದತ್ತು ನೀಡಲು ಕುಟುಂಬಕ್ಕೆ ಸಹಾಯ ಮಾಡಲು ಇಬ್ಬರೂ ಒಪ್ಪಿದ್ದಾರೆ. ಬಾಲಕಿ, ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದು, ನವಜಾತ ಶಿಶುವನ್ನು ಮುಂಬೈ ಮೂಲದ ದಂಪತಿಗೆ ನೀಡಲು ಯತ್ನಿಸಿದರು. ದತ್ತು ಪಡೆಯುವ ಕಾನೂನು ವಿಧಾನವನ್ನು ಅನುಸರಿಸದೆ ಇದ್ದುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಸಾಜ್ ಸೆಂಟರ್ ಮಾಲೀಕನಿಂದ ಲೈಂಗಿಕ ಕಿರುಕುಳ: ಆರೋಪಿಯ ಬಂಧನ

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇಬ್ಬರು, ಕಾನೂನು ಬಾಹಿರವಾಗಿ ಮಗು ದತ್ತು ಪಡೆಯಲು ಬಂದಿದ್ದ ಮುಂಬೈ ಮೂಲದ ದಂಪತಿ ಹಾಗೂ ಕುಟುಂಬಸ್ಥರು ಸೇರಿದಂತೆ 11 ಜನರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.