ETV Bharat / bharat

ಹಡಗು ಮಗುಚಿ ಗಂಗಾ ನದಿಯಲ್ಲಿ ಬಿದ್ದ ಲಾರಿಗಳು: ಐದಾರು ಮಂದಿ ನಾಪತ್ತೆ

ಬೃಹತ್ ಸರಕು ಸಾಗಣೆ ಹಡಗು ಮಗುಚಿ ಎಂಟು ಲಾರಿಗಳು ಗಂಗೆಯಲ್ಲಿ ಮುಳುಗಿದ್ದು, ಐದಾರು ಮಂದಿ ನಾಪತ್ತೆಯಾಗಿದ್ದಾರೆ.

vessel capsized
ಗಂಗೆಯಲ್ಲಿ ಮಗುಚಿದ ಸರಕು ಸಾಗಣೆ ಹಡಗು
author img

By

Published : Nov 23, 2020, 9:50 PM IST

ಮಾಲ್ಡಾ (ಪಶ್ಚಿಮ ಬಂಗಾಳ): ಸರಕು ಸಾಗಣೆ ಹಡಗು ಮಗುಚಿ ಎಂಟು ಲಾರಿಗಳು ಗಂಗೆಯಲ್ಲಿ ಮುಳುಗಿದ ಘಟನೆ ಮಾಲ್ಡಾದ ಮಾಣಿಕ್‌ಚೆಕ್ ಘಾಟ್‌ನಲ್ಲಿ ನಡೆದಿದೆ. ಈ ದುರಂತದಲ್ಲಿ ಐದಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಪಘಾತದ ಸುದ್ದಿ ತಿಳಿದ ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಯಲ್ಲಿ ಒಂಭತ್ತು ಮಂದಿಯನ್ನು ರಕ್ಷಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ನಾಪತ್ತೆಯಾದವರಲ್ಲಿ ಲಾರಿ ಚಾಲಕ ಮತ್ತು ಕೆಲವು ಪ್ರಯಾಣಿಕರು ಸೇರಿದ್ದು, ತಾಂತ್ರಿಕ ದೋಷದಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಗಾಯಾಳುಗಳನ್ನು ಮಾಣಿಕ್​ಚೆಕ್​ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕತ್ತಲೆಯ ಕಾರಣದಿಂದ ರಕ್ಷಣಾ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ. ಸರ್ಚ್ ಲೈಟ್​ಗಳನ್ನು ಸ್ಥಳದಲ್ಲಿ ಅಳವಡಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ವೇಗ ಪಡೆದುಕೊಳ್ಳುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.