ನವದೆಹಲಿ: ದೇಶದ ರಾಜಧಾನಿಯ ರಸ್ತೆಗಳಲ್ಲಿ ಅಪಘಾತಗಳು ಸಾಮಾನ್ಯವೆಂಬಂತಾಗಿದೆ. ವಾಹನ ಸವಾರರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆಗಳನ್ನು ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದರೂ ಇಂತಹ ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಕನ್ನಾಟ್ ಪ್ಲೇಸ್ ಪ್ರದೇಶದಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾರಿಕೇಡ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ಗೆ ರಾತ್ರಿ ವೇಳೆ ಕಾರು ಡಿಕ್ಕಿ ಹೊಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗಾಯಗೊಂಡವರು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಎಂದು ತಿಳಿದುಬಂದಿದೆ.ಕಾನ್ಸ್ಟೇಬಲ್ ಕನ್ನಾಟ್ ಪ್ಲೇಸ್‌ನ ಹೊರ ವೃತ್ತದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಎಸ್ಯುವಿ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಲ್ಲೇ ಇದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ಕಾರು ಹಿಂಬಾಲಿಸಿದ್ದಾರೆ. ಸ್ವಲ್ಪ ದೂರದವರೆಗೆ ಕಾರು ಹಿಂಬಾಲಿಸಿದ್ದ ಪೊಲೀಸ್ ಸಿಬ್ಬಂದಿ ಆರೋಪಿ ಚಾಲಕನನ್ನು ಬಂಧಿಸಿದರು. ಅಕ್ಟೋಬರ್ 24ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
-
#WATCH CCTV फुटेज में देखा जा सकता है कि कनॉट प्लेस इलाके में दिल्ली पुलिस के एक जवान को एक गाड़ी ने टक्कर मार दी।
— ANI_HindiNews (@AHindinews) October 27, 2023 " class="align-text-top noRightClick twitterSection" data="
घटना 24-25 अक्टूबर की रात की है। पुलिस ने कार चालक को हिरासत में लेकर कार्रवाई की है।
(वीडियो सौजन्य: दिल्ली पुलिस) pic.twitter.com/89cv6058A1
">#WATCH CCTV फुटेज में देखा जा सकता है कि कनॉट प्लेस इलाके में दिल्ली पुलिस के एक जवान को एक गाड़ी ने टक्कर मार दी।
— ANI_HindiNews (@AHindinews) October 27, 2023
घटना 24-25 अक्टूबर की रात की है। पुलिस ने कार चालक को हिरासत में लेकर कार्रवाई की है।
(वीडियो सौजन्य: दिल्ली पुलिस) pic.twitter.com/89cv6058A1#WATCH CCTV फुटेज में देखा जा सकता है कि कनॉट प्लेस इलाके में दिल्ली पुलिस के एक जवान को एक गाड़ी ने टक्कर मार दी।
— ANI_HindiNews (@AHindinews) October 27, 2023
घटना 24-25 अक्टूबर की रात की है। पुलिस ने कार चालक को हिरासत में लेकर कार्रवाई की है।
(वीडियो सौजन्य: दिल्ली पुलिस) pic.twitter.com/89cv6058A1
ಇದೀಗ ಘಟನೆಯ ದೃಶ್ಯಾವಳಿ ಹೊರಬಿದ್ದಿದೆ. ವಿಡಿಯೋದಲ್ಲಿ ಕಾರು ಕಾನ್ಸ್ಟೇಬಲ್ಗೆ ಡಿಕ್ಕಿ ಹೊಡೆಯುತ್ತಿರುವುದನ್ನು ನೋಡಬಹುದು. ಕಾನ್ಸ್ಟೇಬಲ್ ಬ್ಯಾರಿಕೇಡ್ ಜೊತೆಗೆ ಕೆಲ ಅಡಿಗಳಷ್ಟು ದೂರದಷ್ಟು ಹಾರಿ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯರ ನೆರವಿನಿಂದ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸದ್ಯ ಅವರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಿಕ್ಕಿಬಿದ್ದ ಕಾರು ಚಾಲಕನ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ. ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಪ್ರಪಾತಕ್ಕೆ ಬಿದ್ದ ಕಾರು, ಚಾಲಕ ಸಾವು
ಅಪಘಾತ- ಪವಾಡ ಸದೃಶ ರೀತಿಯಲ್ಲಿ ವೃದ್ಧೆ ಪಾರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆದು ಅಂದಾಜು 100 ಮೀಟರ್ಗೂ ಅಧಿಕ ದೂರ ಎಳೆದೊಯ್ದ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಅಕ್ಟೋಬರ್ 24ರಂದು ನಡೆದಿತ್ತು. ಪವಾಡ ಸದೃಶ ಎಂಬಂತೆ ಹಿರಿಜೀವ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೃದ್ಧೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.