ETV Bharat / bharat

ಕಾರು ತಪಾಸಣೆ ವೇಳೆ ಡ್ರೈವರ್​ ದುರ್ವತನೆ..ಪೊಲೀಸ್ ಸಿಬ್ಬಂದಿಗೆ ಗುದ್ದಿ, ಪರಾರಿಯಾದ ಚಾಲಕ!

ಕಾರು ತಪಾಸಣೆ ವೇಳೆ ಡ್ರೈವರ್​​​ನೊಬ್ಬ ದುರ್ವತನೆ ತೋರಿ ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ.

Car Driver Hits Police Personnel
Car Driver Hits Police Personnel
author img

By

Published : Aug 14, 2021, 5:44 PM IST

ಪಟಿಯಾಲ(ಪಂಜಾಬ್​): ನಾಳೆ ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸ ಆಚರಣೆಯಾಗಲಿದ್ದು, ಹೀಗಾಗಿ ಕೆಲವೊಂದು ರಾಜ್ಯಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಇದೇ ಕಾರಣಕ್ಕಾಗಿ ವಾಹನಗಳ ತಪಾಸಣೆಯೂ ನಡೆಯುತ್ತಿದೆ. ಪ್ರಮುಖವಾಗಿ ದೆಹಲಿ, ಪಂಜಾಬ್​, ಜಮ್ಮು-ಕಾಶ್ಮೀರ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.

ಪಂಜಾಬ್​ನ ಪಟಿಯಾಲದಲ್ಲಿ ಕಾರು ತಪಾಸಣೆ ಮಾಡುತ್ತಿದ್ದ ವೇಳೆ, ಕಾರು ಚಾಲನೆ ಮಾಡುತ್ತಿದ್ದ ಡ್ರೈವರ್​ ಪೊಲೀಸ್ ಸಿಬ್ಬಂದಿ ಎಳೆದೊಯ್ದ ಘಟನೆ ನಡೆದಿದೆ. ಪೊಲೀಸ್​ ಸಿಬ್ಬಂದಿಯಿಂದ ತಪಾಸಣೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ರೀತಿಯಾಗಿ ನಡೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೊಲೀಸ್ ಸಿಬ್ಬಂದಿಗೆ ಗುದ್ದಿ, ಪರಾರಿಯಾದ ಚಾಲಕ!

ಘಟನೆ ಬಗ್ಗೆ ಮಾತನಾಡಿರುವ ಡಿಎಸ್ಪಿ ಹೇಮಂತ್​​ ಶರ್ಮಾ, ಕಾರಿನ ತಪಾಸಣೆ ನಡೆಸುತ್ತಿದ್ದ ವೇಳೆ ಡ್ರೈವರ್​​ ಚಲಾವಣೆ ಮಾಡಿಕೊಂಡು ತೆರಳಿದ್ದು, ಕಾರಿನ ನಂಬರ್ ಸಹ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನ ಆಸ್ಪತ್ರೆಗೆ ದಾಖಲು ಮಾಡಿ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.