ETV Bharat / bharat

ಟ್ರಾಫಿಕ್​ ಸಿಗ್ನಲ್​ ಜಂಪ್​ ಮಾಡಿದ್ದನ್ನು ಪ್ರಶ್ನಿಸಿದ ಹೋಮ್​ಗಾರ್ಡ್​ 500 ಮೀಟರ್ ಎಳೆದೊಯ್ದ ಕಾರು ಚಾಲಕ - ಬಾನೆಟ್​ ಹತ್ತಿದ ಹೋಮ್​ ಗಾರ್ಡ್​

ರಾಜಸ್ಥಾನದಲ್ಲಿ ಹೋಮ್​ ಗಾರ್ಡ್​ ಮೇಲೆಯೇ ಚಾಲಕನೊಬ್ಬ ಕಾರು ಹತ್ತಿಸಲು ಯತ್ನಿಸಿದ ರಕ್ಕಸ ಘಟನೆ ನಡೆದಿದೆ. ಬಾನೆಟ್​ ಮೇಲೆ ಹಾರಿದ್ದ ಸಿಬ್ಬಂದಿಯನ್ನು ಕೆಳಗೆ ಬೀಳಿಸಿ ಗಾಯಗೊಳಿಸಿದ್ದಾನೆ.

ಹೋಮ್​ ಗಾರ್ಡ್​ ಕಾರು ಹತ್ತಿಸಲು ಯತ್ನ
ಹೋಮ್​ ಗಾರ್ಡ್​ ಕಾರು ಹತ್ತಿಸಲು ಯತ್ನ
author img

By ETV Bharat Karnataka Team

Published : Sep 26, 2023, 10:54 PM IST

ಜೋಧ್‌ಪುರ (ರಾಜಸ್ಥಾನ) : ಟ್ರಾಫಿಕ್​ ಸಿಗ್ನಲ್​ ಜಂಪ್​ ಮಾಡಿದ್ದನ್ನು ಪ್ರಶ್ನಿಸುತ್ತಿದ್ದ ಗೃಹರಕ್ಷಕ ದಳ ಸಿಬ್ಬಂದಿ ಮೇಲೆಯೇ ಚಾಲಕನೊಬ್ಬ ಕಾರು ಹತ್ತಿಸಲು ಯತ್ನಿಸಿದ್ದಾನೆ. ಗಾರ್ಡ್​ ಕಾರಿನ ಮೇಲೆ ಕುಳಿತಾಗ 500 ಮೀಟರ್​ ದೂರಕ್ಕೆ ಎಳೆದೊಯ್ದು ದಿಢೀರ್ ಬ್ರೇಕ್​ ಹಾಕಿ ಕೆಳಗೆ ಬೀಳಿಸಿ ಪರಾರಿಯಾಗಿದ್ದಾನೆ. ಇದರಿಂದ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೋಧಪುರ ನಗರದಲ್ಲಿ ಕಾರು ಚಾಲಕನೊಬ್ಬ ಟ್ರಾಫಿಕ್​ ಸಿಗ್ನಲ್​ ಜಂಪ್​ ಮಾಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಅಲ್ಲಿದ್ದ ಹೋಮ್​ ಗಾರ್ಡ್​ ಕಾರನ್ನು ತಡೆದು ಟ್ರಾಫಿಕ್​ ನಿಯಮ ಪಾಲಿಸುವಂತೆ ಬುದ್ಧಿವಾದ ಹೇಳಿದ್ದಾನೆ. ಇದರಿಂದ ಕುಪಿತನಾದ ಚಾಲಕ ಹೋಮ್​ ಗಾರ್ಡ್​ ಮೇಲೆಯೇ ವಾಹನ ಹತ್ತಿಸಲು ಮುಂದಾಗಿದ್ದಾನೆ. ತಕ್ಷಣವೇ ಎಚ್ಚೆತ್ತ ಗಾರ್ಡ್​, ಕಾರಿನ ಮೇಲೆ ಜಿಗಿದು ಬಾನೆಟ್​ ಮೇಲೆ ಹಾರಿದ್ದಾನೆ.

ರಕ್ಕಸ ಚಾಲಕ ಕಾರನ್ನು 500 ಮೀಟರ್​ ದೂರದವರೆಗೆ ಚಲಾಯಿಸಿಕೊಂಡು ಹೋಗಿದ್ದಾನೆ. ನಿಲ್ಲಿಸಲು ಗಾರ್ಡ್​ ಕೇಳಿಕೊಂಡರೂ ಆತ ಬಿಡದೇ ಕಾರನ್ನು ವೇಗವಾಗಿ ಓಡಿಸಿದ್ದಾನೆ. ಬಳಿಕ ಪೊಲೀಸ್ ಕಮಿಷನರ್ ಕಚೇರಿ ಎದುರಿಗೆ ಬಂದ ಬಳಿಕ ಕಾರಿಗೆ ದಿಢೀರ್​ ಬ್ರೇಕ್ ಹಾಕಿದ್ದಾನೆ. ಈ ವೇಳೆ ಹೋಮ್ ಗಾರ್ಡ್ ರೊಪ್ಪನೆ ನೆಲಕ್ಕೆ ಅಪ್ಪಳಿಸಿದ್ದಾನೆ. ಇದರಿಂದ ಆತನ ತಲೆ, ಸೊಂಟ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಗಾರ್ಡ್​ ಅನ್ನು ನೆಲಕ್ಕೆ ಬೀಳಿಸಿದ್ದೇ ತಡ ಕಾರು ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.

ಕಾರಿಗಾಗಿ ಪೊಲೀಸರ ಹುಡುಕಾಟ : ಗೃಹರಕ್ಷಕ ದಳ ಸಿಬ್ಬಂದಿಯ ಮೇಲೆ ಕಾರು ಹತ್ತಿಸಲು ಯತ್ನಿಸಿ, ಗಾಯಗೊಳಿಸಿದ ಕಾರಿನ ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗುವುದು. ಶೀಘ್ರವೇ ಚಾಲಕನ್ನು ಬಂಧಿಸಲಾಗುವುದು. ಆತನ ವಿರುದ್ಧ ಕೆಲಸಕ್ಕೆ ಅಡ್ಡಿ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 9:30ರ ಸುಮಾರಿಗೆ ಜಲಜೋಗ್ ಕಡೆಯಿಂದ ಬಿಳಿ ಬಣ್ಣದ ಆಲ್ಟೊ ಕಾರು ಬಂದಿದ್ದು, ಚಾಲಕ ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡಿರಲಿಲ್ಲ. ಈ ವೇಳೆ ಗೃಹ ರಕ್ಷಕ ದಳದ ಸಿಬ್ಬಂದಿ ಪ್ರತಾಪ್ ಕಾರನ್ನು ತಡೆಯಲು ಮುಂದಾದಾಗ ಸಿಬ್ಬಂದಿ ಮೇಲಯೇ ಕಾರನ್ನು ಹತ್ತಿಸಲು ಮುಂದಾಗಿದ್ದಾನೆ. ಬಾನೆಟ್​ ಮೇಲಿಂದ ಕೆಳಗೆ ಬಿದ್ದ ಕಾರಣ ಗಾಯವಾಗಿವೆ. ಟ್ರಾಫಿಕ್ ಪೊಲೀಸರು ಹಾಗೂ ಜನರು ಕಾರನ್ನು ಹಿಂಬಾಲಿಸಿದರೂ ಆತ ಪರಾರಿಯಾಗಿದ್ದಾನೆ. ಟ್ಯಾಕ್ಸಿ ಡ್ರೈವರ್ ಗಾಯಗೊಂಡ ಗೃಹರಕ್ಷಕ ದಳ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಇದನ್ನೂ ಓದಿ: ಗಣೇಶ ಪೆಂಡಲ್​ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.