ETV Bharat / bharat

ಕಂಟೈನರ್, ಕಾರು ನಡುವೆ ಭೀಕರ ಅಪಘಾತ, ಐವರ ಸಾವು - car accident in maharashtra

ಮುಂಬೈನಿಂದ ಪುಣೆ ಕಡೆಗೆ ತೆರಳುತ್ತಿದ್ದ ಕಾರೊಂದು ಕಂಟೈನರ್​ಗೆ ಅಪ್ಪಳಿಸಿ, ಐವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Car accident on Pune-Mumbai expressway; Five killed
ಕಂಟೈನರ್, ಕಾರು ನಡುವೆ ಭೀಕರ ಅಪಘಾತ, ಐವರ ಸಾವು
author img

By

Published : Jan 30, 2022, 10:53 AM IST

ಪುಣೆ, ಮಹಾರಾಷ್ಟ್ರ: ಪುಣೆ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಭೀಕರ ಕಾರು ಅಪಘಾತ ನಡೆದಿದ್ದು, ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬೆಳ್ಳಂಬೆಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟವರೆಲ್ಲಾ ಹರಿಯಾಣ ಮೂಲದವರು ಎಂದು ತಿಳಿದುಬಂದಿದೆ.

ಲೋನಾವಾಲಾ ಸಮೀಪದ ಮುಂಬೈನಿಂದ ಪುಣೆ ಕಡೆಗೆ ತೆರಳುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ, ಕಂಟೈನರ್​ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದಿಂದಾಗಿ ಸ್ವಲ್ಪ ಸಮಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.