ETV Bharat / bharat

ಆರ್ಥಿಕ ಬೆಳವಣಿಗೆಗೆ ಬಂಡವಾಳ ಮಾರುಕಟ್ಟೆಗಳು ಸಹಕಾರಿ: SEBI ಅಧ್ಯಕ್ಷ

ಕೋವಿಡ್​ನಿಂದಾಗಿ ಕುಸಿಯುತ್ತಿರುವ ಆರ್ಥಿಕತೆ ಪುನಶ್ಚೇತನಕ್ಕೆ ಬಂಡವಾಳ ಮಾರುಕಟ್ಟೆಗಳು ಹೇಗೆ ಸಹಕಾರಿಯಾಗಲಿವೆ ಅನ್ನೋದರ ಕುರಿತು ಸೆಬಿ ಅಧ್ಯಕ್ಷ ಮಾಹಿತಿ ನೀಡಿದ್ದಾರೆ.

SEBI ಅಧ್ಯಕ್ಷ
SEBI ಅಧ್ಯಕ್ಷ
author img

By

Published : Jul 29, 2021, 8:18 AM IST

ನವದೆಹಲಿ: ಬ್ಯಾಂಕೇತರ ಹಣಕಾಸು ವ್ಯವಹಾರದ ಹೆಚ್ಚಿನ ಭಾಗವು ಬಂಡವಾಳ ಮಾರುಕಟ್ಟೆಗಳ ಮೂಲಕ ನಡೆಯುತ್ತಿದೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್​ಚೇಂಜ್​​​ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷ ಅಜಯ್ ತ್ಯಾಗಿ ಪ್ರತಿಪಾದಿಸಿದ್ದಾರೆ. ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುವಲ್ಲಿ ಬಂಡವಾಳ ಮಾರುಕಟ್ಟೆಗಳು ದೊಡ್ಡ ಪಾತ್ರ ವಹಿಸಲಿವೆ ಎಂದೂ ಅವರು ಹೇಳಿದ್ದಾರೆ.

ಎಫ್‌ಐಸಿಸಿಐ ಆಯೋಜಿಸಿದ್ದ 18 ನೇ ವಾರ್ಷಿಕ ಕ್ಯಾಪಿಟಲ್ ಮಾರ್ಕೆಟ್ಸ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಡವಾಳ ಮಾರುಕಟ್ಟೆಗಳ ಮೂಲಕ ಆರ್ಥಿಕತೆಯನ್ನು ವೇಗಗೊಳಿಸಬಹುದು. ನಮ್ಮ ಗಮನವು ಬಂಡವಾಳ ಮಾರುಟ್ಟೆಗಳನ್ನು ದೃಢಪಡಿಸುವುದಾಗಿದ್ದು, ಇದು ಆರ್ಥಿಕತೆಗೆ ಮಹತ್ತರವಾದ ಉತ್ತೇಜನ ನೀಡುತ್ತದೆ ಎಂದಿದ್ದಾರೆ.

ನಿಧಿ ಸಂಗ್ರಹಣೆ ಮತ್ತು ಬಹಿರಂಗಪಡಿಸುವಿಕೆಗಳ ಕುರಿತು ಮಾತನಾಡಿದ ತ್ಯಾಗಿ, ಹೊಸ ಯುಗದ ಟೆಕ್ ಕಂಪನಿಗಳ ಐಪಿಒಗಳು ಹೂಡಿಕೆದಾರರನ್ನು ಆಕರ್ಷಿಸುತ್ತದೆ. ದೊಡ್ಡ ಕಂಪನಿಗಳಿಗೆ ಐಪಿಒ ಮಾಡಲು ಸುಲಭವಾಗುವಂತೆ ಕನಿಷ್ಠ ಸಾರ್ವಜನಿಕ ಷೇರುದಾರರ ಚೌಕಟ್ಟನ್ನು ಪರಿಷ್ಕರಿಸಲಾಯಿತು. ಭವಿಷ್ಯದಲ್ಲಿ ಸಮತೋಲನ ನಿಧಿ ಸಂಗ್ರಹಣೆ ಮಾನದಂಡಗಳ ಪರಿಶೀಲನೆಯತ್ತ ಗಮನಹರಿಸಲಾಗುವುದು. ಭಾರತದಲ್ಲಿ ಎಸ್​ಪಿಎಸಿ ಚೌಕಟ್ಟನ್ನು ಪರಿಚಯಿಸಬೇಕೇ? ಬೇಡವೇ ಎಂಬುದರ ಕುರಿತು ಸೆಬಿಯ ಪ್ರಾಥಮಿಕ ಮಾರುಕಟ್ಟೆ ಸಮಿತಿಯು ಚರ್ಚಿಸುತ್ತಿದೆ ಎಂದು ಹೇಳಿದರು.

ಮಾರುಕಟ್ಟೆಗಳನ್ನು ಬಲಪಡಿಸುವ ಪ್ರಯತ್ನಗಳಲ್ಲಿ ಸೆಬಿ ಸಕ್ರಿಯವಾಗಿದೆ. ಸ್ಟಾರ್ಟ್ - ಅಪ್‌ಗಳ ಪಟ್ಟಿಗಾಗಿ, ಇನೋವೇಟರ್ಸ್ ಗ್ರೋತ್ ಪ್ಲಾಟ್‌ಫಾರ್ಮ್ ಅನ್ನು ರಚಿಸಲಾಗಿದೆ. ಸಾಮಾಜಿಕ ವಲಯದ ನಿಧಿಸಂಗ್ರಹಣೆ ಅಗತ್ಯಗಳಿಗಾಗಿ, ನಾವು ಸಾಮಾಜಿಕ ಸ್ಟಾಕ್ ಎಕ್ಸ್ಚೇಂಜ್ ಎಂಬ ವ್ಯವಸ್ಥೆಯನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬ್ಯಾಂಕ್​​ ದಿವಾಳಿ/ಬಂದ್​ ಆದರೆ ಗ್ರಾಹಕರಿಗೆ 90 ದಿನಗಳಲ್ಲಿ 5 ಲಕ್ಷ ರೂ ವಿಮಾ ಮೊತ್ತ: ಸೀತಾರಾಮನ್​

ಕಾರ್ಪೊರೇಟ್ ಆಡಳಿತದ ವಿಷಯದಲ್ಲಿ, ಸೆಬಿ ಅಧ್ಯಕ್ಷರು, ಸ್ವತಂತ್ರ ನಿರ್ದೇಶಕರ ಪಾತ್ರ ಬಹಳ ಮುಖ್ಯ. ಜತೆಗೆ ಇತರ ನಿರ್ದೇಶಕರು ಸಹ ಕಂಪನಿಯ ನಿರ್ವಹಣೆಯಲ್ಲಿ ಹೆಚ್ಚು ಸಕ್ರಿಯ ಪಾತ್ರ ವಹಿಸಬೇಕು ಎಂದು ಹೇಳಿದರು. ಕಾರ್ಪೊರೇಟ್ ಆಡಳಿತದ ಗುಣಮಟ್ಟವನ್ನು ನಿರಂತರವಾಗಿ ಸುಧಾರಿಸುವ ಅವಶ್ಯಕತೆಯಿದ್ದು, ಕಂಪನಿಯೊಳಗೆ ಪಾರದರ್ಶಕತೆ ಬಹಳ ಮುಖ್ಯ. ಬಂಡವಾಳ ಮಾರುಕಟ್ಟೆಗಳ ಅರಿವು ಮತ್ತು ಪ್ರಬುದ್ಧತೆಯೊಂದಿಗೆ, ಉತ್ತಮವಾಗಿ ಆಡಳಿತ ನಡೆಸುವ ಕಂಪನಿಗಳು ಹೂಡಿಕೆದಾರರ ವಿಶ್ವಾಸವನ್ನು ಹೊಂದಿರುತ್ತವೆ ಮತ್ತು ದೀರ್ಘಾವಧಿಯಲ್ಲಿ ಲಾಭಗಳನ್ನು ಪಡೆಯುತ್ತವೆ ಎಂದು ಅವರು ಒತ್ತಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.