ETV Bharat / bharat

ಹೈದರಾಬಾದ್​ನಲ್ಲಿ ಸನ್ ಬರ್ನ್ ಕಾರ್ಯಕ್ರಮ ರದ್ದು: ಸಂಘಟಕರ ವಿರುದ್ಧ ಪ್ರಕರಣ ದಾಖಲು, ಬುಕ್ ಮೈ ಶೋಗೆ ನೋಟಿಸ್​ - ಬುಕ್ ಮೈ ಶೋ

Cancellation of Sunburn event in Hyderabad: ಹೈದರಾಬಾದ್​ನಲ್ಲಿ ಸನ್ ಬರ್ನ್ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬುಕ್ ಮೈ ಶೋಗೆ (BookMyShow) ನೋಟಿಸ್​ ನೀಡಲಾಗಿದೆ.

Cancellation of Sunburn event in Hyderabad
ಹೈದರಾಬಾದ್​ನಲ್ಲಿ ಸನ್ ಬರ್ನ್ ಕಾರ್ಯಕ್ರಮ ರದ್ದು: ಸಂಘಟಕರ ವಿರುದ್ಧ ಪ್ರಕರಣ ದಾಖಲು, ಬುಕ್ ಮೈ ಶೋಗೆ ನೋಟಿಸ್​
author img

By ETV Bharat Karnataka Team

Published : Dec 27, 2023, 6:52 AM IST

ಹೈದರಾಬಾದ್ (ತೆಲಂಗಾಣ): ಹೊಸ ವರ್ಷಾಚರಣೆ ನಿಮಿತ್ತ ಮಾದಾಪುರದಲ್ಲಿ ಆಯೋಜಿಸಲಾಗಿದ್ದ ಸನ್​ ಬರ್ನ್ ಕಾರ್ಯಕ್ರಮವನ್ನು ಸಂಘಟಕರು ರದ್ದುಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ, ಬುಕ್‌ಮೈ ಶೋನಲ್ಲಿ ಟಿಕೆಟ್‌ಗಳ ಮಾರಾಟ ಸಹ ನಿಲ್ಲಿಸಲಾಗಿದೆ. ಕಾರ್ಯಕ್ರಮ ಆಯೋಜಕ ಸುಮಂತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅನುಮತಿ ಪಡೆಯದೇ ಟಿಕೆಟ್ ಮಾರಾಟ ಮಾಡಿದ್ದಕ್ಕೆ ಬುಕ್ ಮೈ ಶೋ ಹಾಗೂ ನೋಡಲ್ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಪ್ರಸ್ತುತ, 'ಸನ್ ಬರ್ನ್ ಶೋ ಹೈದರಾಬಾದ್' ಈವೆಂಟ್ ಬುಕ್ ಮೈ ಶೋನಲ್ಲಿ ಕಾಣಿಸುತ್ತಿಲ್ಲ.

ಆದ್ರೆ, ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಸನ್‌ ಬರ್ನ್ ಕಾರ್ಯಕ್ರಮದ ಟಿಕೆಟ್‌ಗಳು ಮಾರಾಟವಾಗಿವೆ. ಸನ್‌ಬರ್ನ್ ಒಂದು ದೊಡ್ಡ ಸಂಗೀತ ಉತ್ಸವವಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಮದ್ಯಕ್ಕೆ ಅನುಮತಿ ನೀಡಲಾಗಿದೆ. ಇದರ ಜೊತೆಗೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಬುಕ್ ಮೈ ಶೋ ಪ್ರತಿನಿಧಿಗಳ ತರಾಟೆ: ಈ ಹಿನ್ನೆಲೆಯಲ್ಲಿ ಭಾನುವಾರ ನಡೆದ ಜಿಲ್ಲಾಧಿಕಾರಿ ಹಾಗೂ ಎಸ್ಪಿಗಳ ಸಭೆಯಲ್ಲಿ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದವರು ಯಾರು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರಶ್ನಿಸಿದರು. ಕೂಡಲೇ ಸೈಬರಾಬಾದ್ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದ ಆಯೋಜಕರು ಹಾಗೂ ಬುಕ್ ಮೈ ಶೋ (Book My Show) ಪ್ರತಿನಿಧಿಗಳನ್ನು ಕರೆಸಿ ತರಾಟೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಿರ್ವಹಣೆಗೆ ಹಿನ್ನಡೆಯಾಗಿದೆ.

ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಣೆ: ಈ ಕಾರ್ಯಕ್ರಮಕ್ಕೆ ಸೈಬರಾಬಾದ್ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಹೈದರಾಬಾದಿನ 'ಸನ್ ಬರ್ನ್ ಫೆಸ್ಟಿವಲ್' ಕಾರ್ಯಕ್ರಮವನ್ನು ಸಂಘಟಕರು ರದ್ದುಗೊಳಿಸಿದ್ದಾರೆ. ಹೊಸ ವರ್ಷಾಚರಣೆ ನಿಮಿತ್ತ ತೆಲಂಗಾಣ ರಾಜಧಾನಿಯ ಹೈಟೆಕ್ ಸಿಟಿಯ ಕೇಂದ್ರವಾದ ಮಾದಾಪುರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಸಂಘಟಕರು ಯೋಜಿಸಿದ್ದರು.

ಪೊಲೀಸರು ಅನುಮತಿ ನಿರಾಕರಿಸಿದರೂ, ಬುಕ್‌ ಮೈಶೋನಲ್ಲಿ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗಿದೆ ಎಂದು ಆರೋಪವೂ ಕೇಳಿ ಬಂದಿದೆ. ಘಟನೆಯ ಆಯೋಜಕ ಸುಮಂತ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಅನುಮತಿ ಪಡೆಯದೆ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಕ್ಕಾಗಿ ಬುಕ್‌ಮೈಶೋ ಮತ್ತು ನೋಡಲ್ ಅಧಿಕಾರಿಗಳಿಗೆ ನೋಟಿಸ್ ನೀಡಲಾಯಿತು. ಪ್ರಸ್ತುತ, 'ಸನ್‌ಬರ್ನ್ ಶೋ ಹೈದರಾಬಾದ್' ಈವೆಂಟ್ BookMyShow ನಲ್ಲಿ ಕಾಣಿಸುತ್ತಿಲ್ಲ. ಆದರೆ, ಆಂಧ್ರಪ್ರದೇಶದಲ್ಲಿ ಸನ್‌ಬರ್ನ್ ವಿಶಾಖಪಟ್ಟಣಂ ಟಿಕೆಟ್‌ಗಳು ಮಾರಾಟವಾಗಿವೆ.

ಇದನ್ನೂ ಓದಿ: ನನ್ನ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ: ವಿನೇಶ್ ಫೋಗಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.