ETV Bharat / bharat

ಮುಂಗಾರಿನಲ್ಲಿ ಹೆಚ್ಚಾಗುವ ಯೋನಿ ಸೋಂಕು ಮತ್ತು ಪರಿಹಾರ

author img

By

Published : Jul 11, 2022, 5:49 PM IST

ಮಿಲನದ ನಂತರ ಯೋನಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ವೆಜಿನಲ್ ಕ್ಯಾಂಡಿಡಯಾಸಿಸ್ ಎಂದು ಕರೆಯಲಾಗುವ ಸೋಂಕು ತಗುಲಬಹುದು. ವೆಜಿನಲ್ ಕ್ಯಾಂಡಿಡಯಾಸಿಸ್​ನಿಂದ ಉರಿಯೂತ, ಸೋರುವಿಕೆ ಮತ್ತು ವಿಪರೀತ ಕೆರೆತ ಉಂಟಾಗಬಹುದು.

Can the monsoons lead to a vaginal infection?

ನವದೆಹಲಿ: ಮುಂಗಾರು ಋತು ಇತರ ಎಲ್ಲ ಋತುಗಳಿಗಿಂತ ಹೆಚ್ಚು ಇಷ್ಟವಾಗುವ ಋತುವಾಗಿದೆ. ಆದರೆ ಮುಂಗಾರಿನ ಋತುವಿನಲ್ಲಿ ಹಲವಾರು ಕಾಯಿಲೆ ಹಾಗೂ ಸೋಂಕುಗಳು ಸಹ ಮಹಿಳೆಯರಿಗೆ ಕಾಡುವ ಸಾಧ್ಯತೆಯಿರುತ್ತದೆ. "ಮಳೆಗಾಲದ ಸಮಯದಲ್ಲಿ ವಾತಾವರಣವು ಹಸಿ ಹಾಗೂ ಆರ್ದ್ರವಾಗಿರುವುದರಿಂದ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಗೆ ಈ ಸಮಯ ಬಹಳ ಸೂಕ್ತವಾಗಿರುತ್ತದೆ. ಹೀಗಾಗಿ ಮುಂಗಾರಿನಲ್ಲಿ ಯೋನಿಯ ಸೋಂಕು ಕಾಣಿಸಿಕೊಳ್ಳಬಹುದು. ಮಿಲನದ ನಂತರ ಯೋನಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ವೆಜಿನಲ್ ಕ್ಯಾಂಡಿಡಯಾಸಿಸ್ ಎಂದು ಕರೆಯಲಾಗುವ ಸೋಂಕು ತಗುಲಬಹುದು. ವೆಜಿನಲ್ ಕ್ಯಾಂಡಿಡಯಾಸಿಸ್​ನಿಂದ ಉರಿಯೂತ, ಸೋರುವಿಕೆ ಮತ್ತು ವಿಪರೀತ ಕೆರೆತ ಉಂಟಾಗಬಹುದು. ಅಲ್ಲದೆ ಇದರಿಂದ ಫಲವತ್ತತೆಯೂ ಕಡಿಮೆಯಾಗಬಹುದು." ಎನ್ನುತ್ತಾರೆ ಮುಂಬೈನ ಪರೇಲ್​ನಲ್ಲಿರುವ ಗ್ಲೋಬಲ್ ಹಾಸ್ಪಿಟಲ್​ನ ಗೈನೆಕಾಲಜಿ ಕನ್ಸಲ್ಟಂಟ್​ ಅನಘಾ ಛತ್ರಪತಿ.

"ಮಹಿಳೆಯರ ಯೋನಿ ಮತ್ತು ಸ್ತ್ರೀ ಜನನಾಂಗದ ಪ್ರದೇಶದಲ್ಲಿ ಕ್ಯಾಂಡಿಡಾ ಆಲ್ಬಿಕನ್ಸ್ (Candida albicans)​ ಎಂದು ಕರೆಯಲಾಗುವ ಯೀಸ್ಟ್​ ಇರುತ್ತದೆ. ಇಮ್ಯುನೊ ಸಪ್ರೆಶನ್, ಡಯಾಬಿಟೀಸ್ ಅಥವಾ ಲೈಂಗಿಕ ಕ್ರಿಯೆಗಳ ಕಾರಣದಿಂದ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಇದು ಯೋನಿಯ ಗೋಡೆಯನ್ನು ಅಡ್ಡಿಪಡಿಸಬಹುದು ಮತ್ತು ಸೋಂಕುಗಳಿಗೆ ಕಾರಣವಾಗಬಹುದು. ಈ ಸೋಂಕು ತಗುಲಿದಾಗ ವಿಶೇಷವಾಗಿ ಪೆರಿನಿಯಮ್​ನಲ್ಲಿ ವಿಪರೀತ ಕೆರೆತದಿಂದ ಕೂಡಿದ ಬಿಳಿ ಬಣ್ಣದ ಮೊಸರಿನಂಥ ಸ್ರವಿಕೆಯಾಗುತ್ತದೆ. ಇದು ಖಂಡಿತವಾಗಿಯೂ ಯೋನಿ ಮತ್ತು ಒಳ ತೊಡೆಗಳ ಮೇಲೆ ಪರಿಣಾಮ ಬೀರುತ್ತದೆ. ಸೌಮ್ಯವಾದ ಸೋಂಕಿದ್ದರೆ ತುರಿಕೆಯೊಂದಿಗೆ ಕನಿಷ್ಠ ಯೋನಿ ಸ್ರವಿಸುವಿಕೆ ಇರುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಎಪಿತೀಲಿಯಲ್ ಹಾನಿಯಿಂದ ಹೊರಸೂಸುವಿಕೆ ಮತ್ತು ರಕ್ತಸ್ರಾವದೊಂದಿಗೆ ಹೆಚ್ಚು ಪ್ರಮಾಣದ ಬಿಳಿಯಾದ ಮೊಸರಿನ ರೀತಿಯ ಸ್ರವಿಸುವಿಕೆ ಇರುತ್ತದೆ. ಇದಕ್ಕೂ ಹೆಚ್ಚಿನ ಬ್ಯಾಕ್ಟೀರಿಯಾ ಸೋಂಕು ಉಂಟಾದಲ್ಲಿ ಅಹಿತಕರ ವಾಸನೆಗೆ ಕಾರಣವಾಗಬಹುದು. ಇದರಿಂದ ಸಂಭೋಗದ ಸಮಯದಲ್ಲಿ ನೋವು ಮತ್ತು ಮೂತ್ರನಾಳದಲ್ಲಿ ಉರಿಯ ಅನುಭವಕ್ಕೆ ಕಾರಣವಾಗಬಹುದು. ಮಾನ್ಸೂನ್‌ನಲ್ಲಿ ತೇವ ಮತ್ತು ಕೆಟ್ಟ ಹವಾಮಾನ ಪರಿಸ್ಥಿತಿಗಳಿಂದಾಗಿ ಮಹಿಳೆಯರು ಯೋನಿ ಸೋಂಕು, ವಿಶೇಷವಾಗಿ ಕ್ಯಾಂಡಿಡಿಯಾಸಿಸ್‌ಗೆ ಹೆಚ್ಚು ಒಳಗಾಗುತ್ತಾರೆ" ಎಂದು ಅನಘಾ ಹೇಳುತ್ತಾರೆ.

ಪ್ರಶ್ನೆ: ಮಳೆಗಾಲದಲ್ಲಿ ಇಂಥ ಸೋಂಕುಗಳು ಉಂಟಾಗದಂತೆ ನಾವು ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬಹುದು?

ಅನಘಾ:

  • ಹತ್ತಿಯ ಮತ್ತು ಸಡಿಲವಾದ ಒಳ ಉಡುಪುಗಳನ್ನು ಬಳಸಿ
  • ಒದ್ದೆಯಾದ ಬಟ್ಟೆಗಳನ್ನು ಧರಿಸಬೇಡಿ
  • ಬಟ್ಟೆ ಒದ್ದೆಯಾಗಿದ್ದರೆ ಬದಲಾಯಿಸಿ
  • ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಿ. ಆಹಾರದಲ್ಲಿ ಮೊಸರು ಅಥವಾ ಪೂರಕ ಆಹಾರಗಳಂಥ ಪ್ರೋಬಯಾಟಿಕ್‌ಗಳು ಮತ್ತು ಸಾಕಷ್ಟು ವಿಟಮಿನ್ ಸಿ ಇರುವಂತೆ ನೋಡಿಕೊಳ್ಳಿ.
  • ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಸಮೃದ್ಧವಾಗಿರುವ ಆಹಾರ ಸೇವಿಸುವುದನ್ನು ತಪ್ಪಿಸಿ.
  • ಯೋನಿ ನಾಳದ ಚಿಕಿತ್ಸೆಯನ್ನು ಯಾವಾಗಲೂ ಮಿಶ್ರ ಸೋಂಕುಗಳಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ, ಸೌಮ್ಯವಾದ ಸೋಂಕಿಗೆ ಸ್ಥಳೀಯ ಯೋನಿ ಪೆಸ್ಸರಿ ಅಥವಾ ಆಂಟಿಬಯೋಟಿಕ್ ಮತ್ತು ಆಂಟಿಫಂಗಲ್ ಔಷಧಿಗಳನ್ನು ಹೊಂದಿರುವ ಸಪೊಸಿಟರಿ ಚಿಕಿತ್ಸೆಯನ್ನು 7 ರಾತ್ರಿಗಳವರೆಗೆ ನೀಡಿದರೆ ಸಾಕಾಗುತ್ತದೆ.
  • ಮುಟ್ಟಿನ ಸಮಯದಲ್ಲಿ ಲೈಂಗಿಕ ಸಂಪರ್ಕ ಮಾಡಬೇಡಿ. ಒಂದು ವೇಳೆ ಮಾಡಿದರೂ ಖಾಸಗಿ ಭಾಗವನ್ನು ನೀರಿನಿಂದ ತೊಳೆಯಿರಿ ಮತ್ತು ನಂತರ ಪೆಸರಿಯನ್ನು ಸೇರಿಸಿ ಹಾಗೂ ರಾತ್ರಿಯಿಡೀ ಅದನ್ನು ಹಾಗೆಯೇ ಬಿಡಿ. ಸೋಂಕು ಮರುಕಳಿಸುವುದನ್ನು ತಪ್ಪಿಸಬೇಕಾದರೆ ಲೈಂಗಿಕ ಸಂಗಾತಿಗಳು ಏಕಕಾಲಕ್ಕೆ ಚಿಕಿತ್ಸೆ ಪಡೆಯುವುದು ಅಗತ್ಯ.

ಪ್ರಶ್ನೆ: ಈ ಸೋಂಕಿಗಳಿಗೂ ಒಳ ಉಡುಪುಗಳಿಗೂ ಏನಾದರೂ ಸಂಬಂಧವಿದೆಯಾ?

ಅನಘಾ: ಸಾಮಾನ್ಯವಾಗಿ ಬಟ್ಟೆ ನೇರವಾಗಿ ಸೋಂಕಿಗೆ ಕಾರಣವಾಗುವುದಿಲ್ಲ, ಆದರೆ ಇದು ಚರ್ಮದ ಕಿರಿಕಿರಿ ಮತ್ತು ದದ್ದುಗಳಿಗೆ ಕಾರಣವಾಗಬಹುದು. ಆದರೆ ಬಿಗಿಯಾದ, ಗಾಳಿಯಾಡದ ಸಿಂಥೆಟಿಕ್ ಉಡುಪುಗಳಿಂದ ಸೋಂಕು ತಗುಲುವ ಸಾಧ್ಯತೆ ಇದೆ. ಇಂಥ ಉಡುಪುಗಳನ್ನು ಧರಿಸದಿರುವುದು ಉತ್ತಮ.

ಪ್ರಶ್ನೆ: ಯೋನಿ ಸೋಂಕು ಉಂಟುಮಾಡುವ ಇತರ ಅಂಶಗಳು ಯಾವುವು?

ಅನಘಾ:

  • ಡಯಾಬಿಟೀಸ್​ನಿಂದ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುತ್ತದೆ ಹಾಗೂ ಇದರಿಂದ ಯೀಸ್ಟ್​ ಸೋಂಕುಗಳು ಹೆಚ್ಚಾಗಬಹುದು.
  • ಮಾನಸಿಕ ಒತ್ತಡದಿಂದ ರೋಗನಿರೋಧಕ ಶಕ್ತಿಯು ಏರುಪೇರಾಗಬಹುದು ಮತ್ತು ದೈಹಿಕ ಒತ್ತಡದಿಂದ ಜ್ವರ ಮತ್ತು ಇತರ ರೋಗಗಳು ಬೇಗನೆ ವಾಸಿಯಾಗದೆ ಇಂಥ ಸೋಂಕು ತಗುಲಲು ಕಾರಣವಾಗಬಹುದು.
  • ಇತರ ಕಾಯಿಲೆಗಳ ಉಪಶಮನಕ್ಕಾಗಿ ನೀಡಿದ ಆ್ಯಂಟಿ ಬಯಾಟಿಕ್ಸ್​ ಗಳಿಂದ ಯೋನಿಯ ಸಂರಕ್ಷಕ ಲ್ಯಾಕ್ಟೊಬ್ಯಾಸಿಲಿ ಹಾಳಾಗಬಹುದು. ಇದರಿಂದ ಯೋನಿಯ ಪಿಎಚ್​ ಮಟ್ಟ ಏರುಪೇರಾಗಿ ಕ್ಯಾಂಡಿಡಯಾಸಿಸ್ ಬರಬಹುದು.
  • ಸೋಂಕಿತ ಸಂಗಾತಿಯೊಂದಿಗೆ ಲೈಂಗಿಕ ಚಟುವಟಿಕೆ ಮತ್ತು ಮೌಖಿಕ ಸಂಭೋಗದಲ್ಲಿ ತೊಡಗುವುದು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು.
  • ಗರ್ಭಾವಸ್ಥೆಯ ಕಾರಣದಿಂದ ಸಹ ಮಹಿಳೆಯರಿಗೆ ಯೋನಿ ನಾಳದ ಉರಿಯೂತ ಉಂಟಾಗಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.