ETV Bharat / bharat

ಒನ್​ ರ‍್ಯಾಂಕ್, ಒನ್​ ಪಿಂಚಣಿ: 25 ಲಕ್ಷ ಮಾಜಿ ಯೋಧರಿಗೆ ಕೇಂದ್ರದಿಂದ ಶುಭಸುದ್ದಿ! - ಕೇಂದ್ರ ಸಚಿವ ಅನುರಾಗ್​ ಠಾಕೂರ್

ಕೇಂದ್ರ ಸರ್ಕಾರ ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆಯನ್ನು ಪರಿಷ್ಕರಿಸಿದ್ದು, 25.13 ಲಕ್ಷ ಮಾಜಿ ಯೋಧರಿಗೆ 2019ರ ಜುಲೈ 1ರಿಂದ 2022ರ ಜೂನ್ 30ರವರೆಗಿನ ಬಾಕಿ ಹಣ (ಅರಿಯರ್ಸ್)​ ಸಿಗಲಿದೆ.

Cabinet revises OROP
ಒನ್​ ರ‍್ಯಾಂಕ್, ಒನ್​ ಪಿಂಚಣಿ ಪರಿಷ್ಕರಣೆ
author img

By

Published : Dec 23, 2022, 10:22 PM IST

Updated : Dec 23, 2022, 10:46 PM IST

ನವದೆಹಲಿ: ನಿವೃತ್ತ ಸೇನಾ ಸಿಬ್ಬಂದಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದೆ. ಒಂದು ಶ್ರೇಣಿ, ಒಂದು ಪಿಂಚಣಿ (ಒನ್​ ರ‍್ಯಾಂಕ್, ಒನ್​ ಪಿಂಚಣಿ) ಯೋಜನೆಯನ್ನು ಪರಿಷ್ಕರಿಸಿದ್ದು, ಸುಮಾರು 25.13 ಲಕ್ಷ ಸಶಸ್ತ್ರ ಪಡೆಗಳ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಾಜಿ ಯೋಧರ ಪಿಂಚಣಿ ಯೋಜನೆಯನ್ನು ಪರಿಷ್ಕರಿಸುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಇದರ ಪರಿಣಾಮ, 2019ರಿಂದ ಜುಲೈ 1ರಿಂದ 2022ರ ಜೂನ್ 30ರವರೆಗಿನ ಬಾಕಿ ಹಣ ಸಿಗಲಿದೆ. ಇದರಿಂದ ಅಂದಾಜು ವಾರ್ಷಿಕವಾಗಿ 8,450 ಕೋಟಿ ರೂಪಾಯಿ ಸರ್ಕಾರಕ್ಕೆ ಹೆಚ್ಚುವರಿ ಹೊರೆಯಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್​ ಠಾಕೂರ್​ ತಿಳಿಸಿದ್ದಾರೆ.

  • The Union Cabinet chaired by Prime Minister Shri @narendramodi today approved the revision of pension of Armed Forces Pensioners/family pensioners under the One Rank One Pension w.e.f.July 01, 2019. pic.twitter.com/SgY98ob2re

    — Rajnath Singh (@rajnathsingh) December 23, 2022 " class="align-text-top noRightClick twitterSection" data=" ">

ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಟ್ವೀಟ್​ ಮಾಡಿದ್ದು, ಈ ನಿರ್ಧಾರದಿಂದ 25.13 ಲಕ್ಷಕ್ಕೂ ಹೆಚ್ಚು ಯೋಧರು ಪ್ರಯೋಜನ ಪಡೆಯುವರು. ಈ ದೇಶದ ಮಾಜಿ ಸೈನಿಕರಿಗೆ ನೀಡಿದ ಭರವಸೆಯನ್ನು ಈಡೇರಿಸಿದ್ದಕ್ಕಾಗಿ ಪ್ರಧಾನಿಯವರಿಗೆ ನನ್ನ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ. ಇದೇ ವೇಳೆ ಬಾಕಿ ಪಾವತಿಯನ್ನು​ ನಾಲ್ಕು ಅರ್ಧ ವಾರ್ಷಿಕ ಕಂತುಗಳಲ್ಲಿ ವಿತರಿಸಲಾಗುವುದು. ಆದರೆ, ಕುಟುಂಬ ಪಿಂಚಣಿದಾರರು, ವಿಶೇಷ ಪಿಂಚಣಿದಾರರು ಅಥವಾ ಶೌರ್ಯ ಪ್ರಶಸ್ತಿ ವಿಜೇತ ಪಿಂಚಣಿದಾರರು (family pensioners or specially and liberalised family pensioners or gallantry award winners) ಸೇರಿದಂತೆ ಇತರರು ಒಂದೇ ಕಂತಿನಲ್ಲಿ ಬಾಕಿ​​ ಪಡೆಯುತ್ತಾರೆ ಎಂದು ಸಚಿವರು ಘೋಷಿಸಿದ್ದಾರೆ.

ಇದನ್ನೂ ಓದಿ: ಭಾರತ-ಚೀನಾ ಗಡಿ ಸಮೀಪ ಕಮರಿಗೆ ಬಿದ್ದ ಸೇನಾ ವಾಹನ: 16 ಯೋಧರು ಹುತಾತ್ಮ

Last Updated : Dec 23, 2022, 10:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.