ETV Bharat / bharat

3 ಲೋಕಸಭಾ, 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ: ಯಾವ ಕ್ಷೇತ್ರದಲ್ಲಿ, ಯಾವ ಪಕ್ಷಕ್ಕೆ ಜಯ?

author img

By

Published : Jun 26, 2022, 10:19 PM IST

ಹತ್ತು ಕ್ಷೇತ್ರಗಳಲ್ಲಿ ಬಿಜೆಪಿ ಎರಡು ಲೋಕಸಭಾ ಮತ್ತು ಮೂರು ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದು ಲೋಕಸಭೆ ಸ್ಥಾನದಲ್ಲಿ ಶಿರೋಮಣಿ ಅಕಾಲಿ ದಳ, ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​​ ಹಾಗೂ ತಲಾ ಒಂದು ಕ್ಷೇತ್ರದಲ್ಲಿ ಆಮ್​ ಆದ್ಮಿ ಪಕ್ಷ ಹಾಗೂ ವೈಆರ್​ಎಸ್​​ ಕಾಂಗ್ರೆಸ್ ಜಯ ದಾಖಲಿಸಿವೆ.

three Lok Sabha and seven assembly seats election
ಮೂರು ಲೋಕಸಭಾ, ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ

ನವದೆಹಲಿ: ಐದು ರಾಜ್ಯಗಳಲ್ಲಿ ಇತ್ತೀಚಿಗೆ ನಡೆದ ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಏಳು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಒಟ್ಟು 10 ಕ್ಷೇತ್ರಗಳಲ್ಲಿ ಬಿಜೆಪಿ ಎರಡು ಲೋಕಸಭಾ ಮತ್ತು ಮೂರು ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಮತ್ತೊಂದು ಲೋಕಸಭೆ ಸ್ಥಾನದಲ್ಲಿ ಶಿರೋಮಣಿ ಅಕಾಲಿ ದಳ, ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​​ ಹಾಗೂ ತಲಾ ಒಂದು ಕ್ಷೇತ್ರದಲ್ಲಿ ಆಮ್​ ಆದ್ಮಿ ಪಕ್ಷ ಹಾಗೂ ವೈಆರ್​ಎಸ್​​ ಕಾಂಗ್ರೆಸ್ ಜಯ ದಾಖಲಿಸಿದೆ.

ಉತ್ತರ ಪ್ರದೇಶದ ರಾಮ್ಪುರ್​, ಅಜಂಗಢ ಲೋಕಸಭಾ ಕ್ಷೇತ್ರ, ಪಂಜಾಬ್​​ನ ಸಂಗ್ರೂರ್ ಲೋಕಸಭಾ ಕ್ಷೇತ್ರ ಹಾಗೂ ತ್ರಿಪುರದ ನಾಲ್ಕು ವಿಧಾನಸಭಾ ಕ್ಷೇತ್ರ, ಆಂಧ್ರಪ್ರದೇಶದ ಆತ್ಮಕೂರ್, ದೆಹಲಿಯ ರಾಜೇಂದ್ರ ನಗರ ಮತ್ತು ಜಾರ್ಖಂಡ್​ನ ಮಂದಾರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೂ.23ರಂದು ಮತದಾನ ನಡೆದಿತ್ತು. ಭಾನುವಾರ (ಜೂ.26) ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಿದೆ.

ಹಿಗ್ಗಿದ ಬಿಜೆಪಿ, ಕುಗ್ಗಿದ ಎಸ್​ಪಿ.. ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಎರಡೂ ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಹಿಗ್ಗಿದೆ. ಯಾಕೆಂದರೆ, ರಾಮ್ಪುರ್​, ಅಜಂಗಢ ಲೋಕಸಭಾ ಕ್ಷೇತ್ರಗಳು ಸಮಾಜವಾದಿ ಪಕ್ಷದ ತೆಕ್ಕೆಯಲ್ಲಿದ್ದವು. ಆದರೆ, ಎರಡೂ ಕ್ಷೇತ್ರಗಳನ್ನು ಎಸ್​​ಪಿ ಕಳೆದುಕೊಂಡಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಅಜಂಗಢ ಕ್ಷೇತ್ರದಿಂದ ಎಸ್​ಪಿ ಅಧ್ಯಕ್ಷ ಅಖಿಲೇಶ್​ ಯಾದವ್​ ಮತ್ತು ರಾಮ್ಪುರ್​ ಕ್ಷೇತ್ರದಿಂದ ಮತ್ತೊಬ್ಬ ಪ್ರಬಲ ನಾಯಕ ಅಜಂ ಖಾನ್​ ಗೆದ್ದಿದ್ದರು. ಆದರೆ, ನಂತರ ಇಬ್ಬರೂ ನಾಯಕರು ಕಳೆದ ಮಾರ್ಚ್​ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ನಂತರ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿದ್ದ ಎರಡೂ ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು.

ಅಜಂಗಢ ಕ್ಷೇತ್ರದಿಂದ ಬಿಜೆಪಿಯ ದಿನೇಶ್​ ಲಾಲ್​ ಯಾದವ್​ 8,679 ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲಿ ಎಸ್​​ಪಿ ಅಭ್ಯರ್ಥಿಯಾಗಿದ್ದ ಅಖಿಲೇಶ್ ಯಾದವ್ ಅವರ ಸೋದರ ಸಂಬಂಧಿ ಧರ್ಮೇಂದ್ರ ಯಾದವ್ ಸೋಲುಂಡಿದ್ದಾರೆ. ಅಲ್ಲದೇ, ಈ ಹಿಂದೆ ಧರ್ಮೇಂದ್ರ ಮೂರು ಬಾರಿ ಸಂಸದರಾಗಿದ್ದರು. ಇತ್ತ, ರಾಮ್ಪುರ್ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ಲೋಧಿ 42 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಎಸ್​ಪಿ ಅಭ್ಯರ್ಥಿ ಹಾಗೂ ಅಜಂ ಖಾನ್​ ಆಪ್ತ ಮೊಹಮ್ಮದ್ ಅಸಿಮ್ ರಾಜಾ ಸೋತಿದ್ದಾರೆ.

ಪಂಜಾಬ್​ ಸಿಎಂಗೆ ಮುಖಭಂಗ.. ಪಂಜಾಬ್‌ನ ಸಂಗ್ರೂರ್ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಮುಖಭಂಗವಾಗಿದೆ. ಇದೇ ಕ್ಷೇತ್ರದಿಂದ ಈ ಹಿಂದೆ ಭಗವಂತ್ ಮಾನ್ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಧುರಿ ಕ್ಷೇತ್ರದಿಂದ ಗೆದ್ದ ನಂತರ ಮಾನ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಈ ಕ್ಷೇತ್ರ ತೆರವಾಗಿತ್ತು.

ಇಲ್ಲಿ ನಡೆದ ಉಪಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳ (ಅಮೃತಸರ) ಅಧ್ಯಕ್ಷ ಸಿಮ್ರಂಜಿತ್ ಸಿಂಗ್ 5,822 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆಡಳಿತಾರೂಢ ಆಪ್​ ಅಭ್ಯರ್ಥಿ ಗುರ್ಮೈಲ್ ಸಿಂಗ್ ಸೋಲು ಕಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದಷ್ಟೇ ಆಪ್​ ವಿಧಾಸಭಾ ಚುನಾವಣೆಯಲ್ಲಿ 177 ಕ್ಷೇತ್ರಗಳ ಪೈಕಿ 92 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಈಗ ಮೂರು ತಿಂಗಳಲ್ಲಿ ಮತದಾರರು ಆಪ್​ಗೆ ಶಾಕ್​ ನೀಡಿದ್ದಾರೆ. ಸಿಮ್ರಂಜಿತ್ ಸಿಂಗ್ ಸುಮಾರು 23 ವರ್ಷಗಳ ನಂತರ ಸಂಗ್ರೂರ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 1999ರಲ್ಲಿ ಈ ಕ್ಷೇತ್ರದಲ್ಲಿ ಅವರು ಗೆದ್ದು ಸಂಸತ್​ಗೆ ಹೋಗಿದ್ದರು.

ತ್ರಿಪುರ ಸಿಎಂಗೆ ಗೆಲುವು.. ತ್ರಿಪುರದ ಅಗರ್ತಲಾ, ಟೌನ್ ಬೋರ್ಡೋವಾಲಿ, ಸುರ್ಮಾ ಮತ್ತು ಜುಬರಾಜನಗರ ಸೇರಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಟೌನ್ ಬೋರ್ಡೋವಾಲಿ ಕ್ಷೇತ್ರದಿಂದ ಮುಖ್ಯಮಂತ್ರಿ ಮತ್ತು ಬಿಜೆಪಿ ಅಭ್ಯರ್ಥಿ ಮಾಣಿಕ್ ಸಾಹಾ ಕಾಂಗ್ರೆಸ್​ನ ಆಶಿಶ್​ ಕುಮಾರ್​ ಸಾಹಾ ವಿರುದ್ಧ 6,104 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಅಲ್ಲದೇ, ಸುರ್ಮಾ ಕ್ಷೇತ್ರದಲ್ಲಿ ಬಿಜೆಪಿ ಸ್ವಪ್ನಾ ದಾಸ್​​ ಪಕ್ಷೇತ್ರರ ಅಭ್ಯರ್ಥಿ ಬಾಬುರಾಮ್ ಸತ್ನಾಮಿ ವಿರುದ್ಧ 4,583 ಮತಗಳ ಅಂತರ ಹಾಗೂ ಜುಬರಾಜನಗರ ಕ್ಷೇತ್ರದಲ್ಲಿ ಬಿಜೆಪಿಯ ಮಲಿನಾ ದೇಬನಾಥ್ ಸಿಪಿಐ(ಎಂ) ನ ಶೈಲೇಂದ್ರ ಚಂದ್ರ ನಾಥ್ ವಿರುದ್ಧ 4,572 ಮತಗಳ ಅಂತರದಿಂದ ಗೆದ್ದಿದ್ದಾರೆ. ಅಗರ್ತಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುದೀಪ್ ರಾಯ್ ಬರ್ಮನ್ ಬಿಜೆಪಿಯ ಅಶೋಕ್ ಸಿನ್ಹಾ ವಿರುದ್ಧ 3,163 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ದೆಹಲಿಯಲ್ಲಿ ಆಪ್​ಗೆ ಜಯ.. ದೆಹಲಿಯ ರಾಜೇಂದ್ರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಆಪ್​ನ ಅಭ್ಯರ್ಥಿ ದುರ್ಗೇಶ್ ಪಾಠಕ್ ಬಿಜೆಪಿಯ ರಾಜೇಶ್ ಭಾಟಿಯಾ ಅವರನ್ನು 11,000 ಮತಗಳ ಅಂತರದಿಂದ ಸೋಲಿಸಿದ್ದಾರೆ.

ವೈಎಸ್​​ಆರ್​​ ಕಾಂಗ್ರೆಸ್​ಗೆ ಜೈ.. ಆಂಧ್ರಪ್ರದೇಶದ ಎಸ್‌ಪಿಎಸ್ ನೆಲ್ಲೂರು ಜಿಲ್ಲೆಯ ಆತ್ಮಕೂರು ವಿಧಾನಸಭಾ ಕ್ಷೇತ್ರವನ್ನು ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಉಳಿಸಿಕೊಂಡಿದೆ. ವೈಎಸ್‌ಆರ್‌ ಕಾಂಗ್ರೆಸ್​ ಅಭ್ಯರ್ಥಿ ಮೇಕಪತಿ ವಿಕ್ರಮ್ ರೆಡ್ಡಿ ಬಿಜೆಪಿಯ ಜಿ.ಭರತ್ ಕುಮಾರ್ ಯಾದವ್ ವಿರುದ್ಧ 82,888 ಮತಗಳ ಅಂತರದಿಂದ ಪ್ರಚಂಡ ಗೆಲುವು ಸಾಧಿಸಿದ್ದಾರೆ. ಮೇಕಪತಿ ವಿಕ್ರಮ್ ರೆಡ್ಡಿ 1.02 ಲಕ್ಷ ಮತಗಳನ್ನು ಗಳಿಸಿದರೆ, ಬಿಜೆಪಿ ಅಭ್ಯರ್ಥಿ ಕೇವಲ 19,353 ಪಡೆದು ಭಾರಿ ಮುಖಭಂಗ ಅನುಭವಿಸಿದ್ದಾರೆ.

ಜಾರ್ಖಂಡ್​ನಲ್ಲಿ 'ಕೈ' ಹಿಡಿದ ಮತದಾರ.. ಜಾರ್ಖಂಡ್‌ನ ಮಂದರ್ ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್ ಕೈ ಹಿಡಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಶಿಲ್ಪಿ ನೇಹಾ ಟಿರ್ಕಿ ಬಿಜೆಪಿಯ ಗಂಗೋತ್ರಿ ಕುಜೂರ್ ವಿರುದ್ಧ 23,517 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.