ETV Bharat / bharat

ಮಹಿಳೆಯ ವಿವಾಹೇತರ ಸಂಬಂಧಕ್ಕೆ ಮಗಳು ಬಲಿ: ಅತ್ಯಾಚಾರ ಎಸಗಿ, ಬರ್ಬರ ಹತ್ಯೆಗೈದ ಕಟುಕ - ರಹಸ್ಯ ಮಾಹಿತಿ ಪತ್ತೆ ಹಚ್ಚಿದ ಪೊಲೀಸರು

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಹಿಳೆಯ ವಿವಾಹೇತರ ಸಂಬಂಧಕ್ಕೆ ಮಗಳು ಬಲಿಯಾಗಿದ್ದಾಳೆ.

Butcher Raped Killed Delhi Girl  She Knew Of Affair With Mother  Delhi girl raped and murder case  ತಾಯಿಯ ವಿವಾಹೇತರ ಸಂಬಂಧಕ್ಕೆ ಮಗಳು ಬಲಿ  ಮಾಂಸ ಕಡಿಯುವ ಕೆಲಸ ಮಾಡುತ್ತಿದ್ದ ಆರೋಪಿ  ರಾತ್ರೋರಾತ್ರಿ ಬಾಲಕಿ ಕಿಡ್ನ್ಯಾಪ್​ ಮಾಡಿದ ಆರೋಪಿ  ಅರಣ್ಯದಲ್ಲಿ ಬಾಲಕಿ ಶವವಾಗಿ ಪತ್ತೆ  ಆರೋಪಿ ಪತ್ತೆಗಾಗಿ ಪೊಲೀಸ್​ ತಂಡ ರಚನೆ  ರಹಸ್ಯ ಮಾಹಿತಿ ಪತ್ತೆ ಹಚ್ಚಿದ ಪೊಲೀಸರು  ಮಲಗಿದ್ದ ಬಾಲಕಿಯನ್ನು ಆರೋಪಿ ಅಪಹರಿಸಿ ಅತ್ಯಾಚಾರ
ತಾಯಿಯ ವಿವಾಹೇತರ ಸಂಬಂಧಕ್ಕೆ ಮಗಳು ಬಲಿ
author img

By

Published : Aug 23, 2022, 1:28 PM IST

Updated : Aug 23, 2022, 2:36 PM IST

ನವದೆಹಲಿ: ದೆಹಲಿಯ ಯಮುನಾ ಖಾದರ್ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯ ಕತ್ತು ಸೀಳಿ ಅಮಾನವೀಯವಾಗಿ ಕೊಲೆ ಮಾಡಿದ್ದಲ್ಲದೇ ಮುಖ ವಿರೂಪಗೊಳಿಸಿ ಪರಾರಿಯಾಗಿದ್ದ. ಈಗ 36 ವರ್ಷದ ಕಟುಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಾಂಸ ಕಡಿಯುವ ಕೆಲಸ ಮಾಡುತ್ತಿದ್ದ ಆರೋಪಿ: ಮೂಲತಃ ಬಿಹಾರದ ನಿವಾಸಿಯಾಗಿರುವ ರಿಜ್ವಾನ್ ಅಲಿಯಾಸ್ ಬಾದ್‌ಶಾ 20 ವರ್ಷಗಳ ಹಿಂದೆ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದ. ತುರ್ಕಮನ್ ಗೇಟ್ ಪ್ರದೇಶದಲ್ಲಿ ಈತ ಮಾಂಸ ಕಡಿಯುವ ಕೆಲಸ ಮಾಡುತ್ತಿದ್ದ. ಮಾದಕ ವ್ಯಸನಿಯಾಗಿರುವ ರಿಜ್ವಾನ್, ಯಮುನಾ ಖಾದರ್ ಬಳಿ ಡ್ರಗ್​ ಸೇವಿಸಲು ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರೋರಾತ್ರಿ ಬಾಲಕಿ ಕಿಡ್ನ್ಯಾಪ್​ : ಆಗಸ್ಟ್ 4-5 ರ ಮಧ್ಯರಾತ್ರಿಯಲ್ಲಿ ದರಿಯಾಗಂಜ್ ನಿವಾಸಿಯೊಬ್ಬರು ತಮ್ಮ ಹೆಂಡತಿ ಮತ್ತು ನಾಲ್ವರು ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದರು. ಅವರು ಬೆಳಗ್ಗೆ 4 ಗಂಟೆ ಸುಮಾರಿಗೆ ಎದ್ದು ನೋಡಿದಾಗ ಹೆಣ್ಣು ಮಗಳೊಬ್ಬಳು ಕಾಣೆಯಾಗಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯರು, ಸಂಬಂಧಿಕರು ಮತ್ತು ಪೋಷಕರು ಆಕೆಗಾಗಿ ಶೋಧ ನಡೆಸಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363ರ ಅಡಿಯಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಗಾಗಿ ಹುಡುಕಾಟ ನಡೆಸಿದ್ದರು.

13 ದಿನಗಳ ಬಳಿಕ ಬಾಲಕಿ ಶವ ಪತ್ತೆ: ನಾಪತ್ತೆಯಾಗಿದ್ದ ಬಾಲಕಿ ಆಗಸ್ಟ್ 18ರಂದು ಶವವಾಗಿ ಪತ್ತೆಯಾಗಿದ್ದಾಳೆ. ಯಮುನಾ ಖಾದರ್ ಪ್ರದೇಶದಲ್ಲಿ ಪತ್ತೆಯಾದ ಶವದ ಮೇಲೆ ತೀವ್ರ ಗಾಯಗಳು ಗುರುತು ಕಂಡು ಬಂದಿತ್ತು. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯನ್ನು ಎಫ್‌ಐಆರ್‌ಗೆ ಸೇರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಹಸ್ಯ ಮಾಹಿತಿ ಪತ್ತೆ ಹಚ್ಚಿದ ಪೊಲೀಸರು: ಆರೋಪಿ ರಿಜ್ವಾನ್ ಅಲಿಯಾಸ್ ಬಾದ್‌ಶಾ ಎಂಬಾತ ಆಗಾಗ್ಗೆ ಜುಗ್ಗಿ ಎಂಬಲ್ಲಿಗೆ ಭೇಟಿ ನೀಡುತ್ತಿದ್ದ. ಚಾಕಲೇಟ್‌ ಮತ್ತು ಇತರ ವಸ್ತುಗಳನ್ನು ನೀಡಿ ಸಂತ್ರಸ್ತೆಯ ತಾಯಿ ಜೊತೆ ಆತ್ಮೀಯತೆ ಬೆಳಸಿಕೊಂಡಿದ್ದ. ಬಳಿಕ ಬಾಲಕಿಯೊಂದಿಗೂ ಸಲುಗೆ ಬೆಳೆಸಿದ್ದ ಎಂಬ ಮಾಹಿತಿ ಸಿಕ್ಕಿತ್ತು. ಘಟನೆಯ ದಿನ ರಿಜ್ವಾನ್ ಯಮುನಾ ಖಾದರ್‌ಗೆ ಬಂದಿದ್ದ ಎಂದು ತಿಳಿದುಬಂದಿದೆ. ಕೂಡಲೇ ಆರೋಪಿ ರಿಜ್ವಾನ್‌ನನ್ನು ಪತ್ತೆ ಹಚ್ಚಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ವಿಚಾರಣೆಯಲ್ಲಿ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್​ ಅಧಿಕಾರಿ ಹೇಳಿದರು.

ವಿವಾಹೇತರ ಸಂಬಂಧ ಹೊಂದಿದ್ದ ಆರೋಪಿ: ಆರೋಪಿ ಬಾದ್​ಶಾ ಮತ್ತು ಮೃತ ಬಾಲಕಿ ತಾಯಿ ನಡುವೆ ವಿವಾಹೇತರ ಸಂಬಂಧ ನಡೆಯುತ್ತಿತ್ತು. ಈ ವಿಷಯ ಮೃತ ಬಾಲಕಿಗೆ ತಿಳಿದಿದೆ. ಆದ್ದರಿಂದ ಬಾಲಕಿಯನ್ನು ಕೊಲೆ ಮಾಡಲು ಆರೋಪಿ ನಿರ್ಧರಿಸಿದ್ದ. ಘಟನೆಯ ದಿನ ಆರೋಪಿ ಡ್ರಗ್ಸ್​ ಸೇವಿಸಿ ರಾತ್ರಿ ಆಗುವವರೆಗೆ ಕಾಯುತ್ತಿದ್ದ. ಬಾಲಕಿಯ ಕುಟುಂಬದ ಎಲ್ಲಾ ಸದಸ್ಯರು ಮಲಗಿದ್ದ ವೇಳೆ ಗುಡಿಸಿಲಿಗೆ ಆರೋಪಿ ಹೋಗಿದ್ದಾನೆ. ಎಲ್ಲರನ್ನು ಮಲಗಿರುವುದನ್ನು ನೋಡಿದ ರಿಜ್ವಾನ್​ ಬಾಲಕಿಯನ್ನು ಅಪಹರಿಸಿ ಪಕ್ಕದ ಯಮುನಾ ಖಾದರ್ ಅರಣ್ಯ ಪ್ರದೇಶದ ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯ ಕತ್ತು ಸೀಳಿ ಮುಖ ವಿರೂಪಗೊಳಿಸಿದ್ದಾನೆ. ವಿಚಾರಣೆ ವೇಳೆ ಆರೋಪಿ ನಡೆದ ಕೃತ್ಯವನ್ನು ಬಯಲು ಮಾಡಿದ್ದು, ಅಪರಾಧ ಕೃತ್ಯಕ್ಕೆ ಬಳಸಿದ್ದ ಚಾಕು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಹೇಳಿದರು.

ಇದನ್ನೂ ಓದಿ: ಬಾಲಕಿ ಜೊತೆ ಅಸಭ್ಯ ವರ್ತನೆ: ಪೋಷಕರಿಗೆ ತಿಳಿಸಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ, ಆರೋಪಿ ಆತ್ಮಹತ್ಯೆ

Last Updated : Aug 23, 2022, 2:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.