ರಜೌರಿ (ಜಮ್ಮು-ಕಾಶ್ಮೀರ): ರಜೌರಿ ಜಿಲ್ಲೆಯಲ್ಲಿ ಇಂದು ಬಸ್ ಅಪಘಾತ ಸಂಭವಿಸಿ, ಇಬ್ಬರು ಸಾವನ್ನಪ್ಪಿದ್ದರೆ ಹಲವರು ಗಾಯಗೊಂಡಿದ್ದಾರೆ. ರಜೌರಿಯಿಂದ ಗಂಬೀರ್ ಮುಘಲಕ್ಕೆ ತೆರಳುತ್ತಿದ್ದ ಬಸ್ (JKO2, AE-3393) ಮಾರ್ಗಮಧ್ಯೆ ಮಗುಚಿಬಿದ್ದಿದೆ.
ಮಾಹಿತಿ ಪಡೆದ ಕೂಡಲೇ ಅಧಿಕಾರಿಗಳು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಐದು ಆ್ಯಂಬುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಇದನ್ನೂ ಓದಿ: ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರು, ನಾಲ್ವರ ದುರ್ಮರಣ: ಇಬ್ಬರ ಸ್ಥಿತಿ ಗಂಭೀರ
ರಜೌರಿ ಎಸ್‌ಎಸ್‌ಪಿ ಮೊಹಮ್ಮದ್ ಅಸ್ಲಾಂ ಮಾತನಾಡಿ, ಬಸ್ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.