ಅಲ್ಮೋರಾ(ಉತ್ತರಾಖಂಡ): ಈ ಚಿತ್ರ ನೋಡ್ತಿದ್ರೆ ಯಾವುದೋ ಹಾಲಿವುಡ್ ಸಿನಿಮಾದ ಸಾಹಸ ದೃಶ್ಯವೇನೋ ಎಂಬಂತಿದೆ. ರಸ್ತೆ ಮೇಲೆ ಚಲಿಸಬೇಕಾದ ಬಸ್ ಪ್ರಪಾತದೆಡೆಗೆ ಮುಖಮಾಡಿದೆ. ಬಸ್ನ ಮುಂದಿನ ಭಾಗ ಗಾಳಿಯಲ್ಲಿ ತೇಲುತ್ತಿದೆ..
ಇದು ಉತ್ತರಾಖಂಡದ ಪಾನುವದೋಖಾನ್ ಎಂಬ ಕಡಿದಾದ ಪ್ರದೇಶದಲ್ಲಿ ಕಂಡು ಬಂದ ಬಸ್ ಅಪಘಾತದ ದೃಶ್ಯ. ಪ್ರಪಾತಕ್ಕೆ ಬೀಳಬೇಕಾಗಿದ್ದ ಬಸ್ ಅಂಚಿನಲ್ಲಿ ನಿಂತು ನಡೆಯಬಹುದಾಗಿದ್ದ ಬಹುದೊಡ್ಡ ಅಪಘಾತದಿಂದ ಪಾರಾಗಿದೆ.
ಅಲ್ಮೋರಾದ ಭಟ್ರೌಂಜ್ ಖಾನ್ನಿಂದ ರಾಮನಗರಕ್ಕೆ ತೆರಳುತ್ತಿದ್ದ ಬಸ್‌ವೊಂದು ಎದುರಿನಿಂದ ಬರುವ ವಾಹನಕ್ಕೆ ದಾರಿ ಮಾಡಿಕೊಡುವ ಭರದಲ್ಲಿ ರಸ್ತೆಯಿಂದ ಹೊರ ಬಂದು ಪ್ರಪಾತದೆಡೆಗೆ ನುಗ್ಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್ ಪ್ರಪಾತದ ಅಂಚಿನಲ್ಲಿ ನಿಂತುಕೊಂಡಿದೆ.
ಈ ವೇಳೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಜನರು ಕಿರುಚಾಡಿದ್ದಾರೆ. ಬಳಿಕ ಅಲ್ಲಿದ್ದವರು ತಿಳಿಹೇಳಿ ಎಲ್ಲರನ್ನೂ ಸುರಕ್ಷಿತವಾಗಿ ಬಸ್ನಿಂದ ಹೊರಗೆ ಕರೆತಂದು ರಕ್ಷಿಸಿದ್ದಾರೆ. ಪ್ರಪಾತದ ಅಂಚಿಗೆ ನಿಂತ ಬಸ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಎರಡು ದಿನಗಳ ಭಾರಿ ನಷ್ಟದ ಬಳಿಕ ಷೇರುಪೇಟೆ ಚೇತರಿಕೆ ; ಸೆನ್ಸೆಕ್ಸ್ 887 ಅಂಕಗಳ ಜಿಗಿತ
ಕಿರಿದಾದ ರಸ್ತೆಯಿಂದಾಗಿ ಬಸ್ ಪ್ರಪಾತಕ್ಕೆ ಬೀಳುವ ಅಪಘಾತದಿಂದ ಪಾರಾಗಿದೆ. ಏತನ್ಮಧ್ಯೆ, ಬಸ್ನಲ್ಲಿ 20 ಪ್ರಯಾಣಿಕರು ಇದ್ದರು.