ETV Bharat / bharat

ಉತ್ತರಾಖಂಡದಲ್ಲಿ ಪ್ರತ್ಯೇಕ ಅಪಘಾತಕ್ಕೆ 12 ಮಂದಿ ಸಾವು; ಬಸ್​ ಕಂದಕಕ್ಕೆ ಬಿದ್ದು 4, ಕಾರಿನ ಮೇಲೆ ಬಂಡೆ ಬಿದ್ದು 8 ಮಂದಿ ದುರ್ಮರಣ - ನೈನಿತಾಲ್ ಬಸ್​ ಅಪಘಾತ

ಉತ್ತರಾಖಂಡದಲ್ಲಿ ಬಸ್​ ಕಂದಕಕ್ಕೆ ಬಿದ್ದು 4 ಮಂದಿ, ಬೊಲೆರೋ ಕಾರಿನ ಮೇಲೆ ಬಂಡೆ ಬಿದ್ದು 8 ಮಂದಿ ಸಾವಿಗೀಡಾಗಿದ್ದಾರೆ.

ಕಂದಕಕ್ಕೆ ಬಿದ್ದ ಬಸ್​
ಕಂದಕಕ್ಕೆ ಬಿದ್ದ ಬಸ್​
author img

By ETV Bharat Karnataka Team

Published : Oct 8, 2023, 10:52 PM IST

ನೈನಿತಾಲ್ (ಉತ್ತರಾಖಂಡ): ಉತ್ತರಾಖಂಡದಲ್ಲಿ ಭಾನುವಾರ ಸರಣಿ ದುರಂತಗಳು ನಡೆದಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಪಿಥೋರ್​​ಗಢದಲ್ಲಿ ಕಾರಿನ ಮೇಲೆ ದೊಡ್ಡ ಬಂಡೆಯೊಂದು ಉರುಳಿಬಿದ್ದು, 8 ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ, ಮತ್ತೊಂದು ಅಪಘಾತದಲ್ಲಿ ಬಸ್​ ಕಂದಕಕ್ಕೆ ಉರುಳಿಬಿದ್ದ 4 ಮಂದಿ ಮೃತಪಟ್ಟಿದ್ದಾರೆ. ಹಲವು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಕಂದಕಕ್ಕೆ ಬಿದ್ದ ಬಸ್​: ನೈನಿತಾಲ್​ನ ಕಲಾಧುಂಗಿ ರಸ್ತೆಯ ನಲ್ನಿ ಎಂಬಲ್ಲಿ ಬಸ್ಸೊಂದು ಆಳ ಕಂದಕಕ್ಕೆ ಭಾನುವಾರ ರಾತ್ರಿ ಬಿದ್ದಿದೆ. ಬಸ್ಸಿನಲ್ಲಿ 32 ಮಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೆ 4 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರ ಪ್ರಕಾರ, ಕಲಾಧುಂಗಿ ರಸ್ತೆಯ ನಲ್ನಿಯಲ್ಲಿ ಖಾಸಗಿ ಬಸ್ಸೊಂದು ಹೋಗುತ್ತಿದ್ದಾಗ ಆಯತಪ್ಪಿ, ದೊಡ್ಡ ಕಮರಿಗೆ ಬಿದ್ದಿದೆ. ಅಪಘಾತದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದೆ. ಕತ್ತಲಾದ ಕಾರಣ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಈವರೆಗೂ ನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ರಕ್ಷಿಸಲಾಗಿದೆ.

ಘಟನಾ ಸ್ಥಳದಿಂದ 22 ಜನರನ್ನು ರಕ್ಷಿಸಲಾಗಿದೆ. ಕತ್ತಲೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ. ಕೆಲವರು ಬಸ್ಸಿನಡಿ ಸಿಲುಕಿರುವ ಮಾಹಿತಿ ಇದೆ. ಬಸ್‌ನಲ್ಲಿ ಪ್ರವಾಸಿಗರು, ಶಾಲಾ ಸಿಬ್ಬಂದಿ ಸೇರಿ ಇತರರು ಇದ್ದರು ಎಂದು ಹೇಳಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ನೈನಿತಾಲ್ ಎಸ್‌ಎಸ್‌ಪಿ ಪ್ರಹ್ಲಾದ್ ನಾರಾಯಣ ಮೀನಾ ಈಟಿವಿ ಭಾರತ್‌ಗೆ ಮಾಹಿತಿ ನೀಡಿದ್ದಾರೆ.

ಕಾರಿನ ಮೇಲೆ ಬಿದ್ದ ಬಂಡೆ : ಇಂದು ಬೆಳಗ್ಗೆ ಇನ್ನೊಂದು ದುರ್ಘಟನೆಯಲ್ಲಿ ಪಿಥೋರಗಢದ ಧಾರ್ಚುಲಾದಲ್ಲಿ ಬೊಲೆರೋ ಕಾರಿನ ಮೇಲೆ ದೊಡ್ಡ ಬಂಡೆಯೊಂದು ಉರುಳಿ ಬಿದ್ದಿದೆ. ಧಾರ್ಚುಲ ಗುಂಜಿ ರಸ್ತೆಯಲ್ಲಿ ಗುಡ್ಡದ ಮೇಲಿಂದ ಬಂಡೆ ಉರುಳಿಬಿದ್ದು ಈ ದುರಂತ ನಡೆದಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಇದಲ್ಲದೇ, ಕೇದಾರನಾಥ ಹೆದ್ದಾರಿಯ ಗೌರಿಕುಂಡದ ಬಳಿ ಬೆಟ್ಟದ ಮೇಲಿಂದ ಬಂಡೆಗಳು ಬಿದ್ದಿವೆ. ಇದರಲ್ಲಿ ಎರಡು ವಾಹನಗಳಿಗೆ ಹಾನಿದ ಬಗ್ಗೆ ವರದಿಯಾಗಿದೆ.

ಪೊಲೀಸರ ಪ್ರಕಾರ, ವಾಹನವು ನಭಿ ಗ್ರಾಮದಲ್ಲಿ ಹೋಂ ಸ್ಟೇ ನಡೆಸುತ್ತಿರುವ ಹರೀಶ್ ನಬಿಯಾಲ್ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ. ಅಪಘಾತದಲ್ಲಿ ಗಾಯಗೊಂಡವರು ಧಾರ್ಚುಲಾ ನಿವಾಸಿಗಳಾಗಿದ್ದಾರೆ. ಇಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದವರು. ಕಾರಲ್ಲಿದ್ದ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಸ್ನೇಹಿತನನ್ನು ಕೊಂದ ಯುವಕ.. ಸ್ಕೂಟಿಯಲ್ಲಿ ಶವ ಸಾಗಿಸಲು ಯತ್ನ, ಸ್ಥಳೀಯರನ್ನ ಕಂಡು ಪರಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.