ETV Bharat / bharat

ಭೀಕರ ರಸ್ತೆ ಅಪಘಾತ.. ಬಸ್ಸಿನಡಿ ಸಿಲುಕಿ ಮೂವರು ಸುಟ್ಟು ಕರಕಲು - ಬಸ್ಸಿನ ಇಂಧನ ಟ್ಯಾಂಕ್ ಸ್ಫೋಟ

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ಸಮಯದಲ್ಲಿ ಬೈಕ್‌ಗೆ ಪೊಲೀಸ್​ ಬಸ್​ವೊಂದು ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಬೈಕ್‌ಗೆ ಬೆಂಕಿ ಮತ್ತು ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದ ಘಟನೆ ಮಂಗಳವಾರ ಬಿಹಾರದ ಛಾಪ್ರಾದಲ್ಲಿ ನಡೆದಿದೆ.

road accident in chapra  Three people died in a collision with a police bus  Police bus and bike collide in Chhapra  ಭೀಕರ ರಸ್ತೆ ಅಪಘಾತ  ಬಸ್ಸಿನಡಿ ಸಿಲುಕಿ ಸುಟ್ಟು ಕರಕಲವಾದ ಮೂವರು  ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ  ಬೈಕ್‌ಗೆ ಪೊಲೀಸ್​ ಬಸ್​ವೊಂದು ಡಿಕ್ಕಿ  ಬಸ್ಸಿನ ಇಂಧನ ಟ್ಯಾಂಕ್ ಸ್ಫೋಟ  ಆಕ್ರೋಶಗೊಂಡ ಜನರಿಂದ ಪ್ರತಿಭಟನೆ
ಭೀಕರ ರಸ್ತೆ ಅಪಘಾತ
author img

By

Published : Oct 13, 2022, 7:33 AM IST

ಛಾಪ್ರಾ (ಬಿಹಾರ್): ಕೇಂದ್ರ ಗೃಹ ಸಚಿವ ಮಿತ್ ಶಾ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬೈಕ್​ಗೆ ಪೊಲೀಸ್ ಬಸ್​ವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಅಪಘಾತದ ನಂತರ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಬಸ್‌ಗೂ ಬೆಂಕಿ ಆವರಿಸಿದೆ.

ಬಸ್ಸಿನ ಇಂಧನ ಟ್ಯಾಂಕ್ ಸ್ಫೋಟ: ಈ ಇಡೀ ಘಟನೆ ಬಿಹಾರದ ಛಪ್ರಾ-ಸಿವಾನ್ ಹೆದ್ದಾರಿಯ ರಿವಿಲ್ಗಂಜ್ ಬಳಿ ನಡೆದಿದೆ. ಇಲ್ಲಿ ಬಿಹಾರ ಪೊಲೀಸ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್​ ಗುದ್ದಿದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಬಸ್​ಗೂ ಆವರಿಸಿದೆ. ನಂತರ ಬಸ್ಸಿನ ಇಂಧನ ಟ್ಯಾಂಕ್ ಸ್ಫೋಟಗೊಂಡಿದೆ. ಮತ್ತೊಂದೆಡೆ ಬೈಕ್ ಸವಾರ ಹಾಗೂ ಇಬ್ಬರು ಸಹಚರರು ಬಸ್‌ಗೆ ಸಿಲುಕಿ ಸಜೀವ ದಹನವಾಗಿದ್ದಾರೆ. ಇವರ ವಿಡಿಯೋ ವೈರಲ್ ಆಗಿದೆ.

ಬಸ್ಸಿನಡಿ ಸಿಲುಕಿ ಸುಟ್ಟು ಕರಕಲವಾದ ಮೂವರು

ಬೈಕ್ ಜೊತೆ ಮೂವರು ಬಸ್ಸಿನಡಿ ಸಿಲುಕಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಬೆಂಕಿ ಹೊತ್ತಿದ ಬಳಿಕ ಬಸ್​ನಲ್ಲಿದ್ದ ಪೊಲೀಸರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹರಸಾಹಸಪಟ್ಟರು. ಆದ್ರೆ ಇದು ವೈರಲ್​ ವಿಡಿಯೋ ಆಗಿದ್ದು, ಈ ಬಗ್ಗೆ 'ಈಟಿವಿ ಭಾರತ' ಸತ್ಯಾಸತ್ಯತೆಯನ್ನು ಖಚಿತಪಡಿಸುವುದಿಲ್ಲ.

ಆಕ್ರೋಶಗೊಂಡ ಜನರಿಂದ ಪ್ರತಿಭಟನೆ: ಬಸ್ ಚಾಲಕ ಉದ್ದೇಶಪೂರ್ವಕವಾಗಿ ರಾಂಗ್ ಸೈಡ್​ನಿಂದ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಮೂವರೂ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಬೈಕ್ ಅನ್ನು ಸುಮಾರು 500 ಮೀಟರ್ ವರೆಗೆ ಎಳೆದೊಯ್ದಿದ್ದಾರೆ. ಬೈಕ್ ಬಸ್ಸಿನಲ್ಲಿ ಸಿಲುಕಿಕೊಂಡಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮೃತರನ್ನು ಬುಲ್ಬುಲ್ ಕುಮಾರ್ (22 ವರ್ಷ), ಕುಂದನ್ ಕುಮಾರ್ (20 ವರ್ಷ) ಮತ್ತು ಕೃಷ್ಣ ಮಾಂಝಿ (28 ವರ್ಷ) ಎಂದು ಗುರುತಿಸಲಾಗಿದೆ. ಮೂವರೂ ಪೋಖರ್ ಭಿಂಡಾ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಘಟನೆಯ ನಂತರ ಸ್ಥಳೀಯ ಜನರು ಛಪ್ರಾ-ಸಿವಾನ್ ರಸ್ತೆ ತಡೆದು ಪ್ರತಿಭಟಿಸಿದರು.

ಓದಿ: ಕಾರು ಪಲ್ಟಿ: ಯರಗಟ್ಟಿ ಮುನವಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸೇರಿ ಇಬ್ಬರ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.