ನವದೆಹಲಿ : ಬಜೆಟ್ ಅಧಿವೇಶನದ ರಾಷ್ಟ್ರಪತಿಗಳ ಭಾಷಣ ಮೇಲೆ ರಾಜ್ಯಸಭೆಯಲ್ಲಿ ನಡೆಯಬೇಕಿದ್ದ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನ ಶನಿವಾರ ರದ್ದುಪಡಿಸಲಾಗಿದೆ ಎಂದು ರಾಜ್ಯಸಭಾ ಸಚಿವಾಲಯದ ಆದೇಶದಲ್ಲಿ ತಿಳಿಸಿದೆ.
ರಾಜ್ಯಸಭೆಯ ಸಭೆಯನ್ನು 2021ರ ಫೆಬ್ರವರಿ 13ರಂದು ರದ್ದುಪಡಿಸಲಾಗಿದೆ ಎಂದು ಸದಸ್ಯರಿಗೆ ತಿಳಿಸಲಾಗಿದೆ. ಅದರಂತೆ, ಆ ದಿನ ಸದನದಲ್ಲಿ ಯಾರೂ ಹಾಜರಾಗುವಂತಿಲ್ಲ ಎಂದು ಫೆ.11ರ ಆದೇಶದಲ್ಲಿ ಸದಸ್ಯರಿಗೆ ತಿಳಿಸಲಾಗಿದೆ.
ಇದನ್ನೂ ಓದಿ: 'ನಾವಿಬ್ಬರು ನಮಗಿಬ್ಬರು' ರಾಹುಲ್ ಗಾಂಧಿಯ ತಾಯಿ, ಸಹೋದರಿ, ಸೋದರ ಮಾವನಿಗೆ ಅನ್ವಯಿಸುತ್ತೆ: ಸಿಂಗ್
ಸಂಸತ್ತಿನ ಎರಡು ಸದನಗಳ ಜಂಟಿ ಸಭೆಗೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಜನವರಿ 29ರಂದು ಬಜೆಟ್ ಅಧಿವೇಶನ ಪ್ರಾರಂಭವಾಯಿತು. ಅಧಿವೇಶನದ ಮೊದಲ ಭಾಗವು ಫೆಬ್ರವರಿ 15ರವರೆಗೆ ಮುಂದುವರಿಯಲು ನಿರ್ಧರಿಸಲಾಗಿತ್ತು, ನಂತರ ಅದನ್ನು ಫೆಬ್ರವರಿ 13ರಂದು ಕೊನೆಗೊಳಿಸಲು ಮರು ನಿಗದಿಪಡಿಸಲಾಯಿತು.
ಅಧಿವೇಶನದ ಎರಡನೇ ಭಾಗವು ಮಾರ್ಚ್ 8ರಿಂದ ಏಪ್ರಿಲ್ 8ರವರೆಗೆ ನಡೆಯಲಿದೆ. ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಕೋವಿಡ್-19 ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಸಂಸತ್ತಿನ ಸದಸ್ಯರಿಗೆ ಕೋರಲಾಯಿತು.