ಜೈಸಲ್ಮೇರ್ (ರಾಜಸ್ಥಾನ): ರಾಜಸ್ಥಾನದ ಪೋಖ್ರಾನ್ನಲ್ಲಿ ಶೂಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಗುಂಡು ತಗುಲಿ ಯೋಧನೋರ್ವ ಸಾವನ್ನಪ್ಪಿದ್ದಾರೆ.
ಉತ್ತರಪ್ರದೇಶದ ಆಗ್ರಾ ಮೂಲದ 32 ವರ್ಷದ ಬಿಎಸ್ಎಫ್ ಯೋಧ ಸತೀಶ್ ಮೃತರು. ಮಾಹಿತಿಯ ಪ್ರಕಾರ, ಗುಜರಾತ್ನ ಭುಜ್ನಿಂದ ಬಿಎಸ್ಎಫ್ನ 1077ನೇ ಬೆಟಾಲಿಯನ್ ಪೋಖ್ರಾನ್ಫೀಲ್ಡ್ ಫೈರಿಂಗ್ ಶ್ರೇಣಿಯಲ್ಲಿ ಅಭ್ಯಾಸಕ್ಕಾಗಿ ಬಂದಿದೆ. ಈ ಸೆಷನ್ನಲ್ಲಿ 105 ಎಂಎಂ ಶೂಟಿಂಗ್ ಅಭ್ಯಾಸ ನಡೆಸಲಾಗುತ್ತಿದ್ದು, ಈ ವೇಳೆ ಅಚಾನಕ್ ಆಗಿ ಗುಂಡು ಸತೀಶ್ಗೆ ತಗುಲಿದೆ. ಘಟನೆಯಲ್ಲಿ ಸತೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ: ಸಾಹುಕಾರ್ ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ತಲೆದಂಡ ಫಿಕ್ಸ್.!?
ಮೃತ ಜವಾನ್ ಅವರ ಶವವನ್ನು ಪೋಖ್ರಾನ್ನಲ್ಲಿರುವ ರಾಜ್ಯ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಮರಣೋತ್ತರ ನಂತರ ಬಿಎಸ್ಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ.
ಇದು ಒಂದು ವಾರದಲ್ಲಿ ನಡೆದ ಎರಡನೇ ಘಟನೆ. ಇದಕ್ಕೂ ಮೊದಲು, ಅಭ್ಯಾಸದ ಅವಧಿಯಲ್ಲಿ ಓರ್ವ ಯೋಧ ಪ್ರಾಣ ಕಳೆದುಕೊಂಡಿದ್ದರು.