ETV Bharat / bharat

ಒಂದೇ ಕುಟುಂಬದ ನಾಲ್ವರು ಸಾವು.. ಜಮೀನು ವಿವಾದ ಹಿನ್ನೆಲೆ ಕೊಲೆ ಶಂಕೆ - murder of four people

ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸ್​ಗಢದ ಕುಮ್ಹಾರಿಯಲ್ಲಿ ನಡೆದಿದೆ. ಮೃತನ ಸಹೋದರ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

durg murder
ಜಮೀನು ವಿವಾದ ಹಿನ್ನೆಲೆ ಕೊಲೆ ಶಂಕೆ
author img

By

Published : Sep 29, 2022, 1:57 PM IST

ದುರ್ಗ (ಛತ್ತೀಸ್​ಗಢ): ಜಿಲ್ಲೆಯ ಕುಮ್ಹಾರಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುಟುಂಬದ ಯಜಮಾನ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲ್ಲಲಾಗಿದೆ. ಕುಮ್ಹಾರಿ ಪೊಲೀಸ್ ಠಾಣೆಯ ಕಪ್ಸದ ಗ್ರಾಮದ ಅಕೋಲ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಮೃತ ವ್ಯಕ್ತಿಯ ಸಹೋದರನ ಮೇಲೆ ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತರನ್ನು ಭೋಲನಾಥ್ ಯಾದವ್ (34), ಪತ್ನಿ ನೈಲಾ ಯಾದವ್ (30), ಮಗ ಪರಮದ್ ಯಾದವ್ (12), ಮಗಳು ಮುಕ್ತಾ ಯಾದವ್ (7) ಎಂದು ಗುರುತಿಸಲಾಗಿದೆ. ಭೋಲಾನಾಥ್ ಯಾದವ್ ಕಳೆದ 12 ವರ್ಷಗಳಿಂದ ಕುಮ್ಹಾರಿಯ ಬರಿಯಲ್ಲಿ ವಾಸಿಸುತ್ತಿದ್ದರು. ಇವರು ಮೂಲತಃ ಬಲಂಗೀರ್ ಗ್ರಾಮದ ದೀರ್ಗಾ ಸಿಂಧಿ ಕಲಾ ಒಡಿಶಾದವರು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ವಿಕಲ ಚೇತನ ಯುವತಿ ಮೇಲೆ ಅತ್ಯಾಚಾರ, ಒಂದೇ ಕುಟುಂಬದ ಐವರನ್ನು ಕೊಲೆ ಮಾಡಿದ ಹಂತಕರು!

ದುರ್ಗ ಎಸ್ಪಿ ಅಭಿಷೇಕ್ ಪಲ್ಲವ ಮಾತನಾಡಿ, ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಈ ಕೊಲೆ ಹಿಂದೆ ಮೃತ ವ್ಯಕ್ತಿಯ ಸಹೋದರನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ದೇಹದಲ್ಲಿ ಗಾಯದ ಗುರುತುಗಳಿವೆ, ಕತ್ತು ಹಿಸುಕಿದ ಗುರುತುಗಳು ಕಾಣಿಸುತ್ತಿಲ್ಲ. ಜಮೀನು ವಿವಾದ ಈ ಕೊಲೆಗೆ ಕಾರಣ ಇರಬಹುದು. ರಾತ್ರಿ 8.30 ರಿಂದ ರಾತ್ರಿ 10.00 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.