ETV Bharat / bharat

2024ರ ಚುನಾವಣೆಯ ನಂತರ ಕೇಂದ್ರದಲ್ಲಿ ಬಿಆರ್​ಎಸ್​ ಸರ್ಕಾರ ರಚಿಸಲಿದೆ: ಕೆಸಿಆರ್‌ - ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್

ರಾಜ್ಯದಲ್ಲಿ 2021ರಲ್ಲಿ ಪ್ರಾರಂಭವಾದ ದಲಿತ ಬಂಧು ಯೋಜನೆಯು ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಉದ್ಯಮ ಪ್ರಾರಂಭಿಸಲು 100 ಪ್ರತಿಶತ ಅನುದಾನವಾಗಿ 10 ಲಕ್ಷ ರೂಗಳನ್ನು ನೀಡಿದೆ ಎಂದು ತೆಲಂಗಾಣ ಸಿಎಂ​ ತಿಳಿಸಿದರು.

ಸಿಎಂ ಕೆ ಚಂದ್ರಶೇಖರ್ ರಾವ್​
ಸಿಎಂ ಕೆ ಚಂದ್ರಶೇಖರ್ ರಾವ್​
author img

By

Published : Apr 14, 2023, 8:34 PM IST

Updated : Apr 14, 2023, 9:24 PM IST

ಹೈದರಾಬಾದ್: 2024ರ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಬಿಆರ್‌ಎಸ್ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ದಲಿತ ಬಂಧು ಯೋಜನೆ ಜಾರಿಗೊಳಿಸಲಾಗುವುದು. 2021ರಲ್ಲಿ ಪ್ರಾರಂಭವಾದ ಯೋಜನೆಯು ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಉದ್ಯಮ ಪ್ರಾರಂಭಿಸಲು ಅನುದಾನವಾಗಿ 10 ಲಕ್ಷ ರೂ. ನೇರ ಲಾಭ ವರ್ಗಾವಣೆ ಯೋಜನೆಯಡಿ ನೀಡಿದೆ. ಈ ಹಣವನ್ನು ಮರುಪಾವತಿಸಬೇಕಿಲ್ಲ ಎಂದು ಪ್ರಕಟಿಸಿದರು.

ನಗರದ ಹೃದಯಭಾಗವಾದ ಹುಸೇನ್​ಸಾಗರ್​ನಲ್ಲಿ ಸ್ಥಾಪಿಸಲಾಗಿರುವ ಬಿ.ಆರ್.ಅಂಬೇಡ್ಕರ್ ಅವರ ಬೃಹತ್ 125 ಅಡಿ ಎತ್ತರದ ಪ್ರತಿಮೆಯನ್ನು ಇಂದು ಅನಾವರಣಗೊಳಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಕೆಸಿಆರ್‌ ಮಾತನಾಡಿದರು. ಬಿಆರ್‌ಎಸ್ ಪಕ್ಷಕ್ಕೆ ಮಹಾರಾಷ್ಟ್ರದಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶದಿಂದಲೂ ಇದೇ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸುತ್ತಿದೆ ಎಂದು ಹೇಳಿದರು.

  • #WATCH | Telangana CM K Chandrashekar Rao unveils the 125 ft-tall statue of Dr BR Ambedkar in Hyderabad. Dr BR Ambedkar's grandson and Vanchit Bahujan Aaghadi president, Prakash Ambedkar also here.

    (Video Source: Telangana State Media) pic.twitter.com/Yv2yXHh0a3

    — ANI (@ANI) April 14, 2023 " class="align-text-top noRightClick twitterSection" data=" ">

ಇದನ್ನೂ ಓದಿ : ಸಾಲ ಪಡೆಯುವಲ್ಲಿ ಅಸ್ಸೋಂ ಸರ್ಕಾರದ ದಾಖಲೆ: ಇಂದು ಅಸ್ಸೋಂಗೆ ಪ್ರಧಾನಿ ಮೋದಿ ಭೇಟಿ

2024ರ ಸಂಸತ್ ಚುನಾವಣೆಯಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ನಮ್ಮ ಕೆಲವು ಶತ್ರುಗಳಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ಆದರೆ ನಾವು ಬೆಳಗಲು ಒಂದು ಕಿಡಿ ಸಾಕು ಎಂದರು.

ಇದನ್ನೂ ಓದಿ: ಅಂಬೇಡ್ಕರ್ ಜ್ಞಾನ ಮತ್ತು ಸಾಧನೆಯ ಪ್ರತೀಕ: ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್​, ಪ್ರಧಾನಿಯಿಂದಲೂ ನಮನ

146 ಕೋಟಿ ರೂ ವೆಚ್ಚದಲ್ಲಿ ಅಂಬೇಡ್ಕರ್ ಪ್ರತಿಮೆ: ಇದಕ್ಕೂ ಮುನ್ನ ಹೆಲಿಕಾಪ್ಟರ್‌ ಮೂಲಕ ಅಂಬೇಡ್ಕರ್‌ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. 146.50 ಕೋಟಿ ರೂ ವೆಚ್ಚದ ಈ ಪ್ರತಿಮೆಯನ್ನು 360 ಟನ್ ಸ್ಟೇನ್‌ಲೆಸ್ ಸ್ಟೀಲ್ ಮತ್ತು 114 ಟನ್ ಕಂಚಿನಿಂದ ನಿರ್ಮಿಸಲಾಗಿದೆ.

ಇದನ್ನೂ ಓದಿ : ಅಂಬೇಡ್ಕರ್ ಜನ್ಮದಿನ.. ಹೈದರಾಬಾದ್‌ನಲ್ಲಿ 'ಸಂವಿಧಾನ ಶಿಲ್ಪಿ'ಯ 125 ಅಡಿ ಎತ್ತರದ ಪ್ರತಿಮೆ ಅನಾವರಣ

Last Updated : Apr 14, 2023, 9:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.