ETV Bharat / bharat

ಮಹಿಳಾ ಮೀಸಲಾತಿ ಮಸೂದೆ ಮಾಜಿ ಪಿಎಂ ದೇವೇಗೌಡರ ಕನಸಿನ ಕೂಸು: ಬಿಆರ್​ಎಸ್​ - BRS MLC K Kavitha

ಮಹಿಳಾ ಮೀಸಲಾತಿ ಮಸೂದೆ ತನ್ನದೆಂದು ಕಾಂಗ್ರೆಸ್​ ಹೇಳುತ್ತಿದ್ದರೆ, ಇದನ್ನು ಟೀಕಿಸಿರುವ ಬಿಆರ್​ಎಸ್​ ಮಾಜಿ ಪ್ರಧಾನಿ ದೇವೇಗೌಡರ ಕನಸಿನ ಕೂಸು ಎಂದು ಹೇಳಿದೆ.

ಮಹಿಳಾ ಮೀಸಲಾತಿ ಮಸೂದೆ
ಮಹಿಳಾ ಮೀಸಲಾತಿ ಮಸೂದೆ
author img

By ETV Bharat Karnataka Team

Published : Sep 18, 2023, 5:46 PM IST

ಹೈದರಾಬಾದ್: ಬಹುಚರ್ಚಿತ ಮಹಿಳಾ ಮೀಸಲಾತಿ ಮಸೂದೆಯ ಕ್ರೆಡಿಟ್​ ವಾರ್​ ಶುರುವಾಗಿದೆ. ಇದನ್ನು ಕಾಂಗ್ರೆಸ್​ ತನ್ನ ಕನಸಿನ ಕೂಸು ಎಂದಿದ್ದರೆ, ಮಾಜಿ ಪ್ರಧಾನಿ, ಜೆಡಿಎಸ್​ ಹಿರಿಯ ನಾಯಕ ಹೆಚ್​ಡಿ ದೇವೇಗೌಡರಿಗೆ ಇದರ ಹಿರಿಮೆ ಸಲ್ಲಬೇಕು ಎಂದು ತೆಲಂಗಾಣದ ಭಾರತ್​ ರಾಷ್ಟ್ರೀಯ ಸಮಿತಿ (ಬಿಆರ್​ಎಸ್​) ಹೇಳಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬಿಆರ್‌ಎಸ್ ಪಕ್ಷದ ಎಂಎಲ್‌ಸಿ ಕೆ ಕವಿತಾ ಅವರು, ಮಹಿಳಾ ಮೀಸಲಾತಿಯನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು, ಬಳಿಕ ಅದನ್ನು ಕಾಂಗ್ರೆಸ್​ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮಸೂದೆ ರೂಪಿಸಿ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತು. ಹೀಗಾಗಿ ಅವರು ಅದರ ಶ್ರೇಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಕಳೆದ 16 ವರ್ಷಗಳಿಂದ ಕಾಂಗ್ರೆಸ್ ಈ ಬಗ್ಗೆ ಒಂದೇ ಒಂದು ಮಾತನ್ನೂ ಸಹ ಆಡಲಿಲ್ಲ. ಮಸೂದೆ ಮಂಡಿಸುವ, ಅಂಗೀಕರಿಸುವ ಬಗ್ಗೆ ಎಲ್ಲಿಯೂ ಚರ್ಚಿಸಿಲ್ಲ. 2019 ರ ಚುನಾವಣೆಯ ಪ್ರಣಾಳಿಕೆಯಲ್ಲೂ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ನಮೂದಿಸಲಿಲ್ಲ. ಇದೀಗ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಮಸೂದೆಯ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

  • #WATCH | Hyderabad: "It is a brainchild of Deve Gowda and he tried his best to introduce it then the Congress party said that they would try their luck, they did and they passed it in Rajya Sabha, that credit we all always gave to Sonia Gandhi. Now in the last 16 years, however,… pic.twitter.com/dZ5IyZiMx0

    — ANI (@ANI) September 18, 2023 " class="align-text-top noRightClick twitterSection" data=" ">

ತೆಲಂಗಾಣ ಸಿಎಂ ಕೆ ಚಂದ್ರಶೇಖರ್​ರಾವ್​ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಿ ಎಂದು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದರಿಂದ ಬೆದರಿರುವ ಕಾಂಗ್ರೆಸ್​ ರಾಜ್ಯದಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅನಿವಾರ್ಯವಾಗಿ ಮೀಸಲಾತಿ ಪರ ನಿರ್ಣಯ ಕೈಗೊಂಡಿದ್ದಾರೆ ಎಂದು ಕವಿತಾ ಅವರು ಹೇಳಿದರು.

ಗ್ಯಾರಂಟಿಗಳು ಚುನಾವಣಾ ಗಿಮಿಕ್​; ಚುನಾವಣೆ ಗಿಮಿಕ್​ಗಾಗಿ ತೆಲಂಗಾಣದಲ್ಲಿ ಕಾಂಗ್ರೆಸ್​ 6 ಗ್ಯಾರಂಟಿಗಳನ್ನು ಘೋಷಿಸಿದೆ. ಇವೆಲ್ಲವನ್ನೂ ಜಾರಿ ಮಾಡಲು ಸಾಧ್ಯವಿಲ್ಲ. ಇದು ತೆಲಂಗಾಣ ಜನತೆಗೆ ಗೊತ್ತಿದೆ. ಈ ಹಿಂದಿನಿಂದಲೂ ಆ ಪಕ್ಷ ಜನರಿಗೆ ಮೋಸ ಮಾಡುತ್ತಾ ಬಂದಿದೆ. ನಾವು ಆಂಧ್ರದೊಂದಿಗೆ ವಿಲೀನಗೊಳ್ಳಲು ಬಯಸಲಿಲ್ಲ. ಆದರೂ ಬಲವಂತವಾಗಿ ಆಂಧ್ರದೊಂದಿಗೆ ವಿಲೀನಗೊಳಿಸಿದರು ಎಂದು ಕಿಡಿಕಾರಿದರು.

ಮೀಸಲಾತಿ ಮಸೂದೆ ಮಂಡಿಸಲು ಕಾಂಗ್ರೆಸ್​ ಆಗ್ರಹ: ಇಂದಿನಿಂದ ಆರಂಭವಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಬೇಕು ಎಂದು ಕಾಂಗ್ರೆಸ್​ ಒತ್ತಾಯಿಸಿದೆ. ಈ ಮೀಸಲಾತಿ ಕಾಂಗ್ರೆಸ್​ನ ಕೂಸು, ಬಿಜೆಪಿಯವರಿಗೆ ಮಹಿಳೆಯವರ ಮೇಲೆ ಗೌರವ ಇದ್ದರೆ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕಾರ ಪಡೆದುಕೊಳ್ಳಲಿ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಪರ ಕಾಂಗ್ರೆಸ್​ ಬ್ಯಾಟಿಂಗ್​.. ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಕೇಂದ್ರಕ್ಕೆ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.